About the Author

ಅಶೋಕ ನರೋಡೆ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾದ ಅಶೋಕ ಮುರಿಗೆಪ್ಪ ನರೋಡೆ, ಬೆಳಗಾವಿಯ ಅಥಣಿಯಲ್ಲಿ 1965 ಮಾರ್ಚಿ 01 ರಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರು, ಕವಿಗಳು, ಸಂಶೋಧಕರು. ಮಹಾಲಿಂಗಪುರದ ಕಲಾ ಹಾಗೂ ಡಿ.ಡಿ.ಎಸ್, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ‘ಏಕಲವ್ಯನ ಪಾತ್ರ : ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ‘ರನ್ನ ವಿಚಾರ ವೇದಿಕೆ, ಕಾವ್ಯ ಕಾರಂಜಿ, ಅಪೂರ್ವ ಪ್ರಕಾಶನಗಳಂತಹ ಸಂಸ್ಥೆಗಳ - ಸಂಘಟಕರು. ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಹೊಸಗನ್ನಡ ಕಾವ್ಯ ಸಂಚಯ ಪಠ್ಯಗ್ರಂಥವೂ ಆಗಿದೆ. 

‘ಬೇಡಿಕೆ, ಆಸ್ಫೋಟ, ನದಿ ಮತ್ತು ನಾನು, ಮಧುರ ಕ್ಷಣ, ಚಳಿಗಾಲದ ಮುಂಜಾವು’ ಅವರ ಕವನ ಸಂಕಲನಗಳು. ‘ಕಾಯಕ ಮತ್ತು ದಾಸೋಹ, ಕನ್ನಡ ಕಾವ್ಯಕ್ಕೆ ಬಿಜಾಪುರ ಜಿಲ್ಲೆಯ ಕೊಡುಗೆ, ವಚನ ಚಳವಳಿ ಕೆಲವು ಅಧ್ಯಯನಗಳು, ಪರಾಮರ್ಶ, ಉತ್ತರ ಕರ್ನಾಟಕದ ಪ್ರಸಿದ್ದ ಗೀಗೀ ಮೇಳಗಳು’ ಅವರ  ವಿಮರ್ಶಾ ಕೃತಿ. ‘ಸಮಾಜ ಸೇವಕ ರಾಯಪ್ಪ ದೇಶ ತೋಟ. ಪಾರಿಜಾತದ ಅಪೂರ್ವ ಕಲಾವಿದೆ, ಸಾರ್ಥಕ ಪಿ.ಜಿ.ಅಂಗಡಿ, ಬಡವರ ಬಂಧು ಎಸ್.ಡಿ. ಕುಮಾನಿ. ಕೌಜಲಗಿ ನಿಂಗಮ್ಮ, ಸಾಧಕ ಜೀವಿ ಗುಡ್ಡಮನಿ’ ಅವರ ಜೀವನ ಚರಿತ್ರೆಯನ್ನು ಬರೆದಿದ್ಧಾರೆ. ‘ಶತಮಾನೋತ್ಸವ, ಹುಲಿಯಾಳ, ಲಕ್ಷ ದೀಪೋತ್ಸವ, ಅರವಿಂದ ತಿರಕಪಡಿ ಕವಿತೆಗಳು, ಬಹುಪರಾಕ್‌ಗಳು’ ಇತ್ಯಾದಿ ಸಂಪಾದಿತ ಕೃತಿಗಳು.

ಅವರ 'ಬೇಡಿಕೆ' - ಕೃತಿಗೆ ಧಾರವಾಡದ ಯುವ ವಾಹಿನಿ ಪ್ರಶಸ್ತಿ, 'ಮೊದಲ ಮಳೆ' - ಹನಿಗವನ, ಸಂಕ್ರಮಣ ಸಾಹಿತ್ಯ ಸ್ಪರ್ಧಾ ಪ್ರಶಸ್ತಿ, ವಚನ ಸಾಹಿತ್ಯ ಕೆಲವು ಅಧ್ಯಯನಗಳು - ಚಿತ್ರದುರ್ಗದ ಬೃಹನ್ಮಠ ದತ್ತಿ ನಿಧಿ ಪ್ರಶಸ್ತಿ, ಉ.ಕ.ದ. ಪ್ರಸಿದ್ಧ ಗೀಗೀ ಮೇಳಗಳು - ಆದಿ ಚುಂಚನಗಿರಿ ದತ್ತಿನಿಧಿ ಕೇಂದ್ರ ಕ.ಸಾ.ಪ. ಪ್ರಶಸ್ತಿ, ಕೌಜಲಗಿ ನಿಂಗಮ್ಮ - ಕೇಂದ್ರ ಕ.ಸಾ.ಪ. ಪ್ರಶಸ್ತಿ, ಸಮಾಲೋಕನ - ಕೃತಿಗೆ ಹಾರೋಗೇರಿಯ ಆಜೂರ ಪುಸ್ತಕ ಪ್ರತಿಷ್ಠಾನ ಪ್ರಶಸ್ತಿಗಳು ಲಭಿಸಿವೆ.

ಅಶೋಕ ನರೋಡೆ

(01 Mar 1965)