ಭಾರತದಲ್ಲಿ ಉಪರಾಷ್ಟ್ರೀಯತೆ ಮತ್ತು ಸಾಮಾಜಿಕ ಏಳಿಗೆ


ವಿಜಯನಗರ ಅಥವಾ ಕರ್ನಾಟಕ ಸಾಮ್ರಾಜ್ಯದ ಪತನದ ನಂತರ ಹರಿದು ಹಂಚಿಹೋಗಿದ್ದ ಕರ್ನಾಟಕ, ನಮ್ಮ ಹಿರಿಯರ ಹಲವು ದಶಕಗಳ ಹೋರಾಟದ ಫಲವಾಗಿ 1956ರಲ್ಲಿ ಒಂದಾಯಿತು. ಕರ್ನಾಟಕ ಅಂದಿನಿಂದ ಇಂದಿನವರೆಗು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರೆ ಒಂದಷ್ಟು ಸಾಧನೆಗಳ ಜೊತೆ ಹಲವು ವಿಚಾರಗಳಲ್ಲಿ ಅಂದುಕೊಂಡಷ್ಟು ಪ್ರಗತಿ ಮಾಡಲಾಗಿಲ್ಲ ಅನ್ನುವ ವಿಷಯಗಳು ಕಣ್ಣಿಗೆ ಬೀಳುತ್ತವೆ ಎನ್ನುತ್ತಾರೆ ಅನುವಾದಕಿ ಶ್ರುತಿ ಮರುಳಪ್ಪ. ಅವರು  ಉಪರಾಷ್ಟ್ರೀಯ ಮತ್ತು ಸಾಮಾಜಿಕ ಏಳಿಗೆ ಎಂಬ ತಮ್ಮ ಅನುವಾದಿತ ಕೃತಿಯಲ್ಲಿ ಬರೆದ ಮಾತುಗಳು ನಿಮ್ಮ ಓದಿಗಾಗಿ..

ಪ್ರಸ್ತಾವನೆ :
ಜಗತ್ತಿನ ಕೆಲ ಭಾಗಗಳಲ್ಲಿರುವ ಜನರ ಜೀವನಮಟ್ಟವು ಇತರ ಭಾಗಗಳಲ್ಲಿನ ಜನರ ಜೀವನಮಟ್ಟಕ್ಕಿಂತ ಹೆಚ್ಚು ಉತ್ತಮವಾಗಿರುವುದು ಏಕೆ? ಜಗತ್ತಿನ ಕೆಲವು ಪ್ರದೇಶಗಳು ಇತರ ಪ್ರದೇಶಗಳಿಗಿಂತ ಹೆಚ್ಚು ಏಳಿಗೆ ಹೊಂದಲು ಏನು ಕಾರಣ? ಪ್ರತಿಯೊಂದು ದೇಶದ ಏಳಿಗೆಯು ಬೇರೆ ಬೇರೆ ಹಂತದಲ್ಲಿರಲು ಕಾರಣಗಳೇನು? ಸಮಾಜ ವಿಜ್ಞಾನಿಗಳು ಮತ್ತು ನೀತಿ ನಿರೂಪಕರು ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ತುಂಬಾ ಅಗತ್ಯ. ಏಕೆಂದರೆ, ಮುಂದುವರಿದ ಪ್ರದೇಶಗಳೆಂದು ಗುರುತಿಸಿಕೊಳ್ಳುವ ಪ್ರದೇಶಗಳು ಮುಂದುವರೆಯಲು ಹೇಗೆ ಸಾಧ್ಯವಾಯಿತು  ಎನ್ನುವುದನ್ನು ಕಂಡುಕೊಂಡರೆ, ಜಗತ್ತಿನಲ್ಲಿ, ಮುಖ್ಯವಾಗಿ ಇನ್ನೂ ಮುಂದುವರೆಯುತ್ತಿರುವ ರಾಷ್ಟ್ರಗಳಲ್ಲಿ, ಆರೋಗ್ಯ ಮತ್ತು ಕಲಿಕೆಗಳಂತಹ ಮೂಲ ಸೌಕರ್ಯಗಳೇ ಇಲ್ಲದೆ ಬಳಲುವ ಕೋಟ್ಯಂತರ ಸಂಖ್ಯೆಯ ಜನರ  ಜೀವನವನ್ನು ಸುಧಾರಿಸಲು ಏನು ಮಾಡಬಹುದು ಎಂದು ತಿಳಿಯಲು ಈ ಉತ್ತರ ನೆರವಾಗುತ್ತದೆ. ಈ ಪುಸ್ತಕವು ಭಾರತವನ್ನು ಕುರಿತ ಅಂತಹದೇ ಒಂದು ಅಧ್ಯಯನವಾಗಿದೆ. ಎಲ್ಲ ಅಧ್ಯಯನಗಳಂತೆ ಕೇವಲ ರಾಷ್ಟ್ರೀಯ ಮಟ್ಟದ ವಿಶ್ಲೇಷಣೆಗೆ ಸೀಮಿತವಾಗದೆ, ಇನ್ನಷ್ಟು ಆಳಕ್ಕಿಳಿದು  ಉಪರಾಷ್ಟ್ರೀಯ ಅಂದರೆ ಭಾರತದ ರಾಜ್ಯಗಳ ಮಟ್ಟದ ಅಧ್ಯಯನವಾಗಿರುವುದು ಇದರ ಹೆಗ್ಗಳಿಕೆ.

ವಿಶ್ಲೇಷಣೆಯು ರಾಜ್ಯಗಳ ಹಂತದಲ್ಲೇಕಿದೆ ಎನ್ನುವುದನ್ನು ಮುಂದಿನ ಅಧ್ಯಾಯಗಳಲ್ಲಿ ವಿವರಿಸಲಾಗಿದೆ. ಭಾರತದಲ್ಲಿ ವಿವಿಧ ರಾಜ್ಯಗಳ ನಡುವೆ ಕಲಿಕೆ ಮತ್ತು ಆರೋಗ್ಯದ ಕ್ಷೇತ್ರಗಳಲ್ಲಿ ಒಂದು ಶತಮಾನದುದ್ದಕ್ಕೂ ಆಗಿರುವ ಪ್ರಗತಿಯಲ್ಲಿ ಎದ್ದುಕಾಣಿಸುವಂತಹ ವ್ಯತ್ಯಾಸ ಯಾಕಿದೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆಸಿದ ಅಧ್ಯಯನ ಇದು. ಹಲಬಗೆಯ ಸಂಶೋಧನಾ ವಿಧಾನಗಳ ನೆರವಿನಿಂದ ರಾಜ್ಯಗಳ ಚರಿತ್ರೆ ಮತ್ತು ಅಂಕಿ-ಅಂಶಗಳ ಹೋಲಿಕೆಯ ವಿಶ್ಲೇಷಣೆ ಈ ಅಧ್ಯಯನದಲ್ಲಿದೆ. ಇದರ ಫಲಿತಾಂಶವನ್ನು ಆಧರಿಸಿ ಒಂದು ನಾಡಿನಲ್ಲಿ ಅಭಿವೃದ್ಧಿಗೆ ಕಾರಣವಾಗುವ ಅಂಶಗಳಿಗೆ ಸಂಬಂಧಿಸಿದಂತೆ ಹೊಸ ವಾದವೊಂದನ್ನು ಈ ಪುಸ್ತಕ ಮುಂದಿಡುತ್ತದೆ. ರಾಜ್ಯವೊಂದರ ಏಳಿಗೆಯಲ್ಲಿ ಪ್ರಾದೇಶಿಕ ಪ್ರಜ್ಞೆಯನ್ನು ಆಧರಿಸಿ ಆಯಾ  ರಾಜ್ಯದ ಜನ ಹೊಂದಿರುವ ಒಗ್ಗಟ್ಟು ದೊಡ್ಡಮಟ್ಟದಲ್ಲಿ ನೆರವಾಗುತ್ತದೆ ಎಂಬುದು ಆ ವಾದ. ಈ ತನಕ ಏಳಿಗೆಯ ವಿಷಯದಲ್ಲಿ ಪ್ರದೇಶಗಳ ನಡುವಿನ ವ್ಯತ್ಯಾಸಕ್ಕೆ ಅಲ್ಲಿ ಆರ್ಥಿಕ ಏಳಿಗೆಗೆ ಕೊಡಲಾಗಿರುವ ಮಹತ್ವ, ಅಲ್ಲಿನ ರಾಜಕೀಯ ಪಕ್ಷಗಳು, ಅವುಗಳ ನಡುವಿನ ಚುನಾವಣಾ ಪೈಪೋಟಿಯ ತೀವ್ರತೆ ಮತ್ತು ಅಲ್ಲಿರುವ ಜನಾಂಗೀಯ ವೈವಿಧ್ಯತೆ ಮುಂತಾದವು ನಿರ್ಣಾಯಕವಾದ ಪಾತ್ರವಹಿಸುತ್ತವೆ ಎಂದು ನಂಬಲಾಗಿತ್ತು. ಅದೇ ರೀತಿಯಲ್ಲಿ, ಗುರುತಿನ ಮೇಲೆ ಕಟ್ಟಲಾದ ವಾದಗಳು ಎಂದಿಗೂ ಏಳಿಗೆಯ ಮೇಲೆ ಕೆಟ್ಟ ಪರಿಣಾಮವನ್ನೇ ಹೊಂದಿರುತ್ತವೆ ಎಂದು ನಂಬಲಾಗಿತ್ತು. ಈ ಎರಡು ಅಭಿಪ್ರಾಯಗಳಿಗಿಂತ ಭಿನ್ನವಾದ ಒಂದು ವಾದವನ್ನು ಈ ಅಧ್ಯಯನ ಮುಂದಿಡುತ್ತದೆ.  

ಪ್ರೇರಣ ಸಿಂಗ್ ಅವರು ಅಮೆರಿಕದ ಬ್ರೌನ್ ವಿಶ್ವವಿದ್ಯಾಲಯದ ವಾಟ್ಸನ್ ಇನ್ಸ್ಟಿಟ್ಯೂಟ್ ಫಾರ್ ಇಂಟರ್-ನ್ಯಾಶನಲ್ ಸ್ಟಡೀಸ್‍ನಲ್ಲಿ ಅಧ್ಯಾಪಕರಾಗಿ ಹಾಗೂ ರಾಜ್ಯಶಾಸ್ತ್ರ (ಪೊಲಿಟಿಕಲ್ ಸೈನ್ಸ್) ವಿಭಾಗದಲ್ಲಿ ರಾಜ್ಯಶಾಸ್ತ್ರ ಮತ್ತು ಅಂತರಾಷ್ಟ್ರೀಯ ಅಧ್ಯಯನದ ಮಹಾತ್ಮ ಗಾಂಧಿ ಸಹ-ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬ್ರೌನ್ ವಿಶ್ವವಿದ್ಯಾಲಯ ಸೇರುವ ಮುನ್ನ ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಡಿಪಾರ್ಟ್ ಮೆಂಟ್ ಆಫ್ ಗಾರ್ಮೆಂಟ್‍ನಲ್ಲಿ ಸಹ-ಪ್ರಾಧ್ಯಾಪಕರಾಗಿದ್ದರು. ಅಮೆರಿಕನ್ ಪೊಲಿಟಿಕನ್ ಸೈನ್ಸ್ ಅಸೋಸಿಯೇಶನ್, ಹಾರ್ವರ್ಡ್ ಅಕ್ಯಾಡೆಮಿ ಫಾರ್ ಇಂಟರ್-ನ್ಯಾಶನಲ್ ಅಂಡ್ ಏರಿಯ ಸ್ಟಡೀಸ್, ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯದ ದಿ ಸಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಫಾರ್ ಇಂಡಿಯ(CASI), ದಿ ಅಮೆರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್, ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಶಾರ್ಲೆಟ್ ಎಲಿಜಬೆತ್ ಪ್ರಾಕ್ಟರ್ ಹಾನರಿಫಿಕ್ ಫೆಲೋಶಿಪ್ ಸೇರಿದಂತೆ ಹಲವಾರು ಪ್ರಶಸ್ತಿಗಳು ಮತ್ತು ಫೆಲೋಶಿಪ್‍ಗಳನ್ನು ಸಿಂಗ್ ಅವರು ಪಡೆದಿದ್ದಾರೆ. ಕಂಪೆೇರಿಟಿವ್ ಪಾಲಿಟಿಕ್ಸ್, ಕಂಪೇರಿಟಿವ್ ಪೊಲಿಟಿಕಲ್ ಸ್ಟಡೀಸ್, ಸ್ಟಡೀಸ್ ಇನ್ ಇಂಟರ್-ನ್ಯಾಶನಲ್ ಡೆವಲಂಪ್‍ಮೆಂಟ್, ವರ್ಲ್ಡ್ ಡೆವಲಂಪ್‍ಮೆಂಟ್ ಮತ್ತು ವರ್ಲ್ಡ್ ಪಾಲಿಟಿಕ್ಸ್ ಅನ್ನು ಒಳಗೊಂಡಂತೆ ಹಲವಾರು ರ‍್ನಲ್‍ಗಳಲ್ಲಿ ಇವರ ಸಂಶೋಧನಾ ಲೇಖನಗಳು ಪ್ರಕಟವಾಗಿವೆ. ಸಿಂಗ್ ಅವರು 2013ರಲ್ಲಿ ಬಿಡುಗಡೆಯಾದ ಹ್ಯಾಂಡ್‍ಬುಕ್ ಆಫ್ ಇಂಡಿಯನ್ ಪಾಲಿಟಿಕ್ಸ್‌ ಪುಸ್ತಕದ ಸಹ-ಲೇಖಕರು.

ಅನುವಾದಕರ ಮಾತು : 
ಪ್ರಸ್ತಾವನೆಯಲ್ಲಿ ಮೂಲ ಬರಹಗಾರರು ಹೇಳಿರುವಂತೆ, ಭಾರತದಲ್ಲಿ ವಿವಿಧ ರಾಜ್ಯಗಳ ನಡುವೆ ಕಲಿಕೆ ಮತ್ತು ಆರೋಗ್ಯದ ಕ್ಷೇತ್ರಗಳಲ್ಲಿ ಒಂದು ಶತಮಾನದುದ್ದಕ್ಕೂ ಆಗಿರುವ ಪ್ರಗತಿಯಲ್ಲಿ ಎದ್ದುಕಾಣಿಸುವಂತಹ ವ್ಯತ್ಯಾಸ ಯಾಕಿದೆ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ನಡೆಸಿದ ಅಧ್ಯಯನ ಇದು. ಈ ಪುಸ್ತಕದಲ್ಲಿ ಕನ್ನಡಿಗರನ್ನಾಗಲಿ, ಕರ್ನಾಟಕವನ್ನಾಗಲಿ ಕುರಿತ ನೇರ ಅಧ್ಯಯನ, ವಿಶ್ಲೇಷಣೆಗಳಿಲ್ಲದಿದ್ದರೂ, ನಮ್ಮ ನಾಡಿನ ರಾಜಕೀಯ ಒಗ್ಗಟ್ಟು ಹಾಗು ಏಳಿಗೆಯಲ್ಲಿ ಅದಕ್ಕಿರಬಹುದಾದ ಪಾತ್ರದ ಕುರಿತು ಯೋಚಿಸಲು ಒಂದು ಸೈದ್ಧಾಂತಿಕ ನೆಲೆಗಟ್ಟಿನ ಹಾದಿಯನ್ನು ತೋರುತ್ತದೆ.

ವಿಜಯನಗರ ಅಥವಾ ಕರ್ನಾಟಕ ಸಾಮ್ರಾಜ್ಯದ ಪತನದ ನಂತರ ಹರಿದು ಹಂಚಿಹೋಗಿದ್ದ ಕರ್ನಾಟಕ, ನಮ್ಮ ಹಿರಿಯರ ಹಲವು ದಶಕಗಳ ಹೋರಾಟದ ಫಲವಾಗಿ 1956ರಲ್ಲಿ ಒಂದಾಯಿತು. ಕರ್ನಾಟಕ ಅಂದಿನಿಂದ ಇಂದಿನವರೆಗು ಬೆಳೆದು ಬಂದ ಹಾದಿಯನ್ನು ಮೆಲುಕು ಹಾಕಿದರೆ ಒಂದಷ್ಟು ಸಾಧನೆಗಳ ಜೊತೆ ಹಲವು ವಿಚಾರಗಳಲ್ಲಿ ಅಂದುಕೊಂಡಷ್ಟು ಪ್ರಗತಿ ಮಾಡಲಾಗಿಲ್ಲ ಅನ್ನುವ ವಿಷಯಗಳು ಕಣ್ಣಿಗೆ ಬೀಳುತ್ತವೆ. ಕರ್ನಾಟಕದ ಆಡಳಿತ ವ್ಯವಸ್ಥೆ, ಸಾಮಾಜಿಕ ವ್ಯವಸ್ಥೆ, ವೈಚಾರಿಕ ನಿಲುವುಗಳು, ಐತಿಹಾಸಿಕ ಕಾರಣಗಳು, ರಾಜಕೀಯ ಪ್ರಜ್ಞೆ, ಭಾರತ ಒಕ್ಕೂಟದಲ್ಲಿ ನಮ್ಮ ಪ್ರಾತಿನಿಧ್ಯ, ನಾಗರೀಕರ ಪಾಲ್ಗೊಳ್ಳುವಿಕೆ ಮತ್ತು ಸ್ಪಂದನೆ – ಹೀಗೆ ಹತ್ತು ಹಲವು ವಿಷಯಗಳು ಕರ್ನಾಟಕ ರಾಜ್ಯ ಇಂದಿನವರೆಗೆ ಕ್ರಮಿಸಿದ ದಾರಿಯನ್ನು ರೂಪಿಸುವಲ್ಲಿ ತಮ್ಮದೇ ರೀತಿಯಲ್ಲಿ ಪ್ರಭಾವ ಬೀರಿವೆ. 

ರಾಜ್ಯ ಮರುವಿಂಗಡಣಾ ಆಯೋಗದ ಶಿಫಾರಸಿನಂತೆ ಭಾಷಾವಾರು ರಾಜ್ಯಗಳಾಗಿ ಇಂದಿನ ಕರ್ನಾಟಕ, ತಮಿಳುನಾಡು, (ಒಗ್ಗೂಡಿದ್ದ) ಆಂಧ್ರಪ್ರದೇಶ, ಒರಿಸ್ಸಾ, ಬಿಹಾರ, ಉತ್ತರ ಪ್ರದೇಶ, ಮಧ್ಯ ಪ್ರದೇಶ – ಹೀಗೆ ಹಲವು ರಾಜ್ಯಗಳ ಮರುವಿಂಗಡಣೆಯಾಯಿತು. ಆರೂವರೆ ದಶಕದ ನಂತರ ನೋಡಿದರೆ ಒಂದೇ ಹೊತ್ತಿನಲ್ಲಿ ಹುಟ್ಟಿದ ಈ ಎಲ್ಲ ರಾಜ್ಯಗಳು ಬೇರೆ ಬೇರೆ ಮಟ್ಟದ ಏಳಿಗೆಯನ್ನು ಸಾಧಿಸಿವೆ. ತನ್ನ ನೆರೆಯ ರಾಜ್ಯಗಳ ಹೋಲಿಕೆಯಲ್ಲಿ ರ‍್ನಾಟಕದ ಸಾಧನೆ ಏನು? ನೆರೆಯ ರಾಜ್ಯಗಳಲ್ಲಿ ಸಾಧ್ಯವಾಗಿದ್ದು ಕರ್ನಾಟಕದಲ್ಲಿ ಏಕೆ ಆಗಲಿಲ್ಲ? ಅಥವಾ ಇಲ್ಲಿ ಸಾಧ್ಯವಾಗಿದ್ದು ಬೇರೆಡೆ ಏಕೆ ಸಾಧ್ಯವಾಗಲಿಲ್ಲ ಎನ್ನುವುದನ್ನು ಅರಸುವ ಅಗತ್ಯವಿದೆ. ಈ ಪುಸ್ತಕದಲ್ಲಿ ಇಂತಹ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ಸೈದ್ಧಾಂತಿಕ ನಿಲುವುಗಳನ್ನು ಮುಂದಿಡಲಾಗುತ್ತಿದೆ.      
ಪುಸ್ತಕದ ಮೂಲ ಅವತರಣಿಕೆಯು ಇಂಗ್ಲಿಶಿನಲ್ನಾ2016ರಲ್ಲಿ ಬಿಡುಗಡೆಗೊಂಡಿತ್ತು. ಆದ್ದರಿಂದ ಅಧ್ಯಯನದಲ್ಲಿ ಬಳಸಿರುವ ಅಂಕಿಅಂಶಗಳು 2016ಕ್ಕಿಂತ ಹಿಂದಿನವು. ಹಾಗೆಯೇ, ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ರ‍್ಕಾರಿ ಹಾಗು ಖಾಸಗಿ ವೆಬ್ಸೈಟ್‍ಗಳ ಕೊಂಡಿಗಳು ಇಂದು ಕರ‍್ಯನರ‍್ವಹಿಸದಿರುವ ಸಾಧ್ಯತೆಗಳಿವೆ. ಈ ಪುಸ್ತಕವನ್ನು ಹಲವು ಹಂತಗಳಲ್ಲಿ ತಿದ್ದಿ-ತೀಡಿ ಈ ರೂಪಕ್ಕೆ ತರಲು ಮರ‍್ಗರ‍್ಶನ ಮಾಡಿದ ಹಿರಿಯರಿಗೆ ನನ್ನ ನಮಸ್ಕಾರಗಳು, ಓದಿ ಸಲಹೆಗಳನ್ನು ನೀಡಿದ ಗೆಳೆಯ-ಗೆಳತಿಯರಿಗೆ ನನ್ನ ಪ್ರೀತಿಪರ‍್ವಕ ವಂದನೆಗಳು.  ನಮಸ್ಕಾರಗಳು.

-ಶ್ರುತಿ ಮರುಳಪ್ಪ

ಉಪರಾಷ್ಟ್ರೀಯ ಮತ್ತು ಸಾಮಾಜಿಕ ಏಳಿಗೆ ಕೃತಿ ಪರಿಚಯ ಇಲ್ಲಿದೆ..
 

MORE FEATURES

ಆಧುನಿಕ ವಿಕಾರಕ್ಕೊಂದು ಕನ್ನಡಿ

18-05-2024 ಬೆಂಗಳೂರು

‘ತೊಟ್ಟು ಕ್ರಾಂತಿ’ ಕಥಾ ಸಂಕಲನವನ್ನು ಓದುತ್ತಿದ್ದಂತೆಯೇ ಆಧುನಿಕ ವಿಕಾರ ಮತ್ತು ಸಾಂಪ್ರದಾಯಕ ಅನಾಚಾರ ಹಾಸ...

ಸಾಮರಸ್ಯದ ಮಾನವ ಸಂಬಂಧಗಳಿಗೆ ಇನ್ನೂ ಶಕ್ತಿ ಇದೆ

18-05-2024 ಬೆಂಗಳೂರು

‘ಲೋಕ ವ್ಯವಹಾರದಲ್ಲಿ ದ್ವೇಷ-ಕಷ್ಟ-ನಷ್ಟ, ಬಡತನ, ಶೋಷಣೆಗಳು ಎಷ್ಟೇ ಇದ್ದರೂ ಬದುಕಿನಲ್ಲಿ ಆಶಾವಾದ, ಮನುಷ್ಯನಲ್ಲಿ ...

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...