17 ರಿಂದ ಕನ್ನಡ ತತ್ವಪದ ಸಾಹಿತ್ಯ-ಅವಲೋಕನದ ರಾಷ್ಟ್ರೀಯ ವಿಚಾರ ಸಂಕಿರಣ

Start Date: 17-01-2020 10:00 AM

End Date: 18-01-2020 06:00 PM

Venue: ಕಲಬುರಗಿ


ನಗರದ ಪಿಡಿಎ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಜ. 17 ರಿಂದ ಎರಡು ದಿನಗಳ ಕಾಲ ಕನ್ನಡ ತತ್ವಪದ ಸಾಹಿತ್ಯಅವಲೋಕನ ಕುರಿತಂತೆ ರಾಷ್ಟ್ರೀಯ ವಿಚಾರ ಸಂಕಿರಣ ಜರುಗಲಿದೆ.

ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಸಿರಿ ಪದವಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರ, ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆ,  ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ವಿಭಾಗ ಸಂಯುಕ್ತಾಶ್ರಯದ ಈ ವಿಚಾರ ಸಂಕಿರಣವನ್ನು ಜ. 17 ರಂದು ಬೆಳಗ್ಗೆ 10 ಗಂಟೆಗೆ ಕಾಲೇಜು ಆವರಣದ ಸ್ಯಾಕ್ ಕಟ್ಟಡದಲ್ಲಿ ಕೇಂದ್ರೀಯ ವಿ.ವಿ. ಕುಲಪತಿ ಡಾ. ಎಚ್.ಎಂ. ಮಹೇಶ್ವರಯ್ಯ ಉದ್ಘಾಟಿಸಲಿದ್ದಾರೆ. ಹೈ-ಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಭೀಮಾಶಂಕರ ಬಿಲಗುಂದಿ ಅಧ್ಯಕ್ಷತೆವಹಿಸುವರು. ಗುಲಬರ್ಗಾ ವಿವಿ ಪ್ರಭಾರ ಕುಲಪತಿ ಡಾ. ದೇವಿದಾಸ್ ಮಾಲೆ ಅವರು ಮುಖ್ಯ ಅತಿಥಿಗಳು. ಡಾ. ಮೀನಾಕ್ಷಿ ಬಾಳಿ ಅವರು ರಚಿಸಿದ ’ತತ್ವ ಪದ ಮತ್ತು ಮಹಿಳೆ’ ವಿಶೇಷ ಪ್ರಸಂಗ ಪ್ರದರ್ಶನವಿದೆ. ಚಿಂತಕಿ. ಕೆ.ಷರೀಫಾ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿರುವರು.

ಬೆಳಗ್ಗೆ 11.30ಕ್ಕೆ ನಡೆಯಲಿರುವ ಗೋಷ್ಠಿ-1 ರಲ್ಲಿ, ತತ್ವಪದ ಪರಂಪರೆ ಮತ್ತು ಪ್ರಯೋಗ ಕುರಿತು ಡಾ. ಕಲ್ಯಾಣರಾವ್ ಪಾಟೀಲ್, ತತ್ವಪದಗಳ ಸಾಮಾಜಿಕ ಸ್ವರೂಪ ಕುರಿತು ಡಾ. ವೈ.ಬಿ.ಹಿಮ್ಮಡಿ, ತತ್ವಪದಗಳ ಮಿಮಾಂಸೆ ಕುರಿತು ಡಾ. ರಹಮತ್ ತರೀಕೆರೆ  ವಿಷಯ ಮಂಡಿಸುವರು. 

ಮಧ್ಯಾಹ್ನ 2.30ಕ್ಕೆ ಗೋಷ್ಠಿ 2 ಆರಂಭವಾಗಲಿದ್ದು, ತತ್ವಪದಗಳ ಗಾಯನ ಪರಂಪರೆ ಕುರಿತು ಮಲ್ಲಿಕಾರ್ಜುನ ಕಡಕೋಳ, ಮಹಿಳಾ ತತ್ವಪದಕಾರರು ಹಾಗೂ ಅಸ್ಮಿತೆಯ ನೆಲೆಗಳು ಕುರಿತು ಡಾ. ಅಮೃತಾ ಆರ್. ಕಟಕೆ ಹಾಗೂ ತತ್ವಪದ ಮತ್ತುವಚನ ಕುರಿತು ಡಾ. ಮುದೇನೂರು ನಿಂಗಪ್ಪ ಉಪನ್ಯಾಸ  ನೀಡುವರು. 4.30 ರಿಂದ ಸಮಾನಾಂತರ ಗೋಷ್ಠಿಗಳು ಜರುಗಲಿವೆ. ಸಂಜೆ 6.30ರಿಂದ ತತ್ವಪದಗಳ ಗಾಯನ ನಡೆಯಲಿದೆ.

ಜ. 18 ರಂದು ಬೆಳಗ್ಗೆ 9ಕ್ಕೆ ಸಮಾನಾಂತರ ಗೋಷ್ಠಿಗಳು ನಡೆಯಲಿವೆ. ನಂತರ, ದಲಿತ ತತ್ವಪದಕಾರರು-ತಾತ್ವಿಕ ನೆಲೆಗಳು ಕುರಿತು ಡಾ. ಅರುಣ ಜೋಳದಕೂಡ್ಲಿಗಿ, ತತ್ವಪದಗಳು-ವರ್ಗ ಸಂಘರ್ಷ ಕುರಿತು ಕೆ. ನೀಲಾ, ತತ್ವಪದಗಳು-ರಾಚನಿಕ ಸ್ವರೂಪ ಕುರಿತು ಡಾ. ತಮಿಳ್ ಸೆಲ್ವಿ ಉಪನ್ಯಾಸ ನೀಡುವರು. ನಂತರ ತತ್ವಪದಗಳ ಗಾಯನ ಆರಂಭ.

ಮಧ್ಯಾಹ್ನ 2.30ರಿಂದ ತತ್ವಪದಗಳ ಸಂಕಲನ, ಸಂಪಾದನೆ ಪರಂಪರೆ ಕುರಿತು ಡಾ. ಕೆ.ರವೀಂದ್ರ ನಾಥ, ತತ್ವಪದಗಳ ಭಾಷೆ ಹಾಗೂ ನುಡಿಗಟ್ಟು ಕುರಿತು ಡಾ. ಬಸವರಾಜ ಕೋಡಗುಂಟಿ ಹಾಗೂ ತತ್ವಪದಗಳು-ಸೂಫಿ ಪ್ರಭಾವ ಕುರಿತು ಡಾ. ದಸ್ತಗಿರಿ ಸಾಬ ದಿನ್ನಿ ಹಾಗೂ ತತ್ವಪದಗಳು-ಭಾರತದ ದರ್ಶನಗಳು ಕುರಿತು ಡಾ. ಕೆ. ಶಾರದಾ ಉಪನ್ಯಾಸ ನೀಡುವರು.

ಸಂಜೆ 5 ಗಂಟೆಗೆ ಸಮಾರೋಪ ಜರುಗಲಿದೆ. ಹೈ-ಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ  ಡಾ. ಶಿವಾನಂದ ಎಸ್. ದೇವರಮನಿ ಅಧ್ಯಕ್ಷತೆ ವಹಿಸುವರು. ಡಾ. ಎಚ್.ಟಿ.ಪೋತೆ ಅವರಿಂದ ಸಮಾರೋಪ ನುಡಿ. ಡಾ. ಜಿ.ಆರ್. ನಾಯಕ ಹಾಗೂ ಡಾ. ಸುನೀತಾ ಮಂಜನಬೈಲ್ ಮುಖ್ಯ ಅತಿಥಿಗಳಾಗಿರುವರು. ಜ. 17 ರಂದು ಬೆಳಗ್ಗೆ 9 ಕ್ಕೆ ಪ್ರತಿನಿಧಿಗಳ ನೋಂದಣಿ ಆರಂಭವಾಗುವುದು ಎಂದು ಪ್ರಕಟಣೆ ತಿಳಿಸಿದೆ. 

 

Comments

More events

‘ಕನ್ನಡ ಸಂಶೋಧನೆ : ಓದು ಮೀಮಾಂಸೆ’ ...

08-08-2020 10:00 AM , ವೆಬಿನಾರ್

ಲೊಯೋಲ ಪದವಿ ಕಾಲೇಜಿನ ಲೊಯೋಲ ಕನ್ನಡ ಸಂಘದ ಸಹಯೋಗದಲ್ಲಿ ಕನ್ನಡ ಸಂಶೋಧಕರ ವೇದಿಕೆಯು ನಡೆಸುವ ಸಂಶೋಧಕರ ತರಬೇತಿ ಕಾರ್ಯಕ್ರಮವಿದು. ದಿನಾಂಕ 08-08-2020ರಂದು ಚಿಂತಕ ಎಸ್. ನಟರಾಜ...

ಬುಕ್ ಬ್ರಹ್ಮ ಫೇಸ್ಬುಕ್ ಲೈವ್‌ನಲ್ಲ...

08-08-2020 10:30 AM , ಬುಕ್‌ ಬ್ರಹ್ಮ ಫೇಸ್ ಬುಕ್ ಲೈವ್‌

ಕವಿತೆ ಎಂಬುದು ಸಮುದಾಯದ ಪ್ರಜ್ಞೆ, ಭಾವಾಭಿವ್ಯಕ್ತಿ. ಹೀಗೆ ಕಾವ್ಯದ ಹಲವು ಮಜಲುಗಳನ್ನು ನಿಮ್ಮ ಮುಂದೆ ತೆರೆದಿಡುವ ಪ್ರಯತ್ನದ ಹಿನ್ನೆಲೆಯಲ್ಲಿ ಬುಕ್ ಬ್ರಹ್ಮ `ಕವನ ವಾಚನ, ಕಾವ್ಯ ಕಾರ...

Magazine
With us

Top News
Exclusive
Top Events