ಸಸ್ಯ ಪ್ರಪಂಚ

Author : ಕೃಷ್ಣಾನಂದ ಕಾಮತ್

Pages 72

₹ 50.00
Year of Publication: 1992
Published by: ಪ್ರಿಯದರ್ಶಿನಿ ಪ್ರಕಾಶನ
Address: #138, 7ನೇ ‘ಸಿ’ ಮುಖ್ಯ ರಸ್ತೆ ಹಂಪಿನಗರ ಬೆಂಗಳೂರು- 560104

Synopsys

‘ಸಸ್ಯ ಪ್ರಪಂಚ’ ಕೃತಿಯು ಕೃಷ್ಣಾನಂದ ಕಾಮತ್ ಅವರ ಸಸ್ಯ ಪ್ರಪಂಚ ಕುರಿತ ಲೇಖನಗಳ ಸಂಕಲನವಾಗಿದೆ. ಒಟ್ಟು, 8 ಅಧ್ಯಾಯಗಳನ್ನು ಒಳಗೊಂಡಿದೆ. ಈ ಕೃತಿಯು ನಮ್ಮ ವನಸಿರಿ, ಸಸ್ಯ ಗಡಿಯಾರ, ಸಸ್ಯಲೋಕದ ಕುಬ್ಜರು, ಗಿಡ ಮರ ಕೋಟ್ಯಂತರ ವರ್ಷಗಳ ಹಿಂದೆ, ಪರ್ಣಲೋಕದಲ್ಲಿ ಪರ್ಯಟನೆ, ಮುಳ್ಳಿನ ಮಹಾತ್ಮೆ, ರೂಪಾಂತರ ಹೊಂದಿದ ಪರ್ಣ- ಹೂವು, ಅರಣ್ಯ ರೋದನ ಇವೆಲ್ಲವನ್ನು ಒಳಗೊಂಡಿದೆ.

ಕೃತಿಯ ಹಿನ್ನೆಲೆಯಾಗಿ ಕೆಲವೊಂದು ವಿಚಾರಗಳು ಹೀಗಿವೆ: ಸೃಷ್ಟಿ-ಸ್ಥಿತಿ-ಲಯಗಳಿಗೆ ಕಾರಣೀಭೂತಗಳಾದ ಪ್ರಕೃತಿ ಮಾತೆಯು, ತಾನೇ ಸೃಷ್ಟಿಸಿ, ಪೋಷಿಸಿ ಕೊನೆ' 'ಲಯ'ದ ಕಾಲದಲ್ಲೂ ತನ್ನ ಒಡಲಲ್ಲಿ ಕಾಯ್ದಿರಿಸಿದ ಚಮತ್ಕಾರಗಳು ಅಸಂಖ್ಯವಾಗಿವೆ. ವಿಜ್ಞಾನಿಗಳು ಅಪಾರ ಪರಿಶ್ರಮದಿಂದ ಬೆಳಕಿಗೆ ತಂದ ಇಂಥ ಒಡಲಾಳದ ಅದ್ಭುತ ಶೋಧಗಳಿಗೆ ಸಸ್ಯಲೋಕವು ಹೊರತಾಗಿಲ್ಲ. ಇದಕ್ಕೆ ಇಲ್ಲಿಯ 'ಗಿಡ-ಮರ, ಕೋಟ್ಯಂತರ ವರ್ಷಗಳ ಹಿಂದೆ' ಪ್ರಬಂಧವು ಒಂದು ಮಾದರಿಯಾಗಿದೆ. ಜೀವಿ-ವಿಜ್ಞಾನಿಯಾಗಿ, ಪ್ರಯೋಗಶಾಲೆಯಲ್ಲಿ ಗಂಟೆಗಟ್ಟಿಲೇ ಶ್ರಮಿಸುವ ಆಸಕ್ತಿಯೊಂದಿಗೆ ಕಾಮತರಿಗೆ ವಿಶಾಲವಾದ ಸೃಷ್ಟಿಯ ದೈನಂದಿನ ವ್ಯಾಪಾರಗಳನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡುವದು ಒಂದು ಹಾಬಿ ಆಗಿತ್ತು. ಪರಿಸರದಲ್ಲಿ ಪ್ರೀತಿಯುಳ್ಳ ಪ್ರತಿಯೊಬ್ಬರೂ ಸಹನೆಯಿಂದ ಕರೆದು ನೋಡಿದಾಗ, ನಿಸರ್ಗದ ಎಣೆಯಿಲ್ಲದ ಚಮತ್ಕಾರಗಳಲ್ಲಿ ಕೆಲವನ್ನಾದರೂ ಸ್ವತಃ ಕಂಡುಕೊಳ್ಳಬಹುದು ಎಂದು ಅವರು ಆಗಾಗ ಹೇಳುತ್ತಿದ್ದರು. ಕಾಮತರು ಈ ಎಲ್ಲ ಲೇಖನಗಳನ್ನು ವಿನಂತಿಯ ಪ್ರಕಾರ ಬರೆದವುಗಳೇ!  ಗಡಿಯಾರ' 'ಸಸ್ಯಲೋಕದ ಕುರುಹು - ಕೋಟ್ಯಂತರ ವರ್ಷಗಳ ಹಿಂದಿನ ವ್ಯಕ್ತಿಗಳ ಕುರಿತ ಅಪರೂಪದ ಲೇಖನಗಳು ರೂಪ ತಾಳಿದವು ಎಂದಿದ್ದಾರೆ.

About the Author

ಕೃಷ್ಣಾನಂದ ಕಾಮತ್
(29 September 1934 - 20 February 2002)

ಖ್ಯಾತ ಸಾಹಿತಿ ಹಾಗೂ ವಿಜ್ಞಾನಿಯಾದ ಕೃಷ್ಣಾನಂದ ಕಾಮತ್ ಅವರು 1934ರ ಸೆಟ್ಪಂಬರ್ 29 ರಂದು ಜನಿಸಿದರು. ಊರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. ತಂದೆ ಲಕ್ಷ್ಮಣ ವಾಸುದೇವ ಕಾಮತ್, ತಾಯಿ ರಮಾಬಾಯಿ. ಕನ್ನಡದಲ್ಲಿ ಅನೇಕ ವೈಜ್ಞಾನಿಕ ಕೃತಿಗಳನ್ನು ರಚಿಸಿದ್ದಾರೆ.  ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕೀಟ ವಿಜ್ಞಾನದಲ್ಲಿ ಎಂಎಸ್ಸಿ ಪದವಿ, ಅಮೇರಿಕಾದ ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಪರಿಸರ ಮತ್ತು ಅರಣ್ಯ ವಿಜ್ಞಾವ ವಿಷಯದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ. ರಾಜಸ್ಥಾನದ ಉದಯಪುರ ವಿಶ್ವವಿದ್ಯಾಲಯದ ಜಾಬ್ನೇರ ಕೃಷಿ ಕಾಲೇಜಿನಲ್ಲಿ ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಪಶ್ಚಿಮ ಬಂಗಾಳದ ಪ್ಲಾಸಿಯಲ್ಲಿ ಕಾಮನ್ ವೆಲ್ತ್ ಇನ್ಸ್ಟಿಟ್ಯೂಟ್ ...

READ MORE

Related Books