ನಾಗಾರ್ಜುನನ ನುಡಿಕತೆಗಳು

Author : ಎಸ್. ನಟರಾಜ ಬೂದಾಳು

Pages 112

₹ 120.00




Published by: ಹೊನ್ನಾರು ಪ್ರಕಾಶನ
Address: 2ನೇ ಕ್ರಾಸ್, ಗೋವಿನಪುರ, ತಿಪಟೂರು-572201

Synopsys

ಬೌದ್ಧ ತಾತ್ವಿಕತೆಯನ್ನು ವಿವರಿಸಿಕೊಟ್ಟ ಗುರು ನಾಗಾರ್ಜುನನನ್ನು ಎರಡನೆಯ ಬೌದ್ಧ ಎಂದು ಕರೆದು ಗೌರವಿಸಲಾಗಿದೆ. ಬುದ್ಧ ಗುರುವಿನ ತಾತ್ವಿಕತೆಯನ್ನಾಧರಿಸಿ ಬೌದ್ಧ ಮಹಾಯಾನವನ್ನು ಪ್ರವರ್ತಿಸಿದವನು ನಾಗಾರ್ಜುನ. ಕ್ರಿ.ಶ. ಎರಡನೆಯ ಶತಮಾನದವನಾದ ನಾಗಾರ್ಜುನ ಬನವಾಸಿಯ ಬಳ್ಳಿಗಾವೆಯ ನಾಡಿನವನು. ನಂತರ ನಲಂದಾ ವಿಶ್ವವಿದ್ಯಾಲಯ ಅವನ ಕಾರ್ಯಕ್ಷೇತ್ರವಾಗಿತ್ತು. ಕೊನೆಯ ದಿನಗಳನ್ನು ಶ್ರೀಶೈಲದಲ್ಲಿ ಕಳೆದ ಎಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ನಾಗಾರ್ಜುನನ ಮಹತ್ವದ ಕೃತಿಯಾದ ‘ಮೂಲಮಧ್ಯಮಕಾರಿಕಾ’ ಕ್ಲಿಷ್ಟವಾದ ತರ್ಕ ಮಾರ್ಗದ ಕೃತಿ. ಅದು ಸಾಮಾನ್ಯ ಓದುಗರಿಗೆ ಎಟುಕುವುದಿಲ್ಲ ಎಂದು ಅರಿತಿದ್ದ ನಾಗಾರ್ಜುನ ನಿತ್ಯದ ಸಂದರ್ಭಗಳನ್ನು ಅನ್ವಯಿಸಿ ಜನರು ಬಾಳಲು ಸಾಧ್ಯವಾಗುವಂತೆ ಬೌದ್ಧ ತಾತ್ವಿಕತೆಯನ್ನು ಕತೆಗಳು ಹಾಗೂ ನುಡಿಗಟ್ಟುಗಳ ಮೂಲಕ ರಚಿಸಿದ್ದಾನೆ. ಅವುಗಳನ್ನು ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದಿಸಿ ನೀಡಲಾಗಿದೆ. ನಾಗಾರ್ಜುನನ ಬದುಕು-ಬರಹ- ತಾತ್ವಿಕತೆಯನ್ನು ವಿವರಿಸುವ ವಿವರವಾದ ಪ್ರಸ್ತಾವನೆಯು ಈ ಪುಸ್ತಕದ ಪ್ರಮುಖ ಅಂಶವಾಗಿದೆ. ಕತೆಗಳ ಓದಿಗೆ ಮತ್ತು ಅರಿತುಕೊಳ್ಳಲು ಈ ಪ್ರಸ್ತಾವನೆಯು ಪೂರಕವಾಗಿದೆ. ಪುಸ್ತಕದಲ್ಲಿ 90 ಪದ್ಯರೂಪಿ ನುಡಿಗಟ್ಟುಗಳಿವೆ. ಕೆಲವು ನುಡಿಗಟ್ಟುಗಳನ್ನು ವಿವರಿಸುವ ಕಥೆಯನ್ನೂ ನೀಡಲಾಗಿದೆ.

About the Author

ಎಸ್. ನಟರಾಜ ಬೂದಾಳು

ತುಮಕೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ನಟರಾಜ ಬೂದಾಳು ಅವರು ಕನ್ನಡದ ಸಂಸ್ಕೃತಿ ಚಿಂತಕ-ಸಂಶೋಧಕರಲ್ಲಿ ಒಬ್ಬರು. ಬುದ್ಧಚಿಂತನೆಯನ್ನು ಹರಳುಗೊಳಿಸಿದ ನಾಗಾರ್ಜುನನ ಮೂಲಮಧ್ಯಮಕಾರಿಕಾವನ್ನು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿರುವ ಬೂದಾಳು ಅವರು ಕರ್ನಾಟಕದ ಸಂಸ್ಕೃತಿ ರೂಪಿಸುವಲ್ಲಿ  ಶ್ರಮಣ ಧಾರೆಗಳು ವಹಿಸಿದ ಪ್ರಮುಖ ಪಾತ್ರಗಳ ಬಗ್ಗೆ ವಿಶೇಷ ಒಲವು ಉಳ್ಳವರು. ಕರ್ನಾಟಕ ಸರ್ಕಾರ ಪ್ರಕಟಿಸಿದ ಸಮಗ್ರ ತತ್ವಪದ ಸಾಹಿತ್ಯ ಯೋಜನೆಯ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸಿರುವ ಅವರು ಕನ್ನಡ ಸಾಹಿತ್ಯ ಮೀಮಾಂಸೆಯ ಕುರಿತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. 2020 ನೇ ಸಾಲಿನ ಕೇಂದ್ರ ಸಾಹಿತ್ಯ ಅನುವಾದ ಕೃತಿಗೆ ಕೊಡಮಾಡುವ ...

READ MORE

Related Books