ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

Date: 23-01-2023

Location: ಜೈಪುರ


ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ ಸಾಹಿತ್ಯಾಸಕ್ತರು ಭಾಗವಹಿಸುವ ಮೂಲಕ ಉತ್ಸವಕ್ಕೆ ಹೊಸ ಮೆರಗು ತಂದಿದೆ.

ಐದು ದಿನಗಳ ಉತ್ಸವದಲ್ಲಿ ಸಮಕಾಲೀನ ತಲ್ಲಣ, ಸಾಹಿತ್ಯ-ಸಂಸ್ಕೃತಿ ಕುರಿತ ಚರ್ಚೆಗಳು ನಡೆದವು. ಉತ್ಸವಕ್ಕೆ ೪.೫ಲಕ್ಷ ಜನರ ಭೇಟಿ ನೀಡಿದ್ದರು. ಅದರಲ್ಲಿ ಶೇ ೮೦ ರಷ್ಟು ಜನ ೨೭ ವರ್ಷಕ್ಕಿಂತ ‌ಕೆಳಗಿನವರು ಎಂಬುದು ಮತ್ತೊಂದು ವಿಶೇಷ. ಸರಿ ಸುಮಾರು ಒಂದು ಲಕ್ಷ ಪುಸ್ತಕಗಳು ಮಾರಾಟಗೊಳ್ಳುವ ಮೂಲಕ ಪುಸ್ತಕ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂಬುದನ್ನು ಮತ್ತಷ್ಟು ಸಾಕ್ಷೀಕರಿಸಿದೆ.

ಉತ್ಸವದ ನಿರ್ದೇಶಕ ಸಂಜಯ್‌ ರಾಯ್ ಬುಕ್‌ ಬ್ರಹ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, ಜೈಪುರದ ಉತ್ಸವ ಯಶಸ್ವಿಯಾಗಿದೆ. ಅಚ್ಚರಿ ಏನಿಸುವ ಸಂಖ್ಯೆಯಲ್ಲಿ ಯುವ ಸಾಹಿತಿಗಳು ಭಾಗವಹಿಸಿ ಮುಂದಿನ ಪೀಳಿಗೆಗೂ ಮಾದರಿಯಾಗಿದ್ದಾರೆ. ಈ ಉತ್ಸವ ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಿದೆ. ಸಾಹಿತ್ಯದ ಮೂಲಕ ಸಮಾಜವನ್ನು ಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಜೈಪುರ ಉತ್ಸವದ ಮೂಲಕ ಪ್ರತಿಯೊಬ್ಬರೂ ಹೊಸದನ್ನು ಕಲಿತಿದ್ದಾರೆ ಎಂಬುದು ಖುಷಿ ವಿಚಾರ ಎಂದರು.‌

ಕೋವಿಡ್‌ ನಂತರ ದೇಶದ ಹಾಗೂ ಪ್ರಪಂಚದ ವಿವಿಧೆಡೆ ಹೆಚ್ಚೆಚ್ಚು ಸಾಹಿತ್ಯ ಉತ್ಸವಗಳು ನಡೆಯುತ್ತಿವೆ. ಇದರಿಂದ ಸ್ಥಳೀಯವಾಗಿರುವ ಸಾಹಿತ್ಯ ಪ್ರಕಾರವನ್ನು ಮತ್ತಷ್ಟು ಬೆಳಕಿಗೆ ತರಲು ಸಾಧ್ಯವಾಗುತ್ತಿದೆ. ಲೇಖಕರು, ಪ್ರಕಾಶಕರು, ಓದುಗರು ಸಹ ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ ಎಂದು ಅಭಿಪ್ರಾಯಪಟ್ಟರು.

ಈ ವರ್ಷ ಸುಮಾರು 250 ಕ್ಕೂ ಹೆಚ್ಚು ಗೋಷ್ಠಿಗಳು, ಕಲಾವಿದರು ಮತ್ತು ಪ್ರದರ್ಶಕರನ್ನು ಈ ಸಾಹಿತ್ಯ ಹಬ್ಬ ಕಂಡಿದೆ. ಭಾಷೆ, ಯುದ್ಧ, ರಾಜಕೀಯ, ಪರಿಸರದಿಂದ ಹಿಡಿದು ಹವಾಮಾನ ಬದಲಾವಣೆ, ಜ್ಞಾನ ಮತ್ತು ತಂತ್ರಜ್ಞಾನ, ಇತಿಹಾಸ, ಸಿನಿಮಾ, ಕಲೆ ಕುರಿತ ಚರ್ಚೆಗಳು ಉತ್ಸವದ ಭಾಗವಾಗಿತ್ತು.

MORE NEWS

ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

05-02-2024 ಬೆಂಗಳೂರು

ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ...

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

’ಹಿಂದಿಗೆ ನೈಸರ್ಗಿಕ ತಾಯಿಯೂ ಇಲ್ಲ, ಬಾಡಿಗೆ ತಾಯಿಯೂ ಇಲ್ಲ' : ಪುಷ್ಪೇಶ್‌ ಪಂತ ವಿಷಾಧ

22-01-2023 ಜೈಪುರ

ಜೈಪುರ: ದಲಿತ ಲೋಕದ ಚಿಂತನೆಗಳು, ಜಾತಿ ವ್ಯವಸ್ಥೆಯ ಇರುವಿಕೆ, ಚೀನಾ-ಭಾರತದ ನಡುವಿನ ಸಂಬಂಧಗಳು, ಭಾಷೆಯಾಗಿ ಹಿಂದಿ ಎದುರಿ...