About the Author

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ಮಹಿಳಾ ವಿಜ್ಞಾನಿಗಳು. 

ಜೀವನ ಚರಿತ್ರೆ : ನೋವಿಗದ್ದಿದ ಕುಂಚ (ಚಿತ್ರಕಾರ ವ್ಯಾನ್‌ಗೋನ ಜೀವನ ಚರಿತ್ರೆ), ಬೆಳಕಿನೊಂದು ಕಿರಣ (ವಿಜ್ಞಾನಿ ಮೇರಿಕ್ಯೂರಿಯ ಜೀವನ ಚರಿತೆ). ಥಾಮಸ್ ಆಲ್ವಾ ಎಡಿಸನ್ ಮಹಿಳಾ ವಿಜ್ಞಾನಿಗಳು (ನೊಬೆಲ್ ಪ್ರಶಸ್ತಿ ವಿಜೇತರ ವ್ಯಕ್ತಿಚಿತ್ರಗಳು) ಮುಂತಾದವು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರತ್ನಮ್ಮ ಹೆಗಡೆ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಹಾ.ಮಾ. ನಾಯಕ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ. 

ನೇಮಿಚಂದ್ರ

(16 Jul 1959)

Books by Author

Awards

BY THE AUTHOR