Story/Poem

ಶ್ರೀದೇವಿ ಕೆರೆಮನೆ

ಉತ್ತರ ಕನ್ನಡ ಜಿಲ್ಲೆ  ಹಿರೇಗುತ್ತಿ ಮೂಲದ  ಶ್ರೀದೇವಿ ಕೆರೆಮನೆ ವೃತ್ತಿಯಿಂದ ಪ್ರೌಢಶಾಲಾ ಶಿಕ್ಷಕಿ. ಸಾಹಿತ್ಯ ರಚನೆ ಹವ್ಯಾಸ. ಮೊದಲ ಕವನ ಸಂಕಲನ ’ನಾನು ಗೆಲ್ಲುತ್ತೇನೆ’. ಬಳಿಕ ’ಗೆಜ್ಜೆ ಕಟ್ಟದ ಕಾಲಲ್ಲಿ’,’ಮೌನದ ಮಹಾ ಕೋಟೆಯೊಳಗೆ’, ’ಮೈ ಮುಚ್ಚಲೊಂದು ತುಮಡು ಬಟ್ಟೆ’, ಕೃತಿಗಳು ಬಂದವು. ಅಂಗೈಯೊಳಗಿನ ಬೆಳಕು(ವಿಮರ್ಶಾ ಸಂಕಲನ), ’ಅಲೆಯೊಳಗಿನ ಮೌನ’, ’ನನ್ನ ದನಿಗೆ ನಿನ್ನ ದನಿಯು’ ಗಜಲ್‌ ಕೃತಿ. ’ಬೈಟೂ’ ಚಹಾ ಕುರಿತ ಸಂಕಲನವಾದರೆ ಬಿಕ್ಕೆಹಣ್ಣು, ಚಿತ್ತ ಚಿತ್ತಾರ ಅವರ ಕತೆಗಳ ಗುಚ್ಛ. ಗೂಡು ಕಟ್ಟುವ ಸಂಭ್ರಮದಲ್ಲಿ (ಪ್ರಬಂಧ ಬರಹ ಸಂಕಲನ).

’ಪ್ರೀತಿ ಎಂದರೆ ಇದೇನಾ?, ಹೆಣ್ತನದ ಆಚೆ ಈಚೆ, ಉರಿವ ಉಡಿ, ಮನದಾಳದ ಮಾತು, ವರ್ತಮಾನದ ಉಯ್ಯಾಲೆ ಇವು ಅಂಕಣ ಬರಹದ ಸಂಗ್ರಹಗಳು.

ರಾಜೀವ್ ಗಾಂಧಿ ಸದ್ಭಾವನಾ ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪುರಸ್ಕಾರ, ಶ್ರೀಗಂಧ ಹಾರ ಪ್ರಶಸ್ತಿ, ಬಸವರಾಜ ಕಟ್ಟಿಮನಿ ಪ್ರಶಸ್ತಿ, ಬೇಂದ್ರೆ ಗ್ರಂಥ ಪುರಸ್ಕಾರ, 2020ನೇ ಶ್ರೀವಿಜಯ ಸಾಹಿತ್ಯ ಪ್ರಶಸ್ತಿ, ಸಾರಾ ಅಬೂಬ್ಕರ ಪ್ರಶಸ್ತಿ , ಸುಮನಾ ಸೋಮಶೇಖರ ಸೋಮವಾರಪೇಟೆ ದತ್ತಿ ಪ್ರಶಸ್ತಿ ‌, ದೇವಾಂಗನಾ ಶಾಸ್ತ್ರಿ ಕಥಾ ಪ್ರಶಸ್ತಿ , ಅಂತರಾಷ್ಟ್ರೀಯ ಮಹಿಳಾ ವರ್ಷದ ದತ್ತಿ ಪ್ರಶಸ್ತಿ -2021,  ಹೇಮರಾಜ ದತ್ತಿ ಪ್ರಶಸ್ತಿ,  ಕ್ರೈಸ್ತ ಕಾಲೇಜು ಪ್ರಶಸ್ತಿ, ಬಿ.ಎಂ.ಶ್ರೀ ಕಾವ್ಯ ಪ್ರಶಸ್ತಿ ಅವರಿಗೆ ಇದುವರೆಗೆ ಸಂದ ಗೌರವಗಳು. 

More About Author

Story/Poem

ಒಡಲಾಗ್ನಿಯ ನುಡಿ

ಮೈ ಮೇಲೆ ಬಟ್ಟೆಯಿರುವಾಗಲೇ ಬೆತ್ತಲಾಗಿಸಿ ಅಳೆದು ತೂಗುವ ಕಣ್ಣುಗಳೇ ಬಿಚ್ಚಿಸಿ ಆಸ್ವಾದಿಸುವ ಆತುರವೇಕೆ ಸಾಕಾಗಲಿಲ್ಲವೇ ಅಂಕು ಡೊಂಕಿನ ಮಾಟದ ದೇಹದ ಉಬ್ಬುತಗ್ಗಿನ ನೋಟ? ಬಟ್ಟೆ ಬಿಚ್ಚಲು ಹಿಂಸಿಸುವ ಮುನ್ನ ನೆನಪಾಗಲಿಲ್ಲವೇ ಅಂತಹುದ್ದೇ ದೇಹವೊಂದು ತನ್ನೊಡಲಲ್ಲಿ ತನ್ನದೇ ರಕ್ತ ಕೊಟ್ಟ...

Read More...

ಉಡುಗೊರೆ

  ಏನು ಉಡುಗೊರೆ ಕೊಡಲಿ ನಿನ್ನ ಹುಟ್ಟಿದ ದಿನಕೆ ಕೇಳುತ್ತಾನೆ ಹುಬ್ಬು ಹಾರಿಸುತ್ತ ತುಳುಕಿಸುತ್ತ ಕಣ್ಣಲ್ಲಿ ತುಂಟತನ ಪ್ರತಿ ವರ್ಷದಂತೆ ಈ ವರ್ಷವೂ ನಾನೂ ಮಾತನಾಡದೇ ಸುಮ್ಮನೆ ಮುಗುಳ್ನಗುತ್ತೇನೆ ಯಾವತ್ತಿನಂತೆ ಇದು ವರ್ಷ ವರ್ಷವೂ ನಡೆಯುವ ಮಾಮೂಲಿ ಮಾತುಕತೆ ...

Read More...