ಅಧಿಕಾರಶಾಹಿಯ ಕ್ರೌರ್ಯದ ವಿರುದ್ಧ ಮಧ್ಯಮ ವರ್ಗದ ಜನರ ರೋಷ ಹೊರ ಚೆಲ್ಲುವ ಕೃತಿ


`ಸಾಹಿತ್ಯದಿಂದ ಏನೂ ಆಗುವುದಿಲ್ಲವೆಂದು ಗೊಣಗುವ ಈ ಸಿನಿಕ ಕಾಲದಲ್ಲಿ ಅಧಿಕಾರದ ಕೋಟೆಗಳನ್ನು ಸ್ಫೋಟಿಸುವ ಛಲದಿಂದ ಹೊರಟಿರುವ ಈ ಕಾದಂಬರಿ ಜನಸಾಮಾನ್ಯರ ಮನಸ್ಸಿನಲ್ಲಿ ಸುತ್ತಿ ಸುಳಿವ ಬಂಡುಕೋರತನವನ್ನು ದಾಖಲಿಸುತ್ತದೆ' ಎನ್ನುತ್ತಾರೆ, ನಟರಾಜ್ ಹುಳಿಯಾರ್. ಅವರು ನರಸಿಂಹಮೂರ್ತಿ ಹೂವಿನಹಳ್ಳಿ ಅವರ `ಚಂಡ ವ್ಯಾಘ್ರರು' ಕಾದಂಬರಿಯ ಕುರಿತು ಬರೆದ ಲೇಖನ ನಿಮ್ಮ ಓದಿಗಾಗಿ.

ಭ್ರಷ್ಟ ವ್ಯವಸ್ಥೆಯ ವಿರುದ್ಧ ಅಸಲಿ ಸಿಟ್ಟು, ಕುಟಿಲತೆಯನ್ನು ಬಯಲಿಗೆಳೆಯುವ ಸೀಳುಗಣ್ಣು, ಕಾದಂಬರಿಗೆ ಮಾತ್ರ ದಕ್ಕುವ ವಾಸ್ತವ ವಿವರಗಳು ಕಾಣಿಸುವ ಸತ್ಯ- ಈ ಮೂರೂ ಅಂಶಗಳು ಬೆರೆತು 'ಚಂಡ ವ್ಯಾಘ್ರರು' ಕಾದಂಬರಿ ಹುಟ್ಟಿದೆ. ಅಧಿಕಾರಶಾಹಿಯ ಕ್ರೌರ್ಯದ ವಿರುದ್ಧ ಇಂಡಿಯಾದ ಮಧ್ಯಮ ವರ್ಗದ ಜನರ ಆಳದಲ್ಲಿ ಹುದುಗಿರುವ ಅಸಹಾಯಕ ರೋಷವನ್ನು ಹೊರ ಚೆಲ್ಲುವ ಈ ಕಾದಂಬರಿ ವ್ಯಂಗ್ಯ, ವಿಡಂಬನೆಯ ಬಾಣಗಳನ್ನು ಜೋರಾಗಿಯೇ ಬಳಸಿದೆ.

ಸರ್ಕಾರಿ ಕಚೇರಿಗಳ ಭಯಾನಕ ಒಳಸುಳಿಗಳು, ಚಕ್ರವ್ಯೂಹಗಳು, ಉಡಾಫೆಗಳು... ಇವೆಲ್ಲವನ್ನೂ ಕಂಡು ವ್ಯಗ್ರಗೊಂಡ ಮುಗ್ಧ ಮನಸ್ಸಿನ ದಿಗ್ಧಮೆಯಲ್ಲಿ ಈ ಕಾದಂಬರಿಯ ಘಟನಾವಳಿಗಳು ಮೈದಾಳಿವೆ. ಸಾಹಿತ್ಯದಿಂದ ಏನೂ ಆಗುವುದಿಲ್ಲವೆಂದು ಗೊಣಗುವ ಈ ಸಿನಿಕ ಕಾಲದಲ್ಲಿ ಅಧಿಕಾರದ ಕೋಟೆಗಳನ್ನು ಸ್ಫೋಟಿಸುವ ಛಲದಿಂದ ಹೊರಟಿರುವ ಈ ಕಾದಂಬರಿ ಜನಸಾಮಾನ್ಯರ ಮನಸ್ಸಿನಲ್ಲಿ ಸುತ್ತಿ ಸುಳಿವ ಬಂಡುಕೋರತನವನ್ನು ದಾಖಲಿಸುತ್ತದೆ.

ತಮ್ಮ ಎರಡನೇ ಕಾದಂಬರಿ ಪ್ರಕಟಿಸುತ್ತಿರುವ ಗೆಳೆಯ ನರಸಿಂಹಮೂರ್ತಿಯವರ ಬರವಣಿಗೆ ಇನ್ನಷ್ಟು ಸಂಯಮ, ಅನುಕಂಪ, ಅಡಕ ಗುಣಗಳನ್ನು ಪಡೆದು ವಿಕಾಸಗೊಳ್ಳಲಿ ಎಂದು ಪ್ರೀತಿಯಿಂದ ಹಾರೈಸುವೆ.

-ನಟರಾಜ್ ಹುಳಿಯಾರ್

MORE FEATURES

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...