ಇದೊಂದು ವೈಚಾರಿಕ ಲೇಖನಗಳುಳ್ಳ ಒಂದು ಪುಸ್ತಕ

Date: 13-05-2024

Location: ಬೆಂಗಳೂರು


‘ಮನುಷ್ಯ ಸದ್ಗುಣವಂತನಾಗಿ, ಸಮಾಜಕ್ಕೆ ಹಿತವಾಗಿ ಬದುಕಬೇಕಿದ್ದರೆ ಯಾವ ನೀತಿಸಂಹಿತೆಯನ್ನು ಅನುಸರಿಸಬೇಕು ಎಂಬುವುದರ ಕುರಿತು ಮಾರ್ಗದರ್ಶಿ ಲೇಖನವಿದೆ’ ಎನ್ನುತ್ತಾರೆ ಉದಯ್ ಕುಮಾರ್ ಹಬ್ಬು. ಅವರು ವೈಚಾರಿಕ ಲೇಖನಗಳು’ ಕೃತಿಯ ಕುರಿತು ಬರೆದ ಮುನ್ನುಡಿ ನಿಮ್ಮ ಓದಿಗಾಗಿ.   

ಇದೊಂದು ವೈಚಾರಿಕ ಲೇಖನಗಳುಳ್ಳ ಒಂದು ಪುಸ್ತಕ. ಮನುಷ್ಯರಲ್ಲಿ ಧರ್ಮ, ದೇವರು ಮತ್ತು ಆಚರಣೆಯ ಹೆಸರಿನಲ್ಲಿ ಮನುಷ್ಯ ವಿರೋಧ ಮೂಢನಂಬಿಕೆಗಳಿವೆ ಈ ಮೌಢ್ಯಗಳು ಮನುಷ್ಯರ ಬದುಕಿನಲ್ಲಿ ಮಾರಣಾಂತಿಕ ಆಟವನ್ನು ಆಡುತ್ತದೆ. ಉದಾಹರಣೆಗಾಗಿ ಕಾಡುಗೊಲ್ಲರಲ್ಲಿ ಮಗು ಹೆತ್ತ ಬಾಣಂತಿಯನ್ನು ಊರ ಹೊರಗೆ ಗುಡಿಸಲು ಕಟ್ಟಿ ನಿಲ್ಲಿಸುವ ಮೂಢನಂಬಿಕೆ ಇದೆ. ಈ ಮೌಢ್ಯದಿಂದಾಗಿ ಎಷ್ಟೋ ಜನ ಬಾಣಂತಿಯರು ಹಾಗೂ ಶಿಶುಗಳು ಸತ್ತ ಪ್ರಕರಣಗಳು ಅನೇಕ ಇವೆ. ಸಿಡಿ, ಗೆಂಡ ಹಾಯುವುದು, ಜ್ಯೋತಿಷ್ಯಫಲ, ಹರಕೆಗಳು, ಮಡೆಸ್ನಾನ, ಈ ಮುಂತಾದ ಜೀವವಿರೋಧಿ ನಂಬಿಕೆಗಳು ಇವೆ. 

ಇಂಥಹ ಮೂಢನಂಬಿಕೆಗಳನ್ನು ಈ ಗ್ರಂಥ ಪ್ರಶ್ನಿಸುತ್ತದೆ ಯಾವುದೇ ನಂಬಿಕೆಗೆ ವೈಜ್ಣಾನಿಕ ವಿವರಣೆಗಳನ್ನು ಕೇಳುತ್ತದೆ. ಅಂತೆಯೇ ಜಾತಿ ಶ್ರೇಷ್ಠತೆಯ ವ್ಯಸನ, ಕೆಳಜಾತಿಯವರ ಶೋಷಣೆ, ಅಸ್ಪೃಶ್ಯತೆಯ ದಬ್ಬಾಳಿಕೆಯನ್ನು ಈ ಗ್ರಂಥ ತರಾಟೆ ತೆಗೆದುಕೊಳ್ಳುತ್ತದೆ. ಹಿಂದುತ್ವದ ಕುರಿತು ಕೆಲವು ಅಭಿಪ್ರಾಯಗಳಿವೆ.

ಮನುಷ್ಯ ಸದ್ಗುಣವಂತನಾಗಿ, ಸಮಾಜಕ್ಕೆ ಹಿತವಾಗಿ ಬದುಕಬೇಕಿದ್ದರೆ ಯಾವ ನೀತಿಸಂಹಿತೆಯನ್ನು ಅನುಸರಿಸಬೇಕು ಎಂಬುವುದರ ಕುರಿತು ಮಾರ್ಗದರ್ಶಿ ಲೇಖನವಿದೆ. ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣದ ಅನಗತ್ಯತೆಯ ಕುರಿತು, ಲೈಂಗಿಕ ಶಿಕ್ಷಣದ ಅಗತ್ಯತೆಯ ಕುರಿತು ಬೆಳಕು ಚೆಲ್ಲ ಬಲ್ಲ ಲೇಖನವಿದೆ. ಪ್ರಶ್ನೆ ಕೇಳಿ ವಿಷಯವನ್ನು ತಿಳಿದುಕೊಳ್ಳುವ ಹಕ್ಕಿನ ಕುರಿತಾದ ಮಾಹಿತಿ ಇದೆ. ಕೊನೆಯದಾಗಿ ಕೆಲವು ಬರಹಗಳು ಚಿಂತನೆಗೀಡು ಮಾಡುತ್ತವೆ. ಹೊಸ ಬಗೆಯ ಯೋಚನಾ ಧಾರೆ ಈ ಪುಸ್ತಕದಲ್ಲಿ ಖಂಡಿತಾ ಇದೆ. 

-ಉದಯ್ ಕುಮಾರ ಹಬ್ಬು 

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...