Book Watchers

ಮೌನೇಶ್ ಎಲ್. ಬಡಿಗೇರ್

ಮೌನೇಶ್ ಎಲ್. ಬಡಿಗೇರ್ ಹಲವು ಕತೆಗಳನ್ನು ರಚಿಸಿದ್ದಾರೆ. ರಂಗಭೂಮಿಯ ಹಿನ್ನೆಲೆಯಿಂದ ಕನ್ನಡ ಚಿತ್ರರಂಗದಲ್ಲೂ ಹೆಸರು ಮಾಡಿರುವ ಅವರು ‘ಸೂಜಿದಾರ’ ಚಿತ್ರದ ಮೂಲಕ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಕನ್ನಡ ಸಾಹಿತ್ಯಲೋಕ, ರಂಗಭೂಮಿ, ಮತ್ತು ಸಿನಿಮಾ ಕ್ಷೇತ್ರಗಳಲ್ಲೂ ಸೃಜನಾತ್ಮಕವಾಗಿ ತೊಡಗಿಕೊಂಡಿದ್ದಾರೆ.

Articles

ಹಲವು ಕ್ಷೇತ್ರಗಳನ್ನು ಮುಖಾಮುಖಿಯಾಗಿಸಿರುವ ಕಾದಂಬರಿ ‘ಅಂತು’

ಇಂದಿನ ಮಾರ್ಕೆಟಿಂಗ್ ಲೋಕದಲ್ಲಿ ಪುನರ್ಜನ್ಮ ಎಂಬ ಧಾರ್ಮಿಕ ಅಥವಾ ದಾರ್ಶನಿಕ ನಂಬುಗೆಯನ್ನು ಹೇಗೆ ಪ್ರಾಡಕ್ಟ್ ಮಾಡಿಕೊಳ್ಳಬಹುದು ಎಂದು ಹೊರಡುವ ಕಂಪನಿಯೊಂದರ ಕಥಾನಕ ಎಂದು ಒಂದೇ ವಾಕ್ಯದಲ್ಲಿ ಕಾದಂಬರಿಯ ಕಥೆಯನ್ನು ಹೇಳಿಬಿಡಬಹುದಾದರೂ ಅದನ್ನು ಮೀರಿದ ಹಲವು ಧಾರೆಗಳು ಸುಮಾರು ೨೦೦ ಪುಟಗಳಲ್ಲಿ ಹರಡಿಕೊಂಡಿದೆ. ಬರೀ ಅದಷ್ಟೆ ಇದರ ಉದ್ದೇಶವಾಗಿದ್ದರೆ ಒಂದು ಸಣ್ಣಕತೆಯಲ್ಲಿ ಈ ಕಥಾನಕವನ್ನು ಮುಗಿಸಿಬಿಡಬಹುದಿತ್ತು. ಆದರೆ ಪ್ರಕಾಶ್ ನಾಯಕರ ನಿರೂಪಣೆ, ಪಾತ್ರಗಳ ಶಿಲ್ಪ, ಸ್ಥಳ, ಸಂಧರ್ಭಗಳ ವಿವರಣೆ ಎಲ್ಲವೂ ಈ ಕಥಾನಕವನ್ನು ೨೦೦ ಪುಟಗಳ ಧೀರ್ಘ ಕಾದಂಬರಿಯನ್ನಾಗಿ ಮಾಡಿದೆ.

Read More...

ತೇಜೋ ತುಂಗಭದ್ರಾ

ಧರ್ಮ ಈ ಕಾದಂಬರಿಯ ದೇಹವಾದರೆ, ಅನ್ನ ಇದರ ಜೀವ! ಹಾಗಾಗಿಯೇ ಬೇಂದ್ರೆಯವರ ಮೇಲಿನ ಪ್ರಸಿದ್ಧ ಸಾಲು ನೆನಪಾಯಿತು; ಮತ್ತದು ಇಡೀ ಕಾದಂಬರಿಯ ಆಶಯಕ್ಕೆ ಕಲಶವಿಟ್ಟಂತಿದೆ!

Read More...