About the Author

ಖ್ಯಾತ ಚಿಂತಕ ಸ್ವಾಮಿ ಪುರುಷೋತ್ತಮಾನಂದರುದ.ಕ. ಜಿಲ್ಲೆಯ ಸಾಲಿಗ್ರಾಮ ಬಳಿಯ ಮೂಡಹಾಡು ಗ್ರಾಮದವರು. ಮೂಲ ಹೆಸರು ರಾಮಚಂದ್ರ ಬಾಯಿರಿ. ಮಲ್ಪೆಯಲ್ಲಿ ಮೆಟ್ರಿಕುಲೇಷನ್ ಮುಗಿಸಿದರು. ನಂತರ ಬೆಂಗಳೂರಿನ ರಾಮಕೃಷ್ಣಾಶ್ರಮ ಪ್ರವೇಶಿಸಿದರು. ಮುಕುಂದ ಚೈತನ್ಯ ಎಂಬ ಹೆಸರಿನ ಬ್ರಹ್ಮಚಾರಿಯಾಗಿ ಸ್ವಾಮೀಜಿಯವರು ಬೇಲೂರು ಮಠದಲ್ಲಿ ಎರಡು ವರ್ಷಗಳ ತರಬೇತಿ ಪಡೆದರು. ನಂತರ ಪ್ರವಚನಕಾರರಾಗಿ ಮುಂದುವರಿದರು.  “ನಾನು ಮಾನವತೆಯ ಪ್ರೇಮದಿಂದ ಬಂಧಿತನಾಗಿದ್ದೇನೆ”.ಎನ್ನುವುದು ಅವರ ಪ್ರವಚನದ ಜೀವಾಳವಾಗಿತ್ತು. ಕೊಡಗು, ಬೆಳಗಾವಿ ಹೀಗೆ ರಾಜ್ಯದ ವಿವಿಧೆಡೆ ಶ್ರೀರಾಮಕೃಷ್ಣಾಶ್ರಮದ ಶಾಖೆಗಳನ್ನು ಆರಂಭಿಸಿದರು. ಅವರು ಉತ್ತಮ ಹಾಡುಗಾರರೂ ಆಗಿದ್ದು, ಹಲವಾರು ಧ್ವನಿಸುರುಳಿಗಳನ್ನು ಹೊರತಂದಿದ್ದಾರೆ. 

ಕೃತಿಗಳು : ವೀರ ಸಂನ್ಯಾಸಿ ವಿವೇಕಾನಂದ, ವಿಶ್ವವಿಜೇತ ವಿವೇಕಾನಂದ, ವಿಶ್ವಮಾನವ ವಿವೇಕಾನಂದ, ಯುಗಾವತಾರ ಶ್ರೀ ರಾಮಕೃಷ್ಣ (ಎರಡು ಭಾಗಗಳಲ್ಲಿ), ಶ್ರೀ ಶಾರದಾದೇವೀ ಜೀವನಗಂಗಾ, ಬ್ರಹ್ಮಾನುಭವಿ (ಸ್ವಾಮಿ ಬ್ರಹ್ಮಾನಂದರ ಜೀವನ ಚರಿತ್ರೆ), ವೀರ ನರೇಂದ್ರ, ಶ್ರೀ ಶಾರದಾದೇವೀ ಸಂದೇಶ ಮಂದಾರ, ಮೂವರು ನಾವು ಮತ್ತು ಇತರ ಕಥೆಗಳು, ತಾಯಿ, ನೀನು ಕಂಡದ್ದೆಲ್ಲವೂ ಸತ್ಯ, ಕಿರುಹೊತ್ತಿಗೆಗಳು:  ಕಲ್ಪತರು ಶ್ರೀ ರಾಮಕೃಷ್ಣ, ವಿನಯಮೂರುತಿ ಶ್ರೀ ರಾಮಕೃಷ್ಣ, ಪ್ರಿಯದರ್ಶನ ಶ್ರೀರಾಮ, ವಿಶ್ವಮಾನವನಾಗಿ ವಿವೇಕಾನಂದ, ಶ್ರೀಮಾತಾ ವಚನಮಧು, ಕರ್ನಾಟಕದ ಯುವಜನತೆಗೊಂದು ಕರೆ, ಧೀರತೆಯ ದುಂದುಭಿ, ಕಬೀರ ಬೀರಿದ ಬೆಳಕು, ವಿವೇಕ ವಾಹಿನಿ, ಚಿಂತನ-ಮಂಥನ, ಮಿಂಚಿನ ಗೊಂಚಲು, ಯುವಶಕ್ತಿಯ ರಹಸ್ಯ, ಶೀಲ - ಶಕ್ತಿಯ ಮೂಲ, ಸಹನೆಯ ಸಂದೇಶ, ಶಾಂತಿಯ ಹರಕೆ, ಮೌನ - ಶಾಂತಿ (ಮೂರು ಲೇಖನಗಳು), ತಪಸ್ಸು - ಯಶಸ್ಸು, ಶಕ್ತಿಶಾಲೀ ವ್ಯಕ್ತಿತ್ವ ನಿರ್ಮಾಣ, ಬಾಲಕ ಸಂಘ, ಶ್ರೀಗುರು ಮಹಿಮೆ, ಜ್ಯೇಷ್ಠಾಶ್ರಮ - ಗೃಹಸ್ಥಧರ್ಮ, ಹೀಗೊಂದು ಕಥೆ, ಜನ ಮತ್ತು ಧನ (Man and Money ಪುಸ್ತಕದ ಅನುವಾದ: ಮುರಳೀಧರ), ಸಂಸಾರಿ - ಸಂನ್ಯಾಸಿ, ವಿದ್ಯಾರ್ಥಿಗಾಗಿ (1.ವಿದ್ಯಾರ್ಥಿಗೊಂದು ಪತ್ರ, 2.ಅಧ್ಯಯನದಲ್ಲಿ ಏಕಾಗ್ರತೆ, 3.ವಿದ್ಯೆಯ ವೈಭವ, 4.ಸಮಯಪ್ರಜ್ಞೆ, 5.ಪ್ರಾರ್ಥಿಸಿರಿ! ಅಥವಾ, ಭಾವಿಸಿರಿ!), ಇಂಗ್ಲಿಷ್ ಕೃತಿಗಳು: Letter to a Student ('ವಿದ್ಯಾರ್ಥಿಗೊಂದು ಪತ್ರ' ಕೃತಿಯ ಇಂಗ್ಲಿಷ್ ಅನುವಾದ), Secret of Concentration('ಅಧ್ಯಯನದಲ್ಲಿ ಏಕಾಗ್ರತೆ' ಕೃತಿಯ ಇಂಗ್ಲಿಷ್ ಅನುವಾದ), Man and Money, Youth and Vitality, Useful thoughts for youths, Build your personality.

ಸ್ವಾಮಿಗಳು 25-02-2005 ರಂದು ಹೃದಯಾಘಾತದಿಂದ (73) ನಿಧನರಾದರು. 

ಸ್ವಾಮಿ ಪುರುಷೋತ್ತಮಾನಂದ

(14 Jun 1931-25 Feb 2005)