ಅನಾಮಧೇಯ ಗೀರುಗಳೊಂದಿಗೆ


ಅನಾಮಧೇಯ ಗೀರುಗಳಲ್ಲಿನ ಕವಿತೆಗಳು  ಹಲವು ಒಳನೋಟಗಳನ್ನು ಹೊಂದಿದ್ದು, ನಮ್ಮದೇ ನೋವು, ನಮ್ಮದೇ ಮಾತುಗಳು ಎನ್ನುವಷ್ಟು ಆಪ್ತವಾಗಿವೆ. ಇಲ್ಲಿ ತಣ್ಣನೆಯ ನೋವಿದೆ.‌ ಅದಮ್ಯ ಪ್ರೇಮದ ಪರಿಮಳವಿದೆ ಎನ್ನುತ್ತಾರೆ ದಾಕ್ಷಾಯಣಿ ಮಸೂತಿ ಅವರು ಕವಿ ನಿಝಾಮ್ ಗೋಳಿಪಡ್ಪು ಅವರ ಅನಾಮಧೇಯ ಗೀರುಗಳು ಕೃತಿಗೆ ಬರೆದ ವಿಮರ್ಶೆ ನಿಮ್ಮ ಓದಿಗಾಗಿ. 

    "ಮಳೆಯೆಂದರೆ‌ ಪೇಪರ್
         ಆಯುವವ ನಗುತ್ತಾನೆ
         ಮಳೆಯ ನಂತರದ
         ಬೀದಿಯಲ್ಲಿ
         ನಿಮ್ಮೆಲ್ಲ ಕೊಚ್ಚೆಯನ್ನು
         ದೂಡಿ ರಾಶಿಯಾಕುತ್ತದೆ"

ಈ ಸಾಲುಗಳು ಶಿರ್ಷೀಕೆಗಳಿರದ ಅನಾಮಧೇಯ ಗೀರುಗಳು ಕೃತಿಯ ಒಂದು ಕವಿತೆಯದ್ದು.‌ ಈ ಸಾಲುಗಳು ಪೇಪರ್ ಆಯುವವನ ಕಷ್ಟವನ್ನಷ್ಟೇ ಹೇಳುವುದಿಲ್ಲ. "ನಿಮ್ಮ ಕೊಚ್ಚೆಯನ್ನು ದೂಡಿ ರಾಶಿಯಾಕುತ್ತದೆ" ಹೇಳುವುದರ ಮೂಲಕ ನಮ್ಮ ಅಂತರಂಗವನ್ನು ಪ್ರಶ್ನಿಸುತ್ತದೆ. 

        "ಅಕ್ಷರಕ್ಕೆ ಬಟ್ಟೆ 
         ತೊಟ್ಟಂತಲ್ಲ ಬದುಕ
         ಉಡುವುದು ಮಹಾಜನಗಳೇ"

ಈ ಸಾಲುಗಳಲಿ  ಬದುಕಿನ ತಿಳಿವನ್ನು ಅದೆಷ್ಟು ಚೆಂದವಾಗಿ ಬಿಚ್ಚಿಡುತ್ತಾರೆ ಕವಿ. ಅನಾಮಧೇಯ ಗೀರುಗಳಲ್ಲಿನ ಕವಿತೆಗಳು  ಹಲವು ಒಳನೋಟಗಳನ್ನು ಹೊಂದಿದ್ದು, ನಮ್ಮದೇ ನೋವು, ನಮ್ಮದೇ ಮಾತುಗಳು ಎನ್ನುವಷ್ಟು ಆಪ್ತವಾಗಿವೆ. ಇಲ್ಲಿ ತಣ್ಣನೆಯ ನೋವಿದೆ.‌ ಅದಮ್ಯ ಪ್ರೇಮದ ಪರಿಮಳವಿದೆ. ಕಾತರತೆ ಒರಸುತ್ತದೆ. ನಿತ್ಯ ಬದುಕಿನ ದುಗುಡಗಳ‌ ಆಲಾಪವಿದೆ.  ಸಾಮಾಜಿಕ ಕಳಕಳಿಯ ಪ್ರಶ್ನೆಗಳಿವೆ. ಅಪಾರ ಜೀವನಪ್ರೀತಿಯ ಹರಿವು ಜಿನುಗುತ್ತದೆ. 

ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸಲು ಕವಿತೆ ಒಂದು ಮಾರ್ಗ ಎನ್ನುವುದರಲ್ಲಿ ಸಂಶಯವಿಲ್ಲ.  

"ಈಗಿಲ್ಲಿ,,,
ಕುರುಡರ ಊರಿನಲ್ಲಿ 
ಕಣ್ಣಿದ್ದವ ತಪ್ಪಿತಸ್ತ"

ಸಾಲುಗಳ ಮೂಲಕ ಕವಿ ಪ್ರಸ್ತುತ ಉಸಿರುಗಟ್ಟಿವಿಕೆ ಸನ್ನಿವೇಶಗಳನ್ನು ಮಾರ್ಮಿಕವಾಗಿ ವ್ಯಕ್ತಪಡಿಸುತ್ತಾರೆ.‌ 

" ಕಂಬನಿ ಮಾರುವ ಸಂತೆಯಲ್ಲಿ
ಫಕೀರನೂ ಗಿರಾಕಿ
ಖಾಲಿ ಶಿಲುಬೆಯ ಗಿರಾಕಿ..!"

"ಅವಳು
ಕೊಳೆತ ನಗುವಿನೊಂದಿಗೆ
ಅಳುವನ್ನು ತಿಂದು
ಹರಿವ ನಿರ್ಲಿಪ್ತ
ನದಿಯಾಗಿರುವಾಗ"

 ಸಣ್ಣ ಸಣ್ಣ ಸಾಲುಗಳಲ್ಲಿ ವಿಭಿನ್ನ ಪ್ರತಿಮೆಗಳೊಂದಿಗೆ ವ್ಯಕ್ತಪಡಿಸುವಿಕೆಯ ಕವಿಯ ಕಲೆ ಓದುಗರ ಮನಸೆಳೆಯದೆ ಇರಲಾರದು.‌     

ಪದಪ್ರಕಾಶನ ತನ್ನ ಮೊದಲ ಕೂಸಾದ ಅನಾಮಧೇಯ ಗೀರುಗಳು ಕೃತಿಯನ್ನು ತುಂಬಾ ಆಸ್ಥೆಯಿಂದ ಗುಣಮಟ್ಟದೊಂದಿಗೆ ಪ್ರಕಟಿಸಿದ್ದಾರೆ. ಶುಭವಾಗಲಿ 

ದಾಕ್ಷಾಯಣಿ ಮಸೂತಿ
ಕುರುಗೋಡು

 

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...