ಕಾವ್ಯದ ಉದ್ದಕ್ಕೂ ಕನ್ನಡತನ ತುಂಬಿ ತುಳುಕಾಡುತ್ತಿದೆ


"ಮುಸ್ಲಿಂ ಸಮುದಾಯದ ಕೌಟುಂಬಿಕ ಪರಿಸರದಿಂದ ಬಂದ ಇವರ ಕಾವ್ಯದಲ್ಲಿ ಎಲ್ಲೂ ಅವರ ಧರ್ಮ ಇಣಿಕಿ ಹಾಕುವುದೇ ಇಲ್ಲ! ಅದು 'ಕನ್ನಡ' ಧರ್ಮವಾಗಿ ರೂಪಾಂತರ ಪಡೆದಿರುವುದಕ್ಕೆ ಕಾರಣ ಅವರ ಕನ್ನಡ ಅಧ್ಯಯನದ ಶೈಕ್ಷಣಿಕ ಹಿನ್ನಲೆ. ಅವರ ಕಾವ್ಯದ ಉದ್ದಕ್ಕೂ ಕನ್ನಡತನ ತುಂಬಿ ತುಳುಕಾಡುತ್ತಿದೆ," ಎನ್ನುತ್ತಾರೆ ಡಾ.ಮೀರಾಸಾಬಿಹಳ್ಳಿ ಶಿವಣ್ಣ. ಅವರು ಶಬ್ರಿನಾ ಮಹಮದ್ ಅಲಿ ಅವರ 'ಬಿಳಿ ಹಾಳೆಯ ಮೇಲೆ‌ ಕೆಂಪು ಶಾಯಿ' ಕೃತಿ ಕುರಿತು ಬರೆದ ವಿಮರ್ಶೆ ನಿಮ್ಮ ಓದಿಗಾಗಿ.

'ಬಿಳಿ ಹಾಳೆಯ ಮೇಲೆ‌ ಕೆಂಪು ಶಾಯಿ' ಕೃತಿಗೆ ಜಾನಪದ ವಿದ್ವಾಂಸರಾದ ಮೀರಾಸಾಬಿಹಳ್ಳಿ ಶಿವಣ್ಣ ಅವರು ಬರೆದ ಬೆನ್ನುಡಿ. ಶ್ರೀಮತಿ ಶಬ್ರಿನಾ ಮಹಮದ್ ಅಲಿ ಅವರು ಸಾಹಿತ್ಯಲೋಕದ ಎಲ್ಲ ಪಯಣಿಗರಂತೆ 'ಬಿಳಿ ಹಾಳೆಯ ಮೇಲೆ ಕೆಂಪು ಶಾಯಿ'ಯ ಹೆಜ್ಜೆ ಗುರುತಿನ ಮೂಲಕ ಕಾವ್ಯಲೋಕಕ್ಕೆ ಕಾಲಿಟ್ಟಿದ್ದಾರೆ.

ಮುಸ್ಲಿಂ ಸಮುದಾಯದ ಕೌಟುಂಬಿಕ ಪರಿಸರದಿಂದ ಬಂದ ಇವರ ಕಾವ್ಯದಲ್ಲಿ ಎಲ್ಲೂ ಅವರ ಧರ್ಮ ಇಣಿಕಿ ಹಾಕುವುದೇ ಇಲ್ಲ! ಅದು 'ಕನ್ನಡ' ಧರ್ಮವಾಗಿ ರೂಪಾಂತರ ಪಡೆದಿರುವುದಕ್ಕೆ ಕಾರಣ ಅವರ ಕನ್ನಡ ಅಧ್ಯಯನದ ಶೈಕ್ಷಣಿಕ ಹಿನ್ನಲೆ. ಅವರ ಕಾವ್ಯದ ಉದ್ದಕ್ಕೂ ಕನ್ನಡತನ ತುಂಬಿ ತುಳುಕಾಡುತ್ತಿದೆ. ಅವರ ಮೈಮನವೆಲ್ಲಾ ಕನ್ನಡ ಸಂಸ್ಕೃತಿಯೇ ಆವರಿಸಿಕೊಂಡಿರುವುದಕ್ಕೆ ಅವರ 'ಕನ್ನಡ ಕೌಸ್ತುಭ' ಮನೆಯ ಹೆಸರೇ ಸಾಕ್ಷಿಯಾಗಿದೆ.

ಹೊಸದಾಗಿ ಕಾವ್ಯಕ್ಷೇತ್ರ ಪ್ರವೇಶಿಸಿದವರಿಗೆ ಸಹಜವಾಗಿ ಕನ್ನಡದ ಭಾವುಕ ವಿಷಯಗಳಾದ ಭಾಷಾಪ್ರೇಮ, ಭಾರತಾಂಬೆ, ಕನ್ನಡಾಂಬೆ, ತಂದೆ-ತಾಯಿ, ದೇಶಪ್ರೇಮ, ಕಿತ್ತೂರ ರಾಣಿ, ಗಾಂಧಿ, ಶಾಸ್ತ್ರೀ ಮುಂತಾದ ಆಕರ್ಷಣೆಗೆ ಒಳಗಾಗುವುದು ಸಾಮನ್ಯ. ಅಂಥ ಪದ್ಯಗಳ ಮೋಹದಿಂದ ಬಿಡಿಸಿಕೊಂಡು ರೈತನ ಕೆಸರುಗದ್ದೆಯ ಕಾಯಕವನ್ನು ಸಮುದ್ರ ಮಥನದಂತೆ, 'ಅಂಬೇಡ್ಕರ್ ರನ್ನು ಪದಗಳಲಿ ಹಿಡಿದಿಡಲಾಗದ ಅಸಾಮನ್ಯ'ನೆಂದು, ಸ್ತ್ರೀ ಬಿಡುಗಡೆಯ ರೂಪಕದಂತೆ 'ಅಕ್ಕ'ನನ್ನು ಗ್ರಹಿಸುವ ಕವಿತೆಗಳಲ್ಲಿ ಹೊಸ ಸೃಷ್ಟಿ ಇದೆ.

ಜೀವನ ಸಂಗಾತಿಯೊಂದಿಗಿನ ಒಡನಾಟ, ಪ್ರೀತಿ ಪ್ರೇಮ ಕುರಿತ ಕವಿತೆಗಳು ಇವರ ಭರವಸೆಯ ಭವಿಷ್ಯದ ಕಾವ್ಯಕ್ಕೆ ಮುನ್ನುಡಿ ಬರೆಯುವಂತಿವೆ.

ಡಾ.ಮೀರಾಸಾಬಿಹಳ್ಳಿ ಶಿವಣ್ಣ
ಜಾನಪದ ವಿದ್ವಾಂಸರು
ಬೆಂಗಳೂರು

MORE FEATURES

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...

ಹೇಳಿ ಕೇಳಿ ಇದು ವ್ಯಕ್ತಿ ಚಿತ್ರಗಳ ಸಂಗ್ರಹ; ಕೆ.ಸತ್ಯನಾರಾಯಣ

16-05-2024 ಬೆಂಗಳೂರು

"ಪಶ್ಚಿಮದ ಆಧುನಿಕತೆಯ ಮುಖ್ಯ ಶಾಪವೆಂದರೆ ನಾವು ಬದುಕುತ್ತಿರುವ ಕಾಲದಲ್ಲಿ ಯಾವುದೂ ಯಾರೂ ಪವಿತ್ರರಾಗಿ/ಪವಿತ್ರವಾಗಿ...