ಸುರಕ್ಷಿತ ಮತ್ತು ನೈರ್ಮಲ್ಯದ ಕುರಿತ ವಿಚಾರ ಸಂಕಿರಣ

Date: 05-02-2024

Location: ಬೆಂಗಳೂರು


ಜೈಪುರ: 17ನೇ ಆವೃತ್ತಿಯ ಸಾಹಿತ್ಯ ಉತ್ಸವಕ್ಕೆ ‘ಭಾರತದ ಪಿಂಕ್ ಸಿಟಿ’ ಎಂದೇ ಹೆಸರಾಗಿರುವ ಜೈಪುರದಲ್ಲಿ ಸಂಭ್ರಮ ಮನೆಮಾಡಿದೆ. ಭಾರತೀಯ ಭಾಷೆಗಳನ್ನು ಕೇಂದ್ರೀಕರಿಸಿದ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವ ಸಾಹಿತ್ಯ ಉತ್ಸವಕ್ಕೆ ಜೈಪುರ ಸಾಹಿತ್ಯೋತ್ಸವವು ಸಾಕ್ಷಿಯಾಯಿತು. ನಾಲ್ಕನೇ ದಿನದ ಸಮಾರಂಭದಲ್ಲಿ ಜೈಪುರ ಬುಕ್‌ಮಾರ್ಕ್‌ನ 11ನೇ ಆವೃತ್ತಿಯು ಅದ್ದೂರಿಯಾಗಿ ಸಾಹಿತ್ಯಾಸಕ್ತರು ಹಾಗೂ ಲೇಖಕರ ಸಮಾಗಮದಲ್ಲಿ ವಿಜೃಂಭಿಸಿತು.

ಐಕಾನಿಕ್ ಫೆಸ್ಟಿವಲ್‌ನ 17 ನೇ ಆವೃತ್ತಿಯು ವೈವಿಧ್ಯಮಯ ಥೀಮ್‌ಗಳು ಮತ್ತು ಬರಹಗಾರರ ಒಂದು ಶ್ರೇಣಿಯನ್ನು ಪ್ರಸ್ತುತಪಡಿಸಿತು. ಮುಖ್ಯವಾಗಿ ನಾಲ್ಕನೇ ದಿನ ಸುರಕ್ಷತೆ ಮತ್ತು ನೈರ್ಮಲ್ಯದ ಕುರಿತು ವಿಚಾರಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮವು ನೆರೆದಿದ್ದ ಜನರಲ್ಲಿ ಸುರಕ್ಷತೆಯ ಕುರಿತ ಜಾಗೃತಿಯನ್ನು ಮೂಡಿಸಿತು.

ರೆಕಿಟ್‌ನ ವಿದೇಶಾಂಗ ವ್ಯವಹಾರಗಳು ಮತ್ತು ಸಹಭಾಗಿತ್ವದ ನಿರ್ದೇಶಕ ರವಿ ಭಟ್ನಾಗರ್ ಮಾತನಾಡಿ, "ನಾವು ರೆಕಿಟ್ ಇಂಡಿಯಾದಲ್ಲಿ ಜೈಪುರ ಸಾಹಿತ್ಯ ಉತ್ಸವದೊಂದಿಗೆ ನಮ್ಮ ದೀರ್ಘಕಾಲದ ಪಾಲುದಾರಿಕೆಯನ್ನು ಮುಂದುವರಿಸಲು ಹೆಮ್ಮೆಪಡುತ್ತೇವೆ. ನಾವು ಸ್ವಚ್ಛತೆಗೆ ಮೊದಲ ಆದ್ಯತೆ ನೀಡುತ್ತೇವೆ. ಇನ್ನು ಈ ಅಸೋಸಿಯೇಷನ್‌ನ ಮೂಲಕ ‘ಡೆಟ್ಟೋಲ್ ಬನೇಗಾ ಸ್ವಾಸ್ತ್ ಇಂಡಿಯಾ’ ಜೈಪುರ ಸಾಹಿತ್ಯೋತ್ಸವದಲ್ಲಿ ಭಾಗವಹಿಸುವವರನ್ನು ಸುರಕ್ಷಿತ ಮತ್ತು ನೈರ್ಮಲ್ಯ ಕಾರ್ಯಕ್ರಮವನ್ನು ಸಕ್ರಿಯಗೊಳಿಸಲು ಸರಿಯಾದ ಉತ್ಪನ್ನಗಳೊಂದಿಗೆ ರಕ್ಷಿಸುವ ಗುರಿಯನ್ನು ಹೊಂದಿದೆ. "ಡೆಟ್ಟಾಲ್ ಹೈಜೀಯಾ" ಎಂಬ ಮೊಬೈಲ್ ಗೇಮ್ ಅನ್ನು ಅನಾವರಣಗೊಳಿಸಲು ನಾವು ಉತ್ಸುಕರಾಗಿದ್ದೇವೆ. ನೈರ್ಮಲ್ಯ ಮತ್ತು ಕೈತೊಳೆಯುವ ಅಭ್ಯಾಸದ ಕುರಿತು ಮಕ್ಕಳಲ್ಲಿ ಮತ್ತು ಹದಿಹರೆಯದವರಲ್ಲಿ ಜಾಗೃತಿಯನ್ನು ಮೂಡಿಸುತ್ತೇವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಮೂಲಕ, ದೂರದ ಹಳ್ಳಿಗಳಲ್ಲಿನ ಮಕ್ಕಳ ಜೀವನದ ಅವಿಭಾಜ್ಯ ಅಂಗವಾಗಿ ಡೆಟಾಲ್ ಹೈಜಿಯಾದಿಂದ ಅಮೂಲ್ಯವಾದ ಪಾಠಗಳನ್ನು ಮಾಡುವುದು ನಮ್ಮ ಗುರಿಯಾಗಿದೆ," ಎಂದು ತಿಳಿಸಿದರು.

ವೇದಿಕೆಯಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು.

MORE NEWS

ಯುವ ಸಾಹಿತಿಗಳ ಭರವಸೆಯ ಹುಮ್ಮಸ್ಸಿನೊಂದಿಗೆ ತೆರೆ

23-01-2023 ಜೈಪುರ

16ನೇ ಆವೃತ್ತಿಯ ಪ್ರತಿಷ್ಠಿತ, ಜೈಪುರ ಸಾಹಿತ್ಯ ಉತ್ಸವವು ಇದೇ 19ರಿಂದ ಆರಂಭಗೊಂಡು ಇಂದು ತೆರೆಕಂಡಿದೆ. ಐದು ದಿನಗಳ ಸಾಹಿ...

ಮುಂದಿನ ಪೀಳಿಗೆಯನ್ನು ಉತ್ತೇಜಿಸಿದ ಸಾಹಿತ್ಯ ಉತ್ಸವ : ಸಂಜಯ್‌ ರಾಯ್

23-01-2023 ಜೈಪುರ

ಜೈಪುರ ಸಾಹಿತ್ಯೋತ್ಸವದ 16ನೇ ಆವೃತ್ತಿಗೆ ಸೋಮವಾರ ವಿದ್ಯುಕ್ತವಾಗಿ ತೆರೆ ಬಿದ್ದಿದೆ. ಈ ಬಾರಿಯ ಉತ್ಸವದಲ್ಲಿ ಹೆಚ್ಚು ಯುವ...

’ಹಿಂದಿಗೆ ನೈಸರ್ಗಿಕ ತಾಯಿಯೂ ಇಲ್ಲ, ಬಾಡಿಗೆ ತಾಯಿಯೂ ಇಲ್ಲ' : ಪುಷ್ಪೇಶ್‌ ಪಂತ ವಿಷಾಧ

22-01-2023 ಜೈಪುರ

ಜೈಪುರ: ದಲಿತ ಲೋಕದ ಚಿಂತನೆಗಳು, ಜಾತಿ ವ್ಯವಸ್ಥೆಯ ಇರುವಿಕೆ, ಚೀನಾ-ಭಾರತದ ನಡುವಿನ ಸಂಬಂಧಗಳು, ಭಾಷೆಯಾಗಿ ಹಿಂದಿ ಎದುರಿ...