ಸಾಹಿತ್ಯ ಯಾತ್ರೆಗೆ ಹರಿದುಬಂದ ಜ್ಞಾನ ಸಾಗರ

Date: 19-01-2023

Location: ಜೈಪುರ


ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಲೇಖಕ ಅಬ್ದುಲ್‌ ರಜಾಕ್‌ ಗುರ್ನಾ ಅವರು ಗುರುವಾರ ಜೈಪುರ ಸಾಹಿತ್ಯೋತ್ಸವದ ೧೬ನೇ ಆವೃತ್ತಿಯನ್ನು ಉದ್ಘಾಟಿಸಿದರು. ನಮಿತಾ ಗೋಖಲೆ ಮತ್ತು ಸಂಜಯ್‌ ರಾಯ್‌ ಕೂಡ ಚಿತ್ರದಲ್ಲಿದ್ದಾರೆ. ಉದ್ಘಾಟನೆ ನಂತರ ವಿವಿಧ ವಿಷಯಳ ಕುರಿತ ಗೋಷ್ಠಿಗಳು ನಡೆದವು.

ಜೈಪುರ: ’ಬರವಣಿಗೆಯು ಪ್ರತಿರೋಧದ ಒಂದು ವಿಧಾನ’ ಎಂದು ನೊಬೆಲ್‌ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಲೇಖಕ ಅಬ್ದುಲ್‌ ರಜಾಕ್‌ ಗುರ್ನಾ ಅಭಿಪ್ರಾಯಪಟ್ಟರು.

ಗುರುವಾರ ಜೈಪುರ ಸಾಹಿತ್ಯ ಉತ್ಸವದ ೧೬ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು ’ಬರವಣಿಗೆಯು ಘನತೆ ಮತ್ತು ಶೌರ್ಯದ ಸಂಕೇತ ಮಾತ್ರವಾಗಿರದೆ ಮಹತ್ವದ ಸಂಗತಿಗಳನ್ನು ಜೀವಂತವಾಗಿಡುವ-ದಾಖಲಿಸುವ ಪ್ರಕ್ರಿಯೆ’ ಎಂದು ಅವರು ಪ್ರತಿಪಾದಿಸಿದರು.

ಜೈಪುರದ ಪ್ರತಿಷ್ಠಿತ ಕ್ಲಾರ್ಕ್ ಅಮೇರು ಹೋಟೆಲ್‌ನಲ್ಲಿ ಕಿಕ್ಕಿರಿದು ನೆರೆದಿದ್ದ ಜನರ ನಡುವೆ ಅದ್ಧೂರಿಯಿಂದ ಆರಂಭಗೊಂಡಿತು. ಬೆಳಗಿನ ಸಂಗೀತದ ಮೂಲಕ ಆರಂಭವಾದ ಉತ್ಸವಕ್ಕೆ ಗುರ್ನಾ ಅವರು ಅಧಿಕೃತವಾಗಿ ಚಾಲನೆ ನೀಡಿ ಆಶಯದ ಮಾತುಗಳನ್ನಾಡಿದರು.

ಯಾವ ವಿಚಾರ ಮತ್ತು ನಂಬಿಕೆಗಳು ಮಹತ್ವದ್ದು ಎಂದು ನಮಗನ್ನಿಸುತ್ತದೆಯೋ ಅವುಗಳನ್ನು ಎತ್ತಿ ಹಿಡಿಯುವುದು ಮುಖ್ಯ. ನಿರಂಕುಶ ಪ್ರಭುತ್ವದ ವಿರುದ್ಧ ಧ್ವನಿ ಎತ್ತುವುದು ಮತ್ತು ಸೂಕ್ತ ವೇದಿಕೆಗಳಲ್ಲಿ ಮಾತನಾಡುವ ಮೂಲಕ ಜನರಲ್ಲಿ ಚೈತನ್ಯ ತುಂಬುವ ಕೆಲಸ ಲೇಖಕರು ಮಾಡಬೇಕಾಗುತ್ತದೆ ಎಂದು ಅವರು ಪ್ರತಿಪಾದಿಸಿದರು.

ಗುರ್ನಾ ಅವರು ದೀಪ ಬೆಳಗಿಸಿದ ನಂತರ ರಾಜಸ್ಥಾನಿ ಕಲಾವಿದರು ಶಂಖವಾದ್ಯದ ಮೂಲಕ ಧ್ವನಿಪೂರ್ಣ ಉದ್ಘಾಟನೆ ನೆರವೇರಿಸಿದರು.

ಜಗತ್ತಿನ ಅತಿದೊಡ್ಡ ಸಾಹಿತ್ಯ ಉತ್ಸವದಲ್ಲಿ ವಿಶ್ವದ ಎಲ್ಲೆಡೆಗಳಿಂದ ಬಂದ ಅತ್ಯುತ್ತಮ ಚಿಂತಕರು ತಮ್ಮ ವಿಚಾರಗಳನ್ನು ಮಂಡಿಸಲಿದ್ದಾರೆ. ೨೫೦ಕ್ಕೂ ಹೆಚ್ಚು ವಿದ್ವಾಂಸರು ೨೪೦ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.

ನೊಬೆಲ್ ಸಾಹಿತ್ಯ ಪ್ರಶಸ್ತಿ, ಬೂಕರ್‌ ಪ್ರಶಸ್ತಿ ಸೇರಿದಂತೆ ವಿಶ್ವದ ಪ್ರಮುಖ ಸಾಹಿತ್ಯಕ ಮನ್ನಣೆ ಪಡೆದ ಲೇಖಕರೆಲ್ಲ ಈ ಉತ್ಸವದಲ್ಲಿ ಭಾಗವಹಿಸುತ್ತಿರುವುದು ವಿಶೇಷ.

ಉತ್ಸವದ ಆಯೋಜಕರಾದ ಸಂಜಯ್‌ ರಾಯ್‌ ಮಾತನಾಡಿ ’ಜೈಪುರ ಸಾಹಿತ್ಯ ಉತ್ಸವವು ಸಾಹಿತ್ಯದ ಕುಂಭ ಮೇಳ’ ಎಂದು ಹೇಳಿ ಯುವ ಮನಸ್ಸುಗಳು ಸಾಹಿತ್ಯದೆಡೆಗೆ ಹರಿದು ಬರುವಂತೆ ಮಾಡಿದ್ದು ಉತ್ಸವದ ಯಶಸ್ಸು ಎಂದು ಹೇಳಿದರು.

’ಇದೊಂದು ಸಾಹಿತ್ಯ ಯಾತ್ರೆ’ ಎಂದು ಅವರು ೧೪ ಅಂತರರಾಷ್ಟ್ರೀಯ ಹಾಗೂ ೨೦ ರಾಷ್ಟ್ರದ ವಿವಿಧ ಭಾಷೆಗಳ ಲೇಖಕರನ್ನು ಒಳಗೊಂಡ ಮಹಾ ಉತ್ಸವ ಎಂದು ವಿವರಿಸಿದರು. ಆಯೋಜಕರಲ್ಲಿ ಒಬ್ಬರಾದ ನಮಿತಾ ಗೋಖಲೆ ಮತ್ತು ವಿಲ್ಹಿಯಂ ಡಾಲ್ರಿಂಪಲ್‌ ಮಾತನಾಡಿದ ಉತ್ಸವದ ಮಹತ್ವ ಮತ್ತು ವಿವರಗಳನ್ನು ಹಂಚಿಕೊಂಡರು.

- ದೇವು ಪತ್ತಾರ

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...