Book Watchers

ಆರ್. ದಿಲೀಪ್ ಕುಮಾರ್

ಆರ್. ದಿಲೀಪ್ ಕುಮಾರ್ ಅವರ ಹುಟ್ಟಿದ್ದು1991 ರ ಮಾರ್ಚ್ 16ರಂದು ಮೈಸೂರಿನಲ್ಲಿ. ಮೈಸೂರುನಲ್ಲಿ ಕೆಲವು ಕಾಲ ಇದ್ದು ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿ ಶಿಕ್ಷಣವನ್ನು ಸರಕಾರಿ ಪದವಿ ಕಾಲೇಜು ಚಾಮರಾಜನಗರದಲ್ಲೂ, ಕನ್ನಡ ಸ್ನಾತಕೋತ್ತರದ ಪದವಿಯನ್ನು ಕನ್ನಡ ಸ್ನಾತಕೋತ್ತರ ಕೇಂದ್ರ , ಜೆ ಎಸ್ ಎಸ್ ಕಾಲೇಜು , ಚಾಮರಾಜನಗರದಲ್ಲೂ, ಬಿ ಎಡ್ ಪದವಿಯನ್ನು ಜೆ.ಎಸ್.ಎಸ್ ಶಿಕ್ಷಣ ಮಹಾವಿದ್ಯಾಲಯ ಚಾಮರಾಜನಗರದಲ್ಲೂ ಪಡೆದಿದ್ದಾರೆ. ನಾಲಕ್ಕು ವರ್ಷಗಳು ಚಾಮರಾಜನಗರ, ಕೊಳ್ಳೇಗಾಲ, ಗುಂಡ್ಲುಪೇಟೆಗಳಲ್ಲಿನ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

Articles

ಹೂದೋಟದಲ್ಲಿ ಹೆಜ್ಜೆಗಳ ಸಪ್ಪಳ 

ಚಿತ್ರಲಿಪಿಗೂ ಭಾರತೀಯರ ಅಕ್ಷರ ಲಿಪಿಗೂ ಬಹಳ ವ್ಯತ್ಯಾಸದ ಜೊತೆಗೆ, ಸಂಸ್ಕೃತಿಯಲ್ಲಿನ ವಿಭಿನ್ನತೆ ಒಂದಷ್ಟು ಸಾಮ್ಯತೆಗಳಿದ್ದರೂ ದೊಡ್ಡ ಪ್ರಮಾಣದಲ್ಲಿ‌ ಹೇರಿಕೆ ಆಗಿಲ್ಲದಿರುವುದು, ನಮ್ಮ ಸಾಹಿತ್ಯ ವಲಯ ಆ ಕಲಾ ಪರಂಪರೆಯನ್ನು ಗಮನಿಸುವಂತೆ ಮಾಡಿದೆ.  

Read More...