About the Author

ಪತ್ತೇದಾರಿ ಕಾದಂಬರಿಕಾರ ಟಿ.ಕೆ. ರಾಮರಾಯರು (ಜನನ:07-10-1931)  ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದವರು. ತಂದೆ ಟಿ. ಕೃಷ್ಣಮೂರ್ತಿ. ರೈಲ್ವೆ ಇಲಾಖೆಯಲ್ಲಿ ಸ್ಟೇಷನ್‌ ಮಾಸ್ಟರ್ ಆಗಿದ್ದವರು, ತಾಯಿ ನಾಗಮ್ಮ. ಕಡೂರು, ಅರಸೀಕೆರೆ ಇತರೆಡೆ ಆರಂಭಿಕ ಶಿಕ್ಷಣ, ಕೋಲಾರದಲ್ಲಿ. ಹೈಸ್ಕೂಲ್ ಶಿಕ್ಷಣ, ಪತ್ತೇದಾರಿ ಕಾದಂಬರಿ ‘ಭಾಸ್ಕರ ಅಥವಾ ಸೇಡು’. ಕಾಲೇಜು ಓದುತ್ತಿರುವಾಗಲೇ ಅಲೆಕ್ಸಾಂಡರ್ ಡ್ಯೂಮ, ವಿಕ್ಟರ್ ಹ್ಯೂಗೋ, ಥಾಮರ್ಸ್ ಹಾರ್ಡಿ, ಬರ್ನಾರ್ಡ್‌ ಷಾ -ಇವರ ಅಚ್ಚುಮೆಚ್ಚಿನ ಲೇಖಕರು.

ಬಿ.ಎಸ್‌ಸಿ. ಆನರ್ಸ್ ಪದವೀಧರರು. ಗಾಂಧಿನಗರದ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದರು. ಮದರಾಸಿನಲ್ಲಿ ರೈಲ್ವೆಗಾರ್ಡ್ ಎಂದು ಕೆಲಸ ಮಾಡಿದರು.  ರೈಲ್ವೆಯಲ್ಲಿದ್ದ ತಂದೆಯವರ ನಿಧನದಿಂದ ಇವರಿಗೆ ಮಾನವೀಯ ದೃಷ್ಟಿಯಿಂದ ಕೆಲಸ ನೀಡಲಾಗಿತು. ಆದರೆ, ಅಣ್ಣನ ಸಾವು ಸಂಭವಿಸಿತು. ಕುಟುಂಬ ನಿರ್ವಹಣೆ ಕಷ್ಟವಾಗಿ ಕೆಲಸ ತೊರೆದು ಚೆನ್ನಪಟ್ಟಣಕ್ಕೆ ಬಂದರು. ನಂತರದ 20 ವರ್ಷ ಕಾಲ ಮನೆಪಾಠ ಹೇಳಿದರು.  ಔಷಧಿ ಅಂಗಡಿ-ಇವರ ಮೊದಲ ಕಾದಂಬರಿ ‘ದೂರ ಗಗನ’ ಪ್ರಕಟವಾದುದು 1966ರಲ್ಲಿ. ಆಗ ಅವರಿಗೆ 35 ವರ್ಷ. 

 ಗ್ರೀಸ್‌, ಸ್ವಿಜರ್ ಲ್ಯಾಂಡ್‌, ಫ್ರಾನ್ಸ್‌, ಇಂಗ್ಲೆಂಡ್‌, ಅಮೆರಿಕಾ, ಕೆನಡಾ, ಜಪಾನ್‌, ಹಾಂಕಾಂಗ್‌, ಥಾಯ್‌ಲ್ಯಾಂಡ್‌, ಸಿಂಗಾಪೂರ್, ಶ್ರೀಲಂಕಾ ಮುಂತಾದ ದೇಶಗಳನ್ನು ಸುತ್ತಿದರು. ಇವರ ಪ್ಬಂರವಾಸ ಸಾಹಿತ್ಯ- ‘ಗೋಳದ ಮೇಲೊಂದು ಸುತ್ತು’, ಹಲವು ಆವೃತ್ತಿ ಕಂಡಿದೆ. ಸಾಹಿತ್ಯ ಅಕಾಡಮಿಯ ಸದಸ್ಯರಾಗಿದ್ದರು. ಧಾರವಾಡದಲ್ಲಿ ನಡೆದ ಕರ್ನಾಟಕ ರಾಜ್ಯದ ಪ್ರಥಮ ಪತ್ತೇದಾರಿ ಲೇಖಕರ ಸಾಹಿತ್ಯ ಸಮ್ಮೇಳನದ (1989) ಅಧ್ಯಕ್ಷತೆ ವಹಿಸಿದ್ದರು.

ಮರಳು ಸರಪಳಿ, ಮೂರುಜನ್ಮ, ಸೇಡಿನ ಹಕ್ಕಿ, ಸೀಳು ನಕ್ಷತ್ರ, ವರ್ಣ ಚಕ್ರ, ಹಿಮಪಾತ, ಮಣ್ಣಿನ ದೇೂಣಿ ಮುಂತಾದ ಕಾದಂಬರಿಗಳು ಚಲನಚಿತ್ರವಾಗಿವೆ. ಬಂಗಾರದ ಮನುಷ್ಯ ಕಾದಂಬರಿಯು (1972)ಚಲನಚಿತ್ರವಾಗಿತ್ತು. ವಿವಿಧ ಭಾಷೆಗಳಲ್ಲೂ ಪ್ರಕದರ್ಶನ ಕಂಡಿದೆ. 

ಕಾದಂಬರಿಗಳು: ಬಂಗಾರದ ಮನುಷ್ಯ, ಜಗದೇವರಾಯ, ದೂರ ಗಗನ, ಪಚ್ಚೆ ತೇೂರಣ, ಆಕಾಶ ದೀಪ, ಸೇಡಿನ ಹಕ್ಕಿ, ಮರಳು ಸರಪಣಿ, ಪಶ್ಚಿಮದ ಬೆಟ್ಟ, ಲಂಗರು, ಆಸರೆಯ ಬೊಂಬೆ, ಮಧುರ ಮಿಲನ, ತ್ರಿಕೇೂಣದ ಮನೆ, ಪಯಣದ ಕೊನೆ, ನಿಗೂಢರು, ಮೂರನೆಯ ಕೀಲಿ ಕೈ, ಬಣ್ಣದ ಹುಳು, ಶಕುನ ಪಕ್ಷಿ, ಬೆದರು ಬೊಂಬೆ, ಡೊಂಕು ಮರ, ಕೋವಿ-ಕುಂಚ, ಕಪ್ಪು ನಾಯಿ, ವಜ್ರದ ಕೊಂಬು, ನೆರಳು, ಗುಲಾಮ ಹೆಣ್ಣು, ರಾಣಿ ಜೇನು, ಸೀಳು ನಕ್ಷತ್ರ, ಕೆಂಪು ಮಣ್ಣು, ಸೀಮಾ ರೇಖೆ, ದಿಬ್ಬದ ಬಂಗಲೆ, ಜೇೂಡಿ ಛಾಯೆ, ಮಣ್ಣಿನ ದೋಣಿ ಇತ್ಯಾದಿ.

ಕಥಾ ಸಂಕಲನಗಳು: ಉಬ್ಬರವಿಳಿತ, ನಾಲ್ಕು ರೇಖೆಗಳು, ಎತ್ತರದ ಮನೆಯವನು, ಕೊನೆಯ ಸಾಕ್ಷಿ, ಕೊಲ್ಲಿಯ ಹಣ, ಹೇಡಿ, ಕಲ್ಲು ಹಾಸಿಗೆ, ಬೆಂಕಿ ಗೂಡು, ಮಧುಚಂದ್ರ, ಅಪರಾತ್ರಿಯ ಆತ್ಮೀಯ, ಶಿಲ್ಪ ದೃಶ್ಯಗಳು ಇತ್ಯಾದಿ

ಮಕ್ಕಳ ಸಾಹಿತ್ಯ: ಶ್ಯಾಮಪ್ರಸಾದ ಮುಖರ್ಜಿ, ಲಾಲಾ ಲಜಪತರಾಯ, ಜೆ.ಎನ್.ತಾತಾ, ಸ್ವಾಮಿ ವಿವೇಕಾನಂದ, ಟಿವಿ.ಸುಂದರಂ ಅಯ್ಯಂಗಾರ ಇತ್ಯಾದಿ. ಟಿ.ಕೆ.ರಾಮರಾವ್ 1988ರ ನವೆಂಬರ್ 11 ರಂದು ನಿಧನರಾದರು. 

ಟಿ.ಕೆ. ರಾಮರಾವ್

(07 Oct 1931-11 Jan 1988)