'ಪೋಸ್ಟ್ ಮ್ಯಾನ್ ಗಂಗಣ್ಣ' ಇವರ ಹಳ್ಳಿಯ ಆಸುಪಾಸಿನಲ್ಲಿ ನಡೆಯುವ ಕಥೆ, ಅದರ ಜೊತೆಗೆ ಇವರ ಬಾಲ್ಯವೂ ತಳುಕಿಹಾಕಿಕೊಂಡಿದೆ. ಆದ್ದರಿಂದ ಕಾದಂಬರಿ ಹೆಚ್ಚು ಆತ್ಮಕಥಾನಕವಾಗಿದೆ. ಎನ್ನುತ್ತಾರೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮೂಡ್ನಾಕೂಡು ಚಿನ್ನಸ್ವಾಮಿ. ಅವರು ಲೇಖಕ ಎಂ. ಜವರಾಜ್ ಅವರು ಬರೆದ 'ಪೋಸ್ಟ್ ಮ್ಯಾನ್ ಗಂಗಣ್ಣ' ಕಾದಂಬರಿಗೆ ಬರೆದ ಬೆನ್ನುಡಿ..
ಎಂ. ಜವರಾಜ್ ನಮ್ಮ ತಾಲ್ಲೋಕಿನ ಮುಖ್ಯ ಬರಹಗಾರರಲ್ಲಿ ಒಬ್ಬರಾಗಿ ಹೊರಹೊಮ್ಮುತ್ತಿದ್ದಾರೆ. ಸ್ವಲ್ಪ ತಡವಾಗಿ ಬರಹಕ್ಕೆ ತೊಡಗಿಕೊಂಡಿರಬಹುದು. ಆದರೂ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೆಲಸಮಾಡಿದ್ದಾರೆ. ಕವಿತೆ, ಕಥೆ, ಕಾದಂಬರಿ ಮತ್ತು ವಿಮರ್ಶೆಯಲ್ಲೂ ಕೈಯಾಡಿಸಿ ಗೆದ್ದಿದ್ದಾರೆ. ಪ್ರಸ್ತುತ ಒಂದು ಕಿರು ಕಾದಂಬರಿಯನ್ನು ಪ್ರಕಟಿಸುತ್ತಿದ್ದಾರೆ. 'ಪೋಸ್ಟ್ ಮ್ಯಾನ್ ಗಂಗಣ್ಣ' ಇವರ ಹಳ್ಳಿಯ ಆಸುಪಾಸಿನಲ್ಲಿ ನಡೆಯುವ ಕಥೆ, ಅದರ ಜೊತೆಗೆ ಇವರ ಬಾಲ್ಯವೂ ತಳುಕಿಹಾಕಿಕೊಂಡಿದೆ. ಆದ್ದರಿಂದ ಕಾದಂಬರಿ ಹೆಚ್ಚು ಆತ್ಮಕಥಾನಕವಾಗಿದೆ. ಒಬ್ಬ ನಿರ್ಗತಿಕ, ಮುಗ್ಧ ವೃತ್ತಿ ಗಂಗಶೆಟ್ಟಿ ಅನುಕಂಪ ಗಿಟ್ಟಿಸಿಕೊಂಡು ಪೋಸ್ಟ್ ಮ್ಯಾನ್ ಆಗಿ ಅಸ್ತಿತ್ವ ಪಡೆದುಕೊಳ್ಳುವುದು ಮತ್ತು ಹಳ್ಳಿಯ ಸಬ್ ಪೋಸ್ಟ್ ಆಫೀಸಿನ ಪಡಿಪಾಟಲುಗಳನ್ನು ಗಂಗಣ್ಣನ ಮೂಲಕ ಹೇಳುವುದು ಕಥೆಯ ಮುಖ್ಯಧಾರೆಯಾಗಿದೆ. ಅಂಚೆ ಇಲಾಖೆಯ ಒಳಹೊರಗನ್ನು ಲೇಖಕರು ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ ಎನ್ನಬಹುದು. ಟಿ. ನರಸೀಪುರದ ಸುತ್ತಲ ಆಡುಭಾಷೆಯನ್ನು ಚೆನ್ನಾಗಿ ದುಡಿಸಿಕೊಂಡಿದ್ದಾರೆ. ಅಲ್ಲಲ್ಲಿ ತಮ್ಮ ಬಾಲ್ಯಕಾಲದ ಜೀವನ ಚಿತ್ರಗಳನ್ನು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಥೆ ಹೆಚ್ಚು ಸಂಘರ್ಷಗಳಿಲ್ಲದೆ ಸಲಿಲವಾಗಿ ಓದಿಸಿಕೊಂಡು ಹೋಗುತ್ತದೆ. ಮುಖ್ಯವಾಗಿ ಒಂದು ಕಾಲಘಟ್ಟದ ಗ್ರಾಮೀಣ ಬದುಕಿಗೆ ಈ ಕಿರು ಕಾದಂಬರಿ ಕನ್ನಡಿ ಹಿಡಿದಂತಿದೆ. ಜವರಾಜ್ ಅವರು ಇನ್ನೂ ಹೆಚ್ಚು ಬರೆಯಲಿ ಎಂದು ಆಶಿಸುತ್ತಾ ಸದ್ಯದ ಈ ಕೃತಿಗೂ ಅವರ ಮುಂಬರುವ ಕೃತಿಗಳಿಗೂ ಯಶಸ್ಸನ್ನು ಹಾರೈಸುತ್ತೇನೆ.
"ದಲಿತರು ಒಳಪಂಗಡಗಳ ಭಾವನಾತ್ಮಕ ಸೆಳವಿಗೆ ಸಿಕ್ಕು ಮೂಲ ಸಿದ್ದಾಂತದಿಂದ ದೂರವಾಗುತ್ತಿದ್ದಾರೆ. ಇಂದು ಅಂಬೇಡ್ಕರ್ ವಿ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BlrLitFest)ವು ಪ್ರತಿ ವರ್ಷ ನಡೆಯುವ ಅತ್ಯಂತ ನಿರೀಕ್ಷಿತ ಸಾಂಸ್ಕೃತಿಕ ಕಾರ್ಯ...
ಮಗಳ ನೋವನ್ನು ಕಂಡು ಹೆತ್ತವರು ಜರ್ಜರಿತರಾಗುವ ದೃಶ್ಯವನ್ನು ಹಾಗೂ ಅಪ್ಪ ಅಮ್ಮನ ಧಾವಂತದ ಬದುಕಿನಲ್ಲಿ ಮಕ್ಕಳು ಬಡವಾಗುವ ಸ...
©2025 Book Brahma Private Limited.