ಲೇಖಕಿ ನೇಮಿಚಂದ್ರ ಅವರು ಬರೆದ ಆತ್ಮಕಥನ ಕೃತಿ ʻಬೆಳಕು ತಂದ ಜೀವ ಡಾ. ಈಡಾ ಸೋಫಿಯಾ ಸಡ್ಕರ್ʼ. ನಮ್ಮ ನೆಲದಲ್ಲೇ ಹುಟ್ಟಿ ಬೆಳೆದ ಭಾರತದ ಕ್ಷಾಮ, ಬಡತನ, ರೋಗಗಳಿಗೆ ಸಾಕ್ಷಿಯಾಗಿದ್ದರು. ಜೊತೆಗೆ ಅಂದಿನ ದಿನಗಳಲ್ಲಿ ಹೆರಿಗೆಯ ಸಮಯದಲ್ಲಿ ಮಹಿಳೆಯರು ಅನುಭವಿಸುತ್ತಿದ್ದ ವೈದ್ಯಕೀಯ ಸಮಸ್ಯೆಗಳಿಗೆ ಸಿಲುಕಿ ಪ್ರಾಣಬಿಡುವುದೂ ಸಮಾನ್ಯ ಸಂಗತಿಯಾಗಿತ್ತು. ಈ ಎಲ್ಲಾ ನೋವಿನ ಸ್ಥಿತಿಗೆ ಕರಗಿ ಆಮೆರಿಕಾದ ಸರ್ವ ಸಂಪತ್ತನ್ನು ಸುಖದ ಜೀವನವನ್ನು ತೊರೆದು ಮಹಿಳೆಯರಿಗಾಗಿಯೇ ವೈದ್ಯಳಾದ ಧೀರ ಮಹಿಳೆ ಡಾ. ಈಡಾ ಸೋಫಿಯಾ ಸಡ್ಕರ್. ಭಾರತದ ಮಹಿಳೆಯರಿಗೆ ವೈದ್ಯರಾಗುವ ತರಬೇತಿ ಮತ್ತು ಆತ್ಮವಿಶ್ವಾಸವನ್ನು ಇವರು ನೀಡಿದ್ದರು. 1990ರಲ್ಲಿ ಒಂದು ಬೆಡ್ಡಿನ ಕ್ಲಿನಿಕನ್ನು ಆರಂಭಿಸಿದ ಈಡಾಳ ಕನಸಿನ ಆಸ್ಪತ್ರೆ ಇಂದು ʻವೆಲ್ಲೂರ್ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿ'ನ ಹೆಸರಿನಲ್ಲಿ ಪ್ರತಿಷ್ಠಿತ ಸಂಸ್ಥೆಯಾಗಿ ಬೆಳೆದು, ಜನರ ನೋವಿಗೆ ನೆರಳಾಗಿದೆ.
©2025 Book Brahma Private Limited.