ಪುಟ್ಟ ರಾಜಕುಮರ

Author : ಜೆ.ಬಾಲಕೃಷ್ಣ

Pages 96

₹ 45.00




Year of Publication: 2007
Published by: ಪ್ರಗತಿ ಗ್ರಾಫಿಕ್ಸ್

Synopsys

1943ರಲ್ಲಿ ಫ್ರೆಂಚ್ ಭಾಷೆಯಲ್ಲಿ ಪ್ರಕಟವಾದ ಈ ಕೃತಿ ಈಗಾಗಲೇ 125 ಭಾಷೆಗಳಿಗೆ ಅನುವಾದಗೊಂಡಿದೆ. ಇದು ಸೇಂತ್ ಎಕ್ಯೂಪರಿ ಅವರು ದೊಡ್ಡವರು ಮತ್ತು ಮಕ್ಕಳಿಗೆಂದು ಬರೆದ ಕಥೆ. ’ಎಲ್ಲಾ ದೊಡ್ಡವರೂ ಮೊದಲು ಮಕ್ಕಳಾಗಿದ್ದವರೇ ಆದರೆ ಅದನ್ನು ನೆನಪಿನಲ್ಲಿಟ್ಟುಕೊಂಡಿರುವವರು ಕೆಲವರು ಮಾತ್ರ’ ಅನ್ನೋದು ಸೇಂತ್ ಎಕ್ಯೂಪರಿಯ ಮಾತು. ಒಂಟಿತನ ಕಾಡಲು ನಾವು ಒಂಟಿಯಾಗಿರಬೇಕಿಲ್ಲ, ಇತರರ ನಡುವೆಯೂ ನಮ್ಮನ್ನು ಒಂಟಿತನ ಕಾಡುತ್ತದೆ. ದೊಡ್ಡವರು ತಮ್ಮ ಹೃದಯವಂತಿಕೆಯಿಂದ ಜಗತ್ತನ್ನು ನೋಡಲು ಸಾಧ್ಯವಾಗದೆ ಅಂಕಿಅಂಶಗಳ ಮೂಲಕ ನೋಡುವುದು ಅವರನ್ನು ಬಲವಂತದ ಒಂಟಿತನಕ್ಕೆ ದೂಡುತ್ತದೆ ಎನ್ನುತ್ತಾರೆ ಲೇಖಕರು. ಸುಖ ಸಂತೋಷದ ಬದುಕಿನ ಅವಶ್ಯಕತೆಗಳು ತೀರಾ ಸರಳವಾದವು ಹಾಗೂ ನಿಸ್ವಾರ್ಥತೆಯೇ ಸಂಪತ್ತು ಎಂಬ ಸಂದೇಶವನ್ನು ಕೃತಿ ಸಾರುತ್ತದೆ.

About the Author

ಜೆ.ಬಾಲಕೃಷ್ಣ

ಬೆಂಗಳೂರಿನ ಕೃಷಿವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜೆ.ಬಾಲಕೃಷ್ಣ ಅವರು ಕೃಷಿ ಸೂಕ್ಷ್ಮಜೀವಿ ಶಾಸ್ತ್ರದಲ್ಲಿ ಸ್ನಾತಕೊತ್ತರ ಹಾಗೂ ಕನ್ನಡ ಕೃಷಿ ವಿಜ್ಞಾನ ಸಾಹಿತ್ಯದ ಅಧ್ಯಾಯನಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.ಕಾರ್‍ಟೋನಿಸ್ಟ್ ಆಗಿಯು ಗುರುತಿಸಿಕೊಂಡಿರುವ ಬಾಲಕೃಷ್ಣರವರ ಆಸಕ್ತಿಯ ಕ್ಷೇತ್ರಗಳು ಜೀವವೈವಿಧ್ಯದಷ್ಟೇ ವಿಸ್ತಾರವಾದವು. ವಿಜ್ಞಾನದಿಂದ ಮೊದಲ್ಗೊಂಡು ಸಾಹಿತ್ಯ,ಸೂಫಿ,ಝೆನ್,ತತ್ವದರ್ಶನದ ವರೆಗೂ ಅವರ ಜ್ಞಾನ ಹರಡಿಕೊಂಡಿದೆ. ...

READ MORE

Related Books