ಮನುಸ್ಮೃತಿ

Author : ಏಕಲವ್ಯ

Pages 38

₹ 20.00




Year of Publication: 2008
Published by: ಲಂಕೇಶ ಪ್ರಕಾಶನ
Address: #9, ಈಸ್ಟ್ ಆಂಜನೇಯ ಟೆಂಪಲ್ ರಸ್ತೆ, ಬಸವನಗುಡಿ, ಬೆಂಗಳೂರು-560004

Synopsys

ಮನುಷ್ಯಧರ್ಮದಲ್ಲಿ ತಾರತಮ್ಯವನ್ನು ಪ್ರತಿಪಾದಿಸುವ ಮನುಸ್ಮೃತಿಯು ಮಾನವ ವಿರೋಧಿ ಹಾಗೂ ಜೀವ ವಿರೋಧಿ ಎಂದು ಆ ಕೃತಿಯಲ್ಲಿಯ ಶ್ಲೋಕಗಳನ್ನು ಸರಳಗಕನ್ನಡದಲ್ಲಿ ತೋರಿಸಿರುವ ಕೃತಿ -ಸಂಘಪರಿವಾರದ ಸಂವಿಧಾನ ಮನುಸ್ಮೃತಿ, ಪ್ರಾತಿನಿಧಿಕ ಶ್ಲೋಕಗಳ ಅನುವಾದ.

ಈ ಕೃತಿಯನ್ನು ಏಕಲವ್ಯ ಅವರು ರಚಿಸಿದ್ದು, ಈ ಕೃತಿಯ ಬಗ್ಗೆಯ ಇರುವ ಎಲ್ಲ ಸಂಶಯಗಳನ್ನು ನಿವಾರಿಸಿದ್ದಾರೆ ಮಾತ್ರವಲ್ಲ; ಸಂಸ್ಕೃತ ಭಾಷೆಯಲ್ಲಿರುವ ಮನುಸ್ಮೃತಿಯ ಬಗ್ಗೆ ಸಂಸ್ಕೃತ ಬಲ್ಲವರು, ಅದನ್ನು ಸಮರ್ಥಿಸಿಕೊಳ್ಳುವವರು ಈವರೆಗೂ ಮಾಡದ ಪ್ರಯತ್ನಗಳಿಗೆ ಇಲ್ಲಿ ಸೂಕ್ತ ಉತ್ತರ ಉಂಟು ಎಂಬಂತೆ ಕೃತಿಯು ಸತ್ಯವನ್ನು ಬಯಲಿಗೆಳೆದಂತೆ ತಮ್ಮ ಸಾಮಾಜಿಕ ಹೊಣೆಗಾರಿಕೆಯನ್ನು ನಿರ್ವಹಿಸಿದ್ದಾರೆ. 

ಕೃತಿಗೆ ಮುನ್ನುಡಿ ಬರೆದ ಸಾಹಿತಿ ಬಂಜಗೆರೆ ಜಯಪ್ರಕಾಶ ಅವರು ‘ಮನುಸ್ಮೃತಿ ಧರ್ಮಸೂತ್ರವನ್ನು ಬಹಿರಂಗವಾಗಿ ಪ್ರತಿಪಾದಿಸುವ ಹಾಗೂ ಭಂಡತನ ತೋರುವವರಿಗೆ ಸೂಕ್ತ ಉತ್ತರ ಕೊಡುವಂತಾಗಲು ಈ ಪ್ರಾತಿನಿಧಿಕ ಶ್ಲೋಕಗಳ ಓದು ನೆರವಾಗುತ್ತದೆ ಎಂದೂ ಕೃತಿಯ ಚಿಂತನೆಯನ್ನು ಪ್ರಶಂಸಿಸಿ, ಮನುಸ್ಮೃತಿಯ ಪ್ರಚಾರಕ ಮಂಡಳಿಯಂತಿರುವ ಕೆಲ ರಾಜಕೀಯ ಪಕ್ಷಗಳು ಅಧಿಕಾರ ಗದ್ದುಗೆ ಹಿಡಿದಿವೆ ಎಂದೂ ಆಕ್ರೋಶ ವ್ಯಕ್ತಪಡಿಸಿ, ಮನುಸ್ಮೃತಿಯ ಹೆಸರಿನಲ್ಲಿ ತಮ್ಮ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವವರ ಠಕ್ಕತನವನ್ನು ಬಯಲಿಗೆ ಎಳೆದಿದ್ದಾರೆ. 

 

About the Author

ಏಕಲವ್ಯ

‌ಏಕಲವ್ಯ ಅವರು ಸಂಘ ಪರಿವಾರದ ಸಂವಿಧಾನ ಮನುಸ್ಮೃತಿ, ಪ್ರಾತಿನಿಧಿಕ ಶ್ಲೋಕಗಳ ಅನುವಾದ ಎಂಬ ಕೃತಿ ರಚಿಸಿದ್ದಾರೆ. ...

READ MORE

Related Books