ಖ್ವಾಜಾ ಬಂದಾನವಾಜರು

Author : ಚಂದ್ರಕಾಂತ ಕರದಳ್ಳಿ

Pages 60

₹ 30.00




Year of Publication: 2005
Published by: ಶ್ರೀ ಸಿದ್ದಲಿಂಗೇಶ್ವರ ಪ್ರಕಾಶನ
Address: ’ಸರಸ್ವತಿ' ಗೋದಾಮ, ಗುಲಬರ್ಗಾ 585101
Phone: 08472 – 226303, 222431

Synopsys

ಬಹಮನಿ ದೊರೆಗಳ ಆಡಳಿತಾವಧಿ ಕರ್ನಾಟಕದಲ್ಲಿ ಸೂಫಿತತ್ವ ಕವಲೊಡೆಯಲು ಸ್ಫೂರ್ತಿ ಒದಗಿಸಿದ ಸಮಯ. ಹೈದರಾಬಾದ್ ಕರ್ನಾಟಕ ಸೀಮೆಯ ಬಹುದೊಡ್ಡ ಸೂಫಿ ಸಂತ ಹಜರತ್ ಖ್ವಾಜಾ ಬಂದಾನವಾಜ್. ದೆಹಲಿಯಿಂದ ಮಹಾರಾಷ್ಟ್ರದ ದೌಲತಾಬಾದಿಗೆ ಬಂದು ಅಲ್ಲಿಂದ ಗುಲ್ಬರ್ಗಕ್ಕೆ ತೆರಳಿ ಅಲ್ಲಿಯೇ ನೆಲೆನಿಂತ ಈ ಅನುಭಾವಿ ಕುರಿತು ಆಳವಾಗಿ ಅಧ್ಯಯನ ಮಾಡಿ ರಚಿಸಿದ ಪುಸ್ತಕ ಇದು. ನವಾಜರ ಬದುಕು, ಚಿಂತನೆ ಹಾಗೂ ನವಾಜರ ಪರಂಪರೆಯನ್ನು ಕೃತಿಯಲ್ಲಿ ಪರಿಚಯಿಸಲಾಗಿದೆ. 

About the Author

ಚಂದ್ರಕಾಂತ ಕರದಳ್ಳಿ
(25 August 1952)

ಮಕ್ಕಳ ಸಾಹಿತ್ಯದಲ್ಲಿ ಗಣನೀಯ ಸಾಧನೆ ಮಾಡಿರುವ ಚಂದ್ರಕಾಂತ ಕರದಳ್ಳಿಯವರು‌ ಯಾದಗಿರಿ ಜಿಲ್ಲೆಯ ಶಹಾಪುರದವರು.‌ 1952ರ ಆಗಸ್ಟ್ 25ರಂದು ಜನಿಸಿದರು. ತಂದೆ ರಾಚಯ್ಯಸ್ವಾಮಿ ಕರದಳ್ಳಿ. ತಾಯಿ ಮುರಿಗೆಮ್ಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ (1985) ಪದವಿ‌ ಪಡೆದ ಅವರು ಮೈಸೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಗಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಪ್ರೌಢಶಾಲಾ ಶಿಕ್ಷಕರಾದರು. 2012ರಲ್ಲಿ ನಿವೃತ್ತರಾದರು.  ಮಕ್ಕಳ ಕತೆ, ಕಾದಂಬರಿ, ಕಾವ್ಯ ರಚಿಸಿರುವ ಕರದಳ್ಳಿ ಅವರಿಗೆ ಕೇಂದ್ರ ಸರ್ಕಾರದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. ಯಾದಗಿರಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ...

READ MORE

Related Books