ರಾಜರಶ್ಮಿ

Author : ಅಶೋಕ ನರೋಡೆ

Pages 532

₹ 410.00




Year of Publication: 2017
Published by: ಎಸ್.ಎಲ್.ಎನ್. ಪಬ್ಲಿಕೇಷನ್ಸ್
Address: # 3437, 1ನೇ ಮಹಡಿ, 4ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಶಾಸ್ತ್ರಿನಗರ, ಬನಶಂಕರಿ 2 ಹಂತ, ಬೆಂಗಳೂರು-560028
Phone: 9872129376

Synopsys

ಡಾ. ರಾಜಶೇಖರ ಇಚ್ಚಂಗಿ ಅವರ ಬದುಕು -ಬರಹ ಕುರಿತ ಅಭಿನಂದನ ಗ್ರಂಥ-ರಾಜರಶ್ಮಿ. ಸಾಹಿತಿಗಳಾದ ಡಾ. ವಿ.ಎಸ್. ಮಾಳಿ ಹಾಗೂ ಡಾ. ಅಶೋಕ ನರೋಡೆ ಅವರ ಸಂಪಾದಕತ್ವದಲ್ಲಿ ಈ ಕೃತಿ ಪ್ರಕಟಗೊಂಡಿದೆ. ಅಧ್ಯಯನ ಶ್ರದ್ಧೆ, ಪ್ರಾಮಾಣಿಕತೆ, ಬರಹದ ಬದ್ಧತೆ, ಬದುಕಿನ ಪರಿಶುದ್ಧತೆ ಹಾಗೂ ಹೊಸತನದ ತುಡಿತದ ಕ್ರಿಯಾಶೀಲತೆ ಇವು ಡಾ. ರಾಜಶೇಖರ ಇಚ್ಚಂಗಿ ಅವರ ಸಾರ್ಥಕ ಜೀವನದ ಪಂಚಪ್ರಾಣಗಳು. ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಬಟ್ಟೂರು ಗ್ರಾಮದ ರಾಜಶೇಖರ ಇಚ್ಚಂಗಿ ಅವರು ಒಟ್ಟು 28 ಕೃತಿಗಳನ್ನು ರಚಿಸಿದ್ದು, ದಣಿವರಿಯದ ನಿರಂತರ ದುಡಿಮೆಯಿಂದ ಸಾಹಿತ್ಯ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿದವರು. ಇಡೀ ಗ್ರಂಥವನ್ನು ನಾಲ್ಕು ಪ್ರಮುಖ ವಿಭಾಗಗಳನ್ನಾಗಿಸಿ, ಮೊದಲೆರಡು ಭಾಗಗಳು ಕ್ರಮವಾಗಿ, .ಡಾ. ಇಚ್ಚಂಗಿ ಅವರ ವ್ಯಕ್ತಿತ್ವ ಹಾಗೂ ಸಾಹಿತ್ಯವನ್ನು ದರ್ಶಿಸುತ್ತವೆ. ಮೂರನೇ ಭಾಗದಲ್ಲಿ ಬೆಳಗಾವಿ ಜಿಲ್ಲೆಯ ಸಂಶೋಧನ ರಶ್ಮಿ, ನಮ್ಮ ಜಿಲ್ಲೆಯ ಶೋಧ, ಮಾರ್ಗದ ಸ್ಥೂಲ ಸಮೀಕ್ಷೆ ಇದೆ. ನಾಲ್ಕನೇ ಭಾಗದಲ್ಲಿ ಚಿತ್ರಸಂಪುಟವಿದೆ. ಇಚ್ಚಂಗಿಯವರ ಬದುಕಿನ ವಿಭಿನ್ನ ಮಜಲುಗಳನ್ನು ಪ್ರತಿಮಿಸುವ ಅಪರೂಪದ ದೃಶ್ಯಗಳು ಈ ಸಂಪುಟದಲ್ಲಿವೆ ಎಂದು ಸಂಪಾದಕರು ತಮ್ಮ ಪ್ರಸ್ತಾವನೆಯಲ್ಲಿ ಹೇಳಿದ್ದಾರೆ.

About the Author

ಅಶೋಕ ನರೋಡೆ
(01 March 1965)

ಅಶೋಕ ನರೋಡೆ ಎಂದೇ ಸಾಹಿತ್ಯ ಕ್ಷೇತ್ರದಲ್ಲಿ ಪರಿಚಿತರಾದ ಅಶೋಕ ಮುರಿಗೆಪ್ಪ ನರೋಡೆ, ಬೆಳಗಾವಿಯ ಅಥಣಿಯಲ್ಲಿ 1965 ಮಾರ್ಚಿ 01 ರಲ್ಲಿ ಜನಿಸಿದರು. ಕನ್ನಡ ಪ್ರಾಧ್ಯಾಪಕರು, ಕವಿಗಳು, ಸಂಶೋಧಕರು. ಮಹಾಲಿಂಗಪುರದ ಕಲಾ ಹಾಗೂ ಡಿ.ಡಿ.ಎಸ್, ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ‘ಏಕಲವ್ಯನ ಪಾತ್ರ : ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಕರ್ನಾಟಕ ವಿ.ವಿಯಿಂದ ಪಿಎಚ್.ಡಿ ಪಡೆದಿದ್ದಾರೆ. ‘ರನ್ನ ವಿಚಾರ ವೇದಿಕೆ, ಕಾವ್ಯ ಕಾರಂಜಿ, ಅಪೂರ್ವ ಪ್ರಕಾಶನಗಳಂತಹ ಸಂಸ್ಥೆಗಳ - ಸಂಘಟಕರು. ಸಾಹಿತ್ಯ- ಸಾಂಸ್ಕೃತಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅವರ ಹೊಸಗನ್ನಡ ಕಾವ್ಯ ಸಂಚಯ ಪಠ್ಯಗ್ರಂಥವೂ ಆಗಿದೆ.  ‘ಬೇಡಿಕೆ, ಆಸ್ಫೋಟ, ನದಿ ಮತ್ತು ನಾನು, ಮಧುರ ...

READ MORE

Related Books