ಬ್ಲ್ಯಾಕ್ ಫ್ರೈಡೆ

Author : ರವಿ ಬೆಳಗೆರೆ

Pages 250

₹ 125.00




Published by: ಭಾವನಾ ಪ್ರಕಾಶನ
Address: ನಂ. 2, 80 ಫೀಟ್ ರಸ್ತೆ, ಕದಿರೇನಹಳ್ಳಿ ಪೆಟ್ರೋಲ್ ಪಂಪ್ ಹತ್ತಿರ, ಬನಶಂಕರಿ 2ನೇ ಹಂತ ಬೆಂಗಳೂರು-560070
Phone: 080- 2679 0804

Synopsys

ಬ್ಲ್ಯಾಕ್ ಫ್ರೈಡೆ ಎಂಬ ಪುಸ್ತಕ ಭಾರತದ ಮಹಾನಗರಿ ಮುಂಬೈ ಕಂಡಂತಹ ಕರಾಳ ದಿನದ ಕುರಿತು ಮಾತಾಡುತ್ತದೆ. 12 ಮಾರ್ಚ್ 1993ರಂದು ಮುಂಬೈನಲ್ಲಿ ನಡೆದಂತಹ ಬಾಂಬ್ ಸ್ಪೋಟದ ಕುರಿತು ಹುಸೇನ್ ಜೈ಼ದಿ ಇಂಗ್ಲೀಷ್‍ನಲ್ಲಿ ಬರೆದಂತಹ ಪುಸ್ತಕವನ್ನು ರವಿ ಬೆಳಗೆರೆಯವರು ಕನ್ನಡಕ್ಕೆ ಅನುವಾದಿಸಿದ್ದಾರೆ. 257 ಜನರನ್ನು ಬಲಿ ತೆಗೆದುಕೊಂಡು 713 ಜನರು ಗಾಯಗೊಂಡು ನರಳುವಂತೆ ಮಾಡಿದ ಘಟನೆಯ ಹಿನ್ನೆಲೆ ಮತ್ತು ಅದರ ಪರಿಣಾಮಗಳ ಕುರಿತು ಬರೆದಂತಹ ಪುಸ್ತಕವಿದು. ಬಾಂಬ್ ಸ್ಪೋಟಕ್ಕೆ ಯಾವ ರೀತಿ ಸಿದ್ಧತೆಗಳನ್ನು ಮಾಡಲಾಯಿತು, ಆ ದಾಳಿಯ ಹಿಂದಿನ ಹುನ್ನಾರವೇನು, ಯಾರ ಕೈವಾಡದಿಂದ ಈ ದಾಳಿಯನ್ನು ನಡೆಸಲಾಯಿತು ಎನ್ನುವುದರ ಕುರಿತು ಈ ಪುಸ್ತಕ ವಿವರಿಸುತ್ತಾ ಹೋಗುತ್ತದೆ. ಬಾಂಬ್ ದಾಳಿಯನ್ನು ನಡೆಸುವ ವ್ಯಕ್ತಿಗಳ ಮನಸ್ಥಿತಿ ಯಾವ ರೀತಿ ಇದ್ದಿರಬಹುದು ಎಂಬುದನ್ನು ಕೂಡ ಲೇಖಕರು ಸವಿವರವಾಗಿ ಬರೆಯುತ್ತಾರೆ. ಘಟನೆಯ ನಂತರ ಮುಂಬೈನ ಜನತೆ ಅನುಭವಿಸಿದಂತಹ ನೋವು, ಪೊಲೀಸ್ ವಿಚಾರಣೆ, ಜನರ ದಿನ ನಿತ್ಯದ ಜೀವನದಲ್ಲಿ ಆದಂತಹ ಬದಲಾವಣೆಗಳ ಕುರಿತು ಈ ಪುಸ್ತಕ ಬೆಳಕು ಚೆಲ್ಲುತ್ತದೆ. ಇಂಗ್ಲೀಷ್‍ನಲ್ಲಿರುವ ಪುಸ್ತಕವನ್ನು ವಸ್ತು ವಿಷಯಕ್ಕೆ ಯಾವುದೇ ರೀತಿಯ ಚ್ಯುತಿ ಬಾರದ ರೀತಿಯಲ್ಲಿ ಕನ್ನಡಕ್ಕೆ ಅನುವಾದ ಮಾಡಲಾಗಿದೆ. ಅಪರೂಪದ ಛಾಯಾಚಿತ್ರಗಳೊಂದಿಗೆ ಕನ್ನಡದಲ್ಲಿ ಲಭ್ಯವಿರುವ ಅಪರೂಪದ ಪುಸ್ತಕ ಬ್ಲ್ಯಾಕ್ ಫ್ರೈಡೆ.

About the Author

ರವಿ ಬೆಳಗೆರೆ
(15 March 1958 - 13 November 2020)

ಕನ್ನಡದ ಪ್ರಮುಖ ಪತ್ರಕರ್ತರಲ್ಲಿ ಒಬ್ಬರಾದ ರವಿ ಬೆಳಗೆರೆ ಅವರು 15 ಮಾರ್ಚ್ 1958 ಬಳ್ಳಾರಿಯಲ್ಲಿ ಜನಿಸಿದರು. ಇತಿಹಾಸ ಮತ್ತು ಪ್ರಾಚ್ಯಶಾಸ್ತ್ರದಲ್ಲಿ ಎಂ.ಎ., ಮಾಡಿದ್ದ ಇವರು ಮೊದಲು ಪ್ರಧ್ಯಾಪಕರಾಗಿ ವೃತ್ತಿಜೀವನ ಆರಂಭಿಸಿದರು. ನಂತರ ಸಂಯುಕ್ತ ಕರ್ನಾಟಕ, ಕರ್ಮವೀರ ಪತ್ರಿಕೆಗಳಲ್ಲಿ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದರು. ಲಂಕೇಶ್ ಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುತ್ತಿದ್ದ ಅವರು ಆಮೇಲೆ ತಾವೇ ಸ್ವತಃ ಹಾಯ್ ಬೆಂಗಳೂರು ಪತ್ರಿಕೆಯನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ವಾರಪತ್ರಿಕೆಯು ಓದುಗರ ಮನಗೆದ್ದು ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಸಂಚಲನ ಮೂಡಿಸಿತು. ಹಾಯ್ ಬೆಂಗಳೂರು ಪತ್ರಿಕೆಯ ಜೊತೆಗೆ ಓ ಮನಸೇ ಪಾಕ್ಷಿಕ ಪ್ರಾರಂಭಿಸಿದರು. ಶಿವರಾಮ ಕಾರಂತ ...

READ MORE

Related Books