ಡೈವೋರ್ಸ್ ಎಂಬ ಹುಣ್ಣಿನಿಂದ, ಅದೆಷ್ಟೋ ಕುಟುಂಬಗಳನ್ನು ಬೀದಿಗೆ ಎಳೆಯುತ್ತಿದೆ


'30 ವರ್ಷಗಳ ಹಿಂದಿರ ಬಹುದು. ಆಗ ಈ ಡೈವೋರ್ಸ್ ಪದ ಕೇಳುವುದೇ ಅತಿ ವಿರಳವಿತ್ತು. ಆಗ ಹೊಂದಾಣಿಕೆಯೇ ಜೀವನವಾಗಿತ್ತು. ಒಂದುಗೂಡಿ ಬಾಳುವುದು, ಸ್ವರ್ಗಸುಖವೆಂದು ಭಾವಿಸಿದ್ದರು. ಆಗ ಅಮೇರಿಕಾದಲ್ಲಿ ನಡೆಯುವ ವಿಚ್ಚೇದನೆಗಳ ಕುರಿತು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿರಿಸಿ ಕೊಳ್ಳುತ್ತಿದ್ದರು' ಎನ್ನುತ್ತಾರೆ, ಮಂಜುಕನ್ನಿಕಾ. ಅವರು ತಮ್ಮ ‘ಡೈವೋರ್ಸ್’ ಕಾದಂಬರಿಗೆ ಬರೆದ ಲೇಖಕರ ಮಾತು ನಿಮ್ಮ ಓದಿಗಾಗಿ.

30 ವರ್ಷಗಳ ಹಿಂದಿರ ಬಹುದು. ಆಗ ಈ ಡೈವೋರ್ಸ್ ಪದ ಕೇಳುವುದೇ ಅತಿ ವಿರಳವಿತ್ತು. ಆಗ ಹೊಂದಾಣಿಕೆಯೇ ಜೀವನವಾಗಿತ್ತು. ಒಂದುಗೂಡಿ ಬಾಳುವುದು, ಸ್ವರ್ಗಸುಖವೆಂದು ಭಾವಿಸಿದ್ದರು. ಆಗ ಅಮೇರಿಕಾದಲ್ಲಿ ನಡೆಯುವ ವಿಚ್ಚೇದನೆಗಳ ಕುರಿತು ಅಚ್ಚರಿಯಿಂದ ಮೂಗಿನ ಮೇಲೆ ಬೆರಳಿರಿಸಿ ಕೊಳ್ಳುತ್ತಿದ್ದರು. ಸಣ್ಣ, ಪುಟ್ಟ ವಿಷಯಗಳಿಗೆ ಡೈವೋರ್ಸ್ ತೆಗೆದು ಕೊಳ್ಳುವ ಆ ಜನ ವಿಚಿತ್ರ ಸ್ವಭಾವದವರು ಎಂದು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇತ್ತೀಚಿಗೊಂದು ಡೈವೋರ್ಸ್ ಪ್ರರಕರಣ, ಆಕೆಯ ಡೈವೋರ್ಸ್ ಗೆ ಕಾರಣ, ತನಗೆ ಮದುವೆಯಾಗಿ 4-5 ತಿಂಗಳಾಗಿವೆ, ಗಂಡ ಒಂದು ದಿನವೂ ತನ್ನ ಜೊತೆ ಜಗಳ ಮಾಡಿಲ್ಲ, ತಾನು ಏನೇ ತಪ್ಪು ಮಾಡಿದರೂ ಬಯ್ಯುವುದಿಲ್ಲ, ಅವನ ಅತಿಯಾದ ಒಳ್ಳೆಯತನ ನನಗೆ ಹಿಂಸೆಯಾಗಿದೆ. ಅಂತಹವನೊಂದಿಗೆ ಬಾಳುವುದು, ನನ್ನಿಂದ ಸಾಧ್ಯವಿಲ್ಲ. ನನಗೆ ಡೈವೋರ್ಸ್ ಕೊಡಿಸಿ.

ಇಂದು ಭಾರತೀಯರಾದ ನಾವೂ ಸಣ್ಣ ಪುಟ್ಟ ವಿಚಾರಗಳಿಗೆ ಡೈವೋರ್ಸ್ ಬೇಕೆಂದು ನ್ಯಾಯಾಲಯದ ಮೆಟ್ಟಿಲು ಏರುತ್ತಿದ್ದೀವಿ. ಡೈವೋರ್ಸ್ ಕಾದಂಬರಿಯಲ್ಲಿ ಒಬ್ಬ ಕಕ್ಷಿದಾರಳು ಹಾಗೂ ನ್ಯಾಯಾಧೀಶರ ಜೀವನದಲ್ಲಿ ನಡೆಯುವ ಕಾರಣಗಳ ಸಂಭಾಷಣೆಯೊಂದಿಗೆ ಸಾಗುವುದು. ಡೈರ್ವೋರ್ಸನ್ನು ಆ ಕಕ್ಷಿದಾರಳು ಯಾಕೆ ಕೇಳಿದಳು ಎಂಬುದು ಒಂದು ಕಾರಣ, ನ್ಯಾಯಾಧೀಶನಾದ ವ್ಯಕ್ತಿ ತನ್ನ ಒಳ್ಳೆಯತನದಿಂದಲೇ ಹೆಂಡತಿಯಿಂದ ದೂರವಾಗಿದ್ದು ಯಾಕೆ ಎಂಬ ಕಾರಣ, ಇಬ್ಬರ ಸಂಬಾಷಣೆಯೊಂದಿಗೆ ಕತೆಯು ಸಾಗುವುದು. ನಮ್ಮ ಸಮಾಜ ಇಂದು ಡೈವೋರ್ಸ್ ಎಂಬ ಹುಣ್ಣಿನಿಂದ, ಅದೆಷ್ಟೋ ಕುಟುಂಬಗಳನ್ನು ಬೀದಿಗೆ ಎಳೆಯುತ್ತಿದೆ. ಅವಿಭಕ್ತ ಕುಟುಂಬಗಳು, ವಿಭಕ್ತ ಕುಟುಂಬಗಳಾಗಿ, ವಿಭಕ್ತ ಕುಟುಂಬಗಳು ಒಡೆದು ಗಂಡ ಹೆಂಡತಿ, ಮಗು ಎಂದಿದ್ದು, ಈಗ ಒಂಟಿ ಕುಟುಂಬದಿಂದ ಗಂಡ, ಹೆಂಡತಿ ಪರಸ್ಪರ ಬಾಳುವಂತಹ ಪರಿಸ್ಥಿತಿ ಎದುರಾಗಿದೆ.

ನನ್ನ ಈ ಕಾದಂಬರಿಯನ್ನು ಪ್ರಕಟಿಸಲು ಮುಂದೆ ಬಂದ ಪ್ರಕಾಶಕರಿಗೆ, ಮುಖಪುಟವನ್ನು ಅಂದವಾಗಿ ಚಿತ್ರಿಸಿದ ಚಿತ್ರಕಾರರಿಗೆ, ಕಾದಂಬರಿಯನ್ನು ಸುಂದರವಾಗಿ ಮುದ್ರಿಸಿದ ಮುದ್ರಣಕಾರರಿಗೆ ಹಾಗೂ ನನ್ನ ಬರವಣಿಗೆಯನ್ನು ಪ್ರೋತ್ಸಾಹಿಸಿದ ನನ್ನ ಅಕ್ಕಂದಿರಿಗೆ ನನ್ನ ಕೃತಜ್ಞತೆಗಳನ್ನು ಅರ್ಪಿಸುತ್ತಾ, ವಂದನೆಗಳೊಂದಿಗೆ.

ಮಂಜುಕನ್ನಿಕಾ

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...