ನಂದಳಿಕೆಯ ಹಠಯೋಗಿ ನಂದಳಿಕೆ ಬಾಲಚಂದ್ರ ರಾವ್

Author : ವಿ.ಗ. ನಾಯಕ

Pages 106

₹ 100.00




Year of Publication: 2016
Published by: ಆಕೃತಿ ಆಶಯ ಪಬ್ಲಿಕೇಷನ್ಸ್
Address: ಮಾಕ್ಸಿಮಸ್ ಕಾಂಪ್ಲೇಕ್ಸ್, ಲೈಟ್ ಹೌಸ್ ಹಿಲ್ ರೋಡ್, ಮಂಗಳೂರು-575001
Phone: 0802443002

Synopsys

ಮುದ್ದಣನ ಸಾಹಿತ್ಯಿಕ ಮೌಲ್ಯಗಳನ್ನು ದಾಖಲಿಸಿದ ನಂದಳಿಕೆ ಬಾಲಚಂದ್ರ ರಾಯರದು ತನಗಾಗಿ ಒಂದಿನಿತೂ ಲಾಭ ಬಯಸದ ವ್ಯಕ್ತಿತ್ವ. ಪ್ರಸ್ತುತ ಕೃತಿಯಲ್ಲಿ ಬಾಲಚಂದ್ರರಾಯರ ಬದುಕಿನ ಸಾಧನೆಗಳನ್ನು ಚಿತ್ರಿಸುವುದರ ಜೊತೆ ಜೊತೆಗೆ ನಂದಳಿಕೆ ಎಂಬ ಪುಟ್ಟ ಊರಿನ ಕಥನವನ್ನು ಕೂಡಾ ದಾಖಲಿಸಲಾಗಿದೆ

About the Author

ವಿ.ಗ. ನಾಯಕ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ-ಕರ್ಕಿಕೋಡಿಯವರಾದ ವಿ.ಗ. ನಾಯಕ ಅವರು ಮೂರುವರೆ ದಶಕ ದ.ಕ. ಜಿಲ್ಲೆಯ ಬಂಟ್ವಾಳದ ಅಡ್ಯನಡ್ಕದ ಜನತಾ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಕವಿ, ವಿಮರ್ಶಕ, ಚಿಂತಕ ಹಾಗೂ ಜಾನಪದ ವಿದ್ವಾಂಸರಾಗಿರುವ ಅವರು ಅಡ್ಯನಡ್ಕ ಸ್ಮೃತಿ ಪ್ರಕಾಶನ ಹಾಗೂ ವೇದಿಕೆಗಳ ಸಂಚಾಲಕರಾಗಿದ್ದಾರೆ. ಅವರಿಗೆ ಪ್ರತಿಷ್ಠಿತ ವರ್ಧಮಾನ ಸಾಹಿತ್ಯ ಪ್ರಶಸ್ತಿ, ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಸಂದಿವೆ. ಬಂಟ್ವಾಳ ತಾಲೂಕು ಒಂಬತ್ತನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು ಬಂಟ್ವಾಳ ತಾಲೂಕು ಕ.ಸಾ.ಪ. ಹಾಗೂ ದ.ಕ. ಜಿಲ್ಲಾ ಕ.ಸಾ.ಪ.ಗಳ ಗೌರವ ಕಾರ್ಯದರ್ಶಿಗಳಾಗಿದ್ದರು. ...

READ MORE

Related Books