ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಭಾವಗೀತೆ ಗಾಯನ ಸ್ಪರ್ಧೆ

Date: 13-05-2024

Location: ಬೆಂಗಳೂರು


ಬೆಂಗಳೂರು: ಉಡುಪಿ ಜಿಲ್ಲೆಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ಇಲ್ಲಿದೆ ಸುವರ್ಣಾವಕಾಶ. ಡಾ. ಎಂ ಗೋಪಾಲಕೃಷ್ಣ ಅಡಿಗರ ಯಾವುದಾದರೂ ಭಾವಗೀತೆಯನ್ನು ಪ್ರಸ್ತುತ ಪಡಿಸಲು ಇದೊಂದು ಆತ್ಮೀಯ ಕರೆ. ಇದೇ 25 ಮೇ 2024 ರಂದು ಎಂ.ಬಿ.ಎ. ಹಾಲ್, ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇಲ್ಲಿ ಭಾವಗೀತೆ ಗಾಯನ  ಸ್ಫರ್ಧೆ ನಡೆಯಲಿದೆ. 

ಸೂಚನೆಗಳು:

• ಸ್ಪರ್ಧೆಯಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಕಾಲೇಜಿನ ಐಡಿ ಕಾರ್ಡ್ ಅನ್ನು ತರತಕ್ಕದ್ದು.

• ಪ್ರತಿ ಶಿಕ್ಷಣ ಸಂಸ್ಥೆಯಿಂದ ಗರಿಷ್ಠ ಇಬ್ಬರು ವಿದ್ಯಾರ್ಥಿಗಳಿಗೆ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವಿದೆ.

• ಪ್ರಥಮ/ದ್ವಿತೀಯ ವರ್ಷದ ಪಿಯುಸಿ ಹಂತದ ಅಥವಾ ಡಿಗ್ರಿ ಸೇರುತ್ತಿರುವ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಭಾಗವಹಿಸಬಹುದು.

ಬಹುಮಾನ: ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ವಿಜೇತರಿಗೆ ಪುಸ್ತಕಗಳ ಖರೀದಿಗಾಗಿ ಕೆಳಗಿನ ಮೊತ್ತದ ವೋಚರ್ ನೀಡಲಾಗುವುದು.

ಪ್ರಥಮ ಬಹುಮಾನ-1500 ರೂ, ದ್ವಿತೀಯ-1250 ರೂ, ತೃತೀಯ-1000 ರೂ. ಬಹುಮಾನ/ಪ್ರಮಾಣ ಪತ್ರಗಳನ್ನು ಶನಿವಾರ, 1 ಜೂನ್, 2024ರಂದು ಎಂ.ಜಿ.ಎಂ. ಕಾಲೇಜು ಸಭಾಂಗಣ, ಉಡುಪಿಯಲ್ಲಿ ನಡೆಯುವ ಸಾಹಿತ್ಯ ಸಹವಾಸ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು. 

ಹೆಚ್ಚಿನ ಮಾಹಿತಿಗಾಗಿ ಡಾ. ಕೃಷ್ಣ ಕೊತ್ತಾಯ, ನಿರ್ದೇಶಕರು ಪೂರ್ಣಪ್ರಜ್ಞ ಸೆಂಟರ್ ಫಾರ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್, ಪೂರ್ಣಪ್ರಜ್ಞ ಕಾಲೇಜು, ಉಡುಪಿ, ಮೊಬೈಲ್: 9886853491 ಇವರನ್ನು ಸಂಪರ್ಕಿಸಬಹುದು. 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...