ನನ್ನ ಪ್ರಿಯವು ಈ ಪುಟ್ಟರ ಪದಗಳು

Author : ಆನಂದ ವಿ. ಪಾಟೀಲ

Pages 80

₹ 75.00




Year of Publication: 2022
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮರೇನಹಳ್ಳಿ, ವಿಜಯನಗರ, ಬೆಂಗಳೂರು- 560040
Phone: 9448804905

Synopsys

ಲೇಖಕ ಆನಂದ ಪಾಟೀಲ ಅವರ ಅನುವಾದಿತ ಬಾಲ ಸಾಹಿತ್ಯ ಕೃತಿ ʻನನ್ನ ಪ್ರಿಯವು ಈ ಪುಟ್ಟರ ಪದಗಳುʼ. ಪುಸ್ತಕದ ಮೂಲ ಹಿಂದಿಯಾಗಿದ್ದು, ರಮೇಶ ತೈಲಂಗ ಅದರ ಮೂಲ ಲೇಖಕರು. ಪುಸ್ತಕವು ಕೇಂದ್ರ ಸಾಹಿತ್ಯ ಅಕಾಡೆಮಿಯ 2013ರ ʻಬಾಲ ಸಾಹಿತ್ಯ ಪುರಸ್ಕಾರʼ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಪುಸ್ತಕದ ಬಗ್ಗೆ ಲೇಖಕರು ಹೇಳುವಂತೆ, “ಮಕ್ಕಳ ಈ ಕವಿತೆಯನ್ನು ಅನುವಾದಿಸುವುದು ಬಹು ಕಷ್ಟದ ಕೆಲಸ. ಅದನ್ನು ಕನ್ನಡಕ್ಕೆ ತರುವುದರ ಜೊತೆಗೆ ಕನ್ನಡದ ಮಕ್ಕಳಿಗೆ ತಕ್ಕುದಾಗಿ ತಲುಪಿಸುವ ಸಾಹಸ ಮಾಡಬೇಕಾಗುತ್ತದೆ. ಗದ್ಯದ ಸಂದರ್ಭದಲ್ಲಿ ಇದಷ್ಟು ಸವಾಲಿನ ಕೆಲಸವಾಗಲಿಕ್ಕಿಲ್ಲ. ಅದರಲ್ಲೂ ಇನ್ನೊಂದು ಭಾಷೆಯ ಜಾಯಮಾನ, ಅಲ್ಲಲ್ಲಿನ ಪ್ರಾದೇಶಿಕ ಸಾಂಸ್ಕೃತಿಕ ವಿಭಿನ್ನತೆಗಳನ್ನು ಇನ್ನೊಂದೇ ಆದ ಸಾಂಸ್ಕೃತಿಕ, ಭಾಷಾ ವಲಯದ ಮಕ್ಕಳಿಗೆ ಮುಟ್ಟಿಸುವುದು ಬಲು ಕಷ್ಟದ ಕೆಲಸ. ನಾನು ಸಾಧ್ಯವಾದ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ದೊಡ್ಡವರಿಗೆ ಇಲ್ಲಿನ ಸರಕನ್ನು ಮುಟ್ಟಿಸುವುದು ಅಷ್ಟು ಸವಾಲಿನದಲ್ಲ. ಹಿಂದಿಯ ಲಯಗಳಿಗೆ ಪ್ರತಿಯಾಗಿ ನಾನು ಕನ್ನಡದಲ್ಲಿ ಸಾಧ್ಯವಾಗುವ ಲಯಗಳನ್ನು, ಅಲ್ಲಲ್ಲಿ ಆಡುಮಾತಿನ ಶೈಲಿಯನ್ನು ಬಳಸಿಕೊಂಡಿದ್ದೇನೆ. ರಮೇಶ ಅವರು ತಮ್ಮ ಪರಿಸರದ ಮಕ್ಕಳ ಆಟದ ಹಾಡುಗಳ ಲಯಗಳನ್ನು, ಆಟದ ಕೆಲವೆಲ್ಲ ಶಾಬ್ಲಿಕ ಬಳಕೆಗಳನ್ನು ಅನೇಕ ಸಲ ತಂದಿರುವುದಿದೆ. ಇಲ್ಲಿನ ಕವಿತೆಗಳೆಲ್ಲ ಸುಮಾರಾಗಿ 10 ವರ್ಷ, ಅದಕ್ಕಿಂತ ಚಿಕ್ಕವರ ಗ್ರಹಿಕೆಗೆ ನಿಲುಕುವುವಾಗಿವೆ. ಈ ಪುಟ್ಟರ ಅನುಭವ ಪ್ರಪಂಚದ ಸಂಗತಿಗಳೇ ಇಲ್ಲೆಲ್ಲ ಹರಡಿಕೊಂಡಿವೆ. ಅಲ್ಲದೆ ಅಗತ್ಯವಾಗಿ ಅಂತ ಭಾವಿಸಿಕೊಂಡಹಾಗೆ ಹಾಡಿನ ಲಯಗಳನ್ನೇ ಅವರು ಬಳಸಿಕೊಂಡಿದ್ದಾರೆ. ಶೀರ್ಷಿಕೆ 'ಮೇರೆ ಪ್ರಿಯ, ಬಾಲಗೀತ' ಎನ್ನುವುದೇ ಅದನ್ನು ಹೇಳುತ್ತದೆ. ಇಲ್ಲಿನ ರಚನೆಗಳನ್ನು ನೋಡಿದಾಗ ಬಾಲ್ಯದ ಸ್ವಚ್ಛಂದತೆ, ಆಟಗುಳಿತನ, ಮೋಜು ಇಲ್ಲಿ ಹೆಚ್ಚಾಗಿ ಕಾಣಿಸಿವೆ. ಈ ಸಂಕಲನವನ್ನು ನೋಡಿದಾಗ ತೀರ ವಿಶೇಷದ ಬರವಣಿಗೆ ಅಂತೇನೂ ನನಗೆ ಅನಿಸಲಿಲ್ಲ. ಕನ್ನಡದಲ್ಲಿ ಈ ಬಗೆಯ ಬರವಣಿಗೆ ಮೊದಲ, ಎರಡನೆಯ ಘಟ್ಟದಲ್ಲಿ ಸಾಕಷ್ಟು ಕಾಣಸಿಗುತ್ತದೆ. ಕನ್ನಡದಲ್ಲಿ ಮೂರನೆಯ ಘಟ್ಟ ಎನ್ನುವುದರಲ್ಲಿ ಸಾಕಷ್ಟು ಹೊಸ ತುಡಿತ ಕಾಣುತ್ತದೆ. ರಮೇಶ ಅವರ ಈ ಸಂಕಲನದ ಹೊತ್ತಿಗಿನ ನನ್ನ ಕವಿತೆಗಳು ಸಾಕಷ್ಟು ಬೇರೆಯದನ್ನು ಹೇಳುತ್ತಿವೆ” ಎಂದು ಹೇಳಿದ್ದಾರೆ. ಪುಸ್ತಕದ ಪರಿವಿಡಿಯಲ್ಲಿ ಈಟೀಟ ಪೆಟಿಗ್ಯಾಗ ಕಡ್ಡೀ ಕಡ್ಡೀ, ಅವ್ವಾ ಅವ್ವಾ ನಮ್ಮವ್ವಾ !, ಕಾಮನಬಿಲ್ಲು, ಪೆನ್ಸಿಲ್, ಹೂವಿನ ಟೊಪಿಗಿ, ಪಾತರಗಿತ್ತಿ ಪಾತರಗಿತ್ತಿ, ಮೋತೀಚೂರ್‌ ಮೋತೀಚೂರ್!, ನೀರ ಬೇಕು ಅಂತ ಬಂತು, ಮಂಡೂಕಣ್ಣನಿಗೇನಾಗಿ ಹೋತು, ಏನ್‌ ಮಾಡಬೇಕು ಜಾಡಾ, ನಾವ ಹೊಂಟಿತು, ನದೀ ನದೀ ನದೀ ನದೀ, ಚಲ್‌ ಚಲ್ ಸೈಕಲ್, ಚಿಂವ್‌ ಚಿಂವ್ ಬೂಟು!, ಹುಡಗೂರ ಅಂದರ ಅವರು, ಎಲ್ಲಿ ಹೋಯಿತದು ಹಕ್ಕಿ !, ಗುಲ್‌ ಮೋಹ‌ರ್‌, ಚಂಡು ಮತ್ ಬಿತ್ತು, ಪುಟ್ಟ ಪುಟ್ಟ ಚುಂಚೀಲೆ, ದೊಡ್ಡವರ ಏನ ಅಂದರೂ ಹುಡುಗಾ, ಢಾಬಾದ ಹುಡುಗಾ ನಾನು, ಕನ್ನಡಿಯೊಳಗಲ್ಲಿ, ದೊಡ್ಡವರೇನೂ ಕಡಿಮಿಯಿಲ್ಲಾ, ಮೋಡದ ಹಾಡು, ಯಾಕ ಹಿಂಗ್‌ ಅಮ್ಮಾ …, ಪುಟ್ಟ ಹಣತೆಯೆ, ಅಗಲೆ ಬಿಸಿಲಿಗೆ ರಜೆಯಾ?, ಪುಟ್ ಪುಟಾಣಿ ಝಬಲಾ, ಕನಸು ಬಿತ್ತು, ಕೇಳೀರಾ, ಪುಟಾಣಿ ಬೊಂಬೆ ನಂದು, ನೀಲಿ ಕೊಡೆ, ಹಾಗೂ ಟೋಳಿ ಟೋಳಿ ಟಕ್ಕಮ್ ಟೋಳಿ! ಸೇರಿ 64 ಶೀರ್ಷೆಕೆಗಳ ಪದ್ಯಗಳಿವೆ.

About the Author

ಆನಂದ ವಿ. ಪಾಟೀಲ
(01 January 1955)

ಆನಂದ ವಿ. ಪಾಟೀಲ ಅವರು ಜನವರಿ 1-1955, ಧಾರವಾಡ ಜಿಲ್ಲೆಯ ನಾಗಲಿಂಗನ ನವಲಗುಂದದಲ್ಲಿ ಜನಿಸಿದರು. ವಿದ್ಯಾಭ್ಯಾಸ- ಘಟಪ್ರಭಾ, ನವಲಗುಂದ, ಗೋಕಾಕ, ಹಿಡಕಲ್ ಮತ್ತು ಧಾರವಾಡಗಳಲ್ಲಿ ಮುಗಿಸಿದ ಅವರು, ಜಾನಪದ ಕಲೆ ಮತ್ತು ವಿಧಿ ಕ್ರಿಯೆಗಳು' ಕುರಿತ ಪ್ರೌಢ ಪ್ರಬಂಧಕ್ಕೆ ಧಾರವಾಡ ವಿ.ವಿ.ಯಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಸದ್ಯ ಆಕಾಶವಾಣಿಯಲ್ಲಿ ಉಪ ನಿರ್ದೇಶಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. “ಅಜ್ಜಿ ಮನೆ ಬಹಳ ದೂರ', 'ಹೂ', 'ಹಕ್ಕಿ ಪುಟಾಣಿ', 'ಹೂ ಅಂದ್ರ ಹೂ', “ಅಜ್ಜಿ ಬಿಡಿಕಾಳ್ ಬಿಡಿಕಾಳು', 'ಪಪ್ಪಿ ಕೊಟ್ಟು ಬಾಪೂ', 'ಹೃದ್ಧಿ', 'ಪುಟ್ಟ ಪುಟ್ಟ ಪಾಪು ಪುಟಾಣಿ ಪಾಪು', 'ಪುಟ್ಟನ ...

READ MORE

Related Books