ಎಲ್ಲೆ ಮೀರಿ

Author : ಎಚ್.ಎಸ್. ನಾಗಭೂಷಣ

Pages 224

₹ 200.00




Published by: ಸೃಷ್ಟಿ ಪಬ್ಲಿಕೇಷನ್ಸ್
Address: ಸೃಷ್ಟಿ ಪಬ್ಲಿಕೇಷನ್ಸ್, ವಿಜಯ ನಗರ, ಬೆಂಗಳೂರು.

Synopsys

ಇಂಗ್ಲಿಷ್ ಕಲಿಯುವುದರ ಮೂಲಕ ನಮ್ಮಿಂದ ಸಾಕಷ್ಟು ದೂರ ಇರುವ ಒಂದು ಸಂಸ್ಕೃತಿಯನ್ನು ಅಭ್ಯಾಸ ಮಾಡುತ್ತೇವೆ. ಇದು ನಮ್ಮ ಮತ್ತು ಅವರ ಸಂಸ್ಕೃತಿಗಳ ಮಧ್ಯೆ ಒಂದು ಸೇತುವಾಗಿ ಎರಡು ಸಂಸ್ಕೃತಿಗಳನ್ನು ಉಜ್ವಲಗೊಳಿಸಬೇಕು. ಆದರೆ ಈಗ ಆಗಿರುವುದೇನು? ಅವರ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗಿ ನಮ್ಮ ಸಂಸ್ಕೃತಿಯಿಂದ ಪರಕೀಯರಾಗುತ್ತಿದ್ದೇವೆ' ಎನ್ನುವ ಗೂಗಿ,ಇಂಗ್ಲಿಷ್ ಕಲಿಕೆಯು ವಿಭಿನ್ನ ಸಂಸ್ಕೃತಿಗಳ ಸಂಪರ್ಕಕ್ಕೆ ಇರುವ ತೊಡಕುಗಳನ್ನು ನಿವಾರಿಸಬೇಕು.ವೈಚಾರಿಕತೆ, ಭಾಷೆ, ಜನ, ಸಂಸ್ಕೃತಿ, ಸಂಘರ್ಷ ಸೇರಿದಂತೆ ಗೂಗಿ ಮಂಡಿಸುವ ವಿಚಾರಗಳಲ್ಲಿ ಹೊಸತನವಿದೆ. 'ಗೂಗಿಯ ಡೀಕಲೋನೈಸಿಂಗ್ ದಿ ಮೈಂಡ್ ಓದುವಾಗ ಆಫ್ರಿಕಾ ಇರುವ ಕಡೆ ಏಷ್ಯಾ, ಕೀನ್ಯಾ ಇರುವ ಕಡೆ ಕನ್ನಡ ಎಂದು ಬದಲಿಸಿದರೆ, ಇಡೀ ಪುಸ್ತಕ ನಮ್ಮದೇ ಆತ್ಮಕತೆಯಾಗಿ ಬಿಡುತ್ತದೆ,ಎನ್ನುವುದೆ ರಹಮತ್ ತರೀಕೆರೆ ಅಭಿಪ್ರಾಯ.ಗೂಗಿಯ 15 ಬರಹಗಳು ಮತ್ತು 2 ಸಂದರ್ಶನಗಳು ಈ ಪುಸ್ತಕದಲ್ಲಿದೆ.

About the Author

ಎಚ್.ಎಸ್. ನಾಗಭೂಷಣ

ಡಾ. ಎಚ್.ಎಸ್. ನಾಗಭೂಷಣ ಅವರು ಶಿವಮೊಗ್ಗದ ಕಮಲಾ ನೆಹರು ಸ್ಮಾರಕ ರಾಷ್ಟ್ರೀಯ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರಾಗಿದ್ದಾರೆ. ’ಎಲ್ಲೆ ಮೀರಿ’ ಪುಸ್ತಕ ಅಲ್ಲದೆ ಅವರು ಸಮಕಾಲೀನ ತಮಿಳು ಲೇಖಕ ಬಾಮಾ ಕುರಿತು ಪುಸ್ತಕ ಪ್ರಕಟಿಸಿದ್ದಾರೆ. ಪದವಿ ವಿದ್ಯಾರ್ಥಿಗಳಿಗಾಗಿ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಿದ್ದಾರೆ. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ರಂಗ ಚಟುವಟಿಕೆಗಳಲ್ಲಿಯೂ ಆಸಕ್ತರಾಗಿರುವ ನಾಗಭೂಷಣ ಅವರು ಹಲವು ಕನ್ನಡ ಮತ್ತು ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದಾರೆ ಮತ್ತು ನಿರ್ದೇಶನ ಮಾಡಿದ್ದಾರೆ. ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಆಸಕ್ತಿ ಮೂಡಿಸುವುದಕ್ಕಾಗಿ ಹಲವು ನಾಟಕ ನಿರ್ದೇಶನ ಮಾಡಿದ್ದಾರೆ. ಪ್ರತಿಷ್ಠಿತ ಶಿವಮೊಗ್ಗದ ಕರ್ನಾಟಕ ಸಂಘದ ಗೌರವ ...

READ MORE

Related Books