ಸಾವೇ ಬರುವುದಿದ್ದರೆ ನಾಳೆ ಬಾ!

Author : ನೇಮಿಚಂದ್ರ

Pages 200

₹ 190.00




Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, , ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-560001
Phone: 2216911

Synopsys

ಆರೋಗ್ಯವೆನ್ನುವುದು ಹೊರಗಿನಿಂದ ತರಿಸಿಕೊಳ್ಳುವಂಥದಲ್ಲ. ಅದು ಒಳಗೆ ತಾನೇ ತಾನಾಗಿ ಬೆಳೆಯುವಂಥದ್ದು, ಅರಳುವಂಥದ್ದು.  ಅದು ನಮ್ಮ ವ್ಯಕ್ತಿತ್ವದ ಜೊತೆಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ  ಎನ್ನುವ ಅರಿವನ್ನು ಈ ಕೃತಿ ನಮಗೆ ನೀಡುತ್ತದೆ.  ನೇಮಿಚಂದ್ರ ಅವರ ಹಿಂದಿನ ಬದುಕು ಬದಲಿಸಬಹುದು ಕೃತಿಯ ಎರಡನೆಯ ಭಾಗವಾಗಿದೆ ಈ ಕೃತಿ. ಹಲವು ಸಾಧಕರನ್ನು ಇಟ್ಟುಕೊಂಡು, ಅವರ ಜೀವನ ಶೈಲಿಯನ್ನು, ಆಶಾದಾಯಕವಾದ ಬದುಕನ್ನು ವಿವರಿಸುತ್ತಾ ನಮ್ಮೊಳಗಿನ ವ್ಯಕ್ತಿತ್ವವನ್ನು ಅರಳಿಸುವ ಕೆಲಸ ಮಾಡುತ್ತದೆ. ಮುಖ್ಯವಾಗಿ ಈ ಕೃತಿ ದೈಹಿಕ ಆರೋಗ್ಯವನ್ನು ಕೇಂದ್ರವಾಗಿಟ್ಟುಕೊಂಡು ಬರೆದಿರುವುದಾದರೂ, ರೋಗವೆನ್ನುವುದನ್ನೂ ಪಾಸಿಟಿವ್ ಕಣ್ಣಿನಲ್ಲಿ ನೋಡುವುದನ್ನು ಕಲಿಸುತ್ತಾರೆ. ನಮ್ಮ ಆರೋಗ್ಯದ ಜವಾಬ್ದಾರಿಯನ್ನು ನಾವು ಹೊತ್ತೊಡನೆ, ನಿರೋಗದ ಹಾದಿಯಲ್ಲಿ ನಮ್ಮ ಮೊದಲ ಹೆಜ್ಜೆ ಆರಂಭವಾಗುತ್ತದೆ ಎನ್ನುವುದನ್ನುಹಲವು ಉದಾಹರಣೆಯೊಂದಿಗೆ ಈ ಕೃತಿ ವಿವರಿಸುತ್ತದೆ. ಕೃತಿಯುದ್ದಕ್ಕೂ ಸಣ್ಣ ಸಣ್ಣದರಲ್ಲಿ ಅಗಾಧತೆಯನ್ನು ಕಾಣಿಸುತ್ತಾರೆ. ನಾವು ಯಾವುದನ್ನು ದೈನಂದಿನ ಬದುಕಿನಲ್ಲಿ ತಿರಸ್ಕರಿಸುತ್ತಾ ಬಂದಿದ್ದೇವೆಯೋ ಅದರಲ್ಲೇ ನಮ್ಮ ಆರೋಗ್ಯವಿದೆ ಎನ್ನುವುದನ್ನು ವಿವರಿಸುತ್ತಾರೆ. ತೀವ್ರ ನೋವಿನ ಹಾದಿ ಸಂತಸದ ತಾಣಕ್ಕೆ ಕರೆದೊಯ್ಯುತ್ತದೆ ಎಂಬ ಭರವಸೆಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.

About the Author

ನೇಮಿಚಂದ್ರ
(16 July 1959)

ಸ್ತ್ರೀವಾದಿ ಚಿಂತಕಿ, ಸಾಹಿತಿ ನೇಮಿಚಂದ್ರ ಅವರು ಜನಿಸಿದ್ದು 1959 ಜುಲೈ 16ರಂದು ಮೂಲತಃ ಚಿತ್ರದುರ್ಗದವರಾದ ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರು. ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಜೀವನುತ್ಸಾಹ ತುಂಬುವಂತಹ ಇವರ ಕೃತಿಗಳೆಂದರೆ ನಮ್ಮ ಕನಸುಗಳಲ್ಲಿ ನೀವಿದ್ದೀರಿ, ಒಂದು ಶ್ಯಾಮಲ ಸಂಜೆ, ನೇಮಿಚಂದ್ರರ ಕಥೆಗಳು, ಸಾವೇ ಬರುವುದಿದ್ದರೆ ನಾಳೆ ಬಾ!, ನನ್ನ ಕಥೆ ನಮ್ಮ ಕಥೆ, ಯಾದ್ ವಶೇಮ್, ಮಹಿಳಾ ಅಧ್ಯಯನ, ದುಡಿವ ಹಾದಿಯಲಿ ಜೊತೆಯಾಗಿ, ಬೆಳಗೆರೆ ಜಾನಕಮ್ಮ ಬದುಕು-ಬರಹ, ಹೋರಾಟದ ಹಾದಿಯಲ್ಲಿ ಧೀಮಂತ ಮಹಿಳೆಯರು, ಬದುಕು ಬದಲಿಸಬಹುದು, ಒಂದು ಕನಸಿನ ಪಯಣ, ಪೆರುವಿನ ಪವಿತ್ರ ಕಣಿವೆಯಲ್ಲಿ, ಸಂತಸ ನನ್ನೆದೆಯ ಹಾಡು ಹಕ್ಕಿ (ಬದುಕು ಬದಲಿಸಬಹುದು ಭಾಗ -4), ಕಾಲುಹಾದಿಯ ಕೋಲ್ಮಿಂಚುಗಳು- ...

READ MORE

Related Books