ಪ್ರಸಾರಿತ ಪದೋತ್ತಸನ ಮತ್ತು ಅರ್ಧ ಚಂದ್ರಾಸನ

Date: 11-05-2024

Location: ಬೆಂಗಳೂರು


"ಸದಾ ತಲೆನೋವಿನಿಂದ ಬಳಲುವವರಿಗೂ ಹಾಗೂ ಶೀರ್ಷಾಸನ ಮಾಡಲಾಗದವರು ಪ್ರಸಾರಿತ ಪದೋತ್ತಸನ ಅಭ್ಯಾಸದಿಂದ ಶೀರ್ಷಾಸನದ ಎಲ್ಲ ಲಾಭ ಪಡೆಯಬಹುದು. ಅರ್ಧ ಚಂದ್ರಾಸನ ಆಸನವು ಮೂತ್ರಜನಕಾಂಗದ ಗ್ರಂಥಿಗಳ ನಿಯಂತ್ರಣ ಮತ್ತು ದೇಹದ ಎರಡೂ ಬದಿಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಉಪಯುಕ್ತವಾಗಿದೆ," ಎನ್ನುತ್ತಾರೆ ಯೋಗಪಟು ಚೈತ್ರಾ ಹಂಪಿನಕಟ್ಟಿ. ಅವರು 'ಬುಕ್ ಬ್ರಹ್ಮ' ಪ್ರಕಟಿಸುವ ತಮ್ಮ 'ಯೋಗ ಯೋಗಾ' ಅಂಕಣದಲ್ಲಿ ಈ ಕುರಿತು ವಿವರಿಸಿದ್ದಾರೆ.

ಪ್ರಸಾರಿತ ಪದೋತ್ತಸನ:
ಅರ್ಥ: ಪ್ರಸಾರಿತ ಎಂದರೆ ವಿಸ್ತರಿಸಿದ ಅಥವಾ ಅಗಲಗೊಳಿಸಿದ ಎಂದರ್ಥ. 
ಎರಡೂ ಪಾದಗಳನ್ನು ವಿಸ್ತರಿಸಿ ನಿಲ್ಲುವ ಈ ಭಂಗಿಗೆ  ಪ್ರಸಾರಿತ ಎಂದು ಕರೆಯುತ್ತಾರೆ.

ಮಾಡುವ ವಿಧಾನ :
ಮೊದಲು ಸಮಸ್ಥಿತಿಯಲ್ಲಿ ನಿಂತುಕೊಳ್ಳಬೇಕು. ನಂತರ ಎರಡೂ ಕಾಲುಗಳನ್ನು ನಾಲ್ಕು ಅಡಿಗಳಷ್ಟು ಅಗಲಮಾಡಬೇಕು ಹಾಗೆಯೇ ಎರಡೂ ಕೈಗಳನ್ನು ಬೆನ್ನ ಹಿಂದೆ ತೆಗೆದುಕೊಂಡು ನಮಸ್ಕಾರ ಸ್ಥಿತಿಗೆ ಬರಬೇಕು. ಈಗ ನಿಧಾನವಾಗಿ ಮುಂದೆ ಬಾಗಿ ನೆತ್ತಿಯನ್ನು ನೆಲಕ್ಕೆ ತಾಗಿಸಬೇಕು ಕಾಲುಗಳು ನೇರವಾಗಿರಬೇಕು. ಉಸಿರಾಟ ಕ್ರಿಯೆ ಸಹಜವಾಗಿರಬೇಕು, ಚಿತ್ರದಲ್ಲಿರುವಂತೆ , ೨೦ ಸೆಕೆಂಡ್ಗಳ ಕಾಲ ಇದ್ದು ಸಮಸ್ಥಿತಿಗೆ ಬರಬೇಕು.

ಪ್ರಯೋಜನಗಳು:
1) ಈ ಆಸನವು ಸಯಾಟಿಕಾ, ವೆರಿಕೋಸ್‌ವೆಯನ್ಸ್‌, ಹರ್ನಿಯಾ, ಗ್ಯಾಸ್ಟ್ರಿಕ್‌, ಪೈಲ್ಸ್‌ಗೆ ಉತ್ತಮ ಆಸನವಾಗಿದೆ. 
2) ಈ ಆಸನವು ಸದಾ ತಲೆನೋವಿನಿಂದ ಬಳಲುವವರಿಗೂ ಹಾಗೂ ಶೀರ್ಷಾಸನ ಮಾಡಲಾಗದವರು ಈ ಆಸನದ ಅಭ್ಯಾಸದಿಂದ ಶೀರ್ಷಾಸನದ ಎಲ್ಲ ಲಾಭ ಪಡೆಯಬಹುದು. 
3) ಈ ಆಸನವನ್ನು ಅಧಿಕ ರಕ್ತದೊತ್ತಡ ಇರುವವರು ಈ ಆಸನ ಮಾಡಬಾರದು.

 

--

ಅರ್ಧ ಚಂದ್ರಾಸನ;
ಅರ್ಥ: ಈ ಆಸನವು ಚಂದ್ರನ ಅರ್ಧ ಆಕೃತಿ ಹೊಲುವುದರಿಂದ ಇದ್ದಕ್ಕೆ ಅರ್ಧ ಚಂದ್ರಾಸನ  ಎಂದು ಕರೆಯುವವರು.

ಮಾಡುವ ವಿಧಾನ: 
ಮೊದಲು ದಂಡಾಸನದಲ್ಲಿ ಕುಳಿತುಕೊಳ್ಳಬೇಕು ಚಿತ್ರದಲ್ಲಿರುವಂತೆ, ನಂತರ ವಜ್ರಾಸನದಲ್ಲಿ ಕುಳಿತು ಎಡಗಾಲನ್ನು ಮುಂದೆ ಇಡಬೇಕು, ಬಲಗಾಲು ಹಿಂದೆ ಇರಬೇಕು ಚಿತ್ರದಲ್ಲಿರುವಂತೆ, ನಂತರ ನಿಧಾನವಾಗಿ ಉಸಿರನ್ನು ತೆಗೆದುಕೊಂಡು ಎರಡು ಕೈಗಳನ್ನು ಮೇಲಕ್ಕೆ ಎತ್ತಬೇಕು ನಮ್ಕಸಾರ ಮುದ್ರೆಯಲ್ಲಿ ಇರಬೇಕು ಎಷ್ಟು ಸಾಧ್ಯವೊ ಅಷ್ಟು ನಿಧಾನವಾಗಿ ಹಿಂದಕ್ಕೆ ಬಾಗಬೇಕು ಆಗ ಉಸಿರಾಟದ ಕ್ರಿಯೆ ಸಹಜವಾಗಿರಬೇಕು ಇನ್ನೊಂದು ಬದಿಗೆ ಮಾಡಬೇಕು ೨೦ ಸೆಂಕೆಡ್ಗಳ ಕಾಲ ಇದ್ದು ನಂತರ ದಂಡಾಸನ ಸ್ಥಿತಿಗೆ ಬರಬೇಕು. 

ಪ್ರಯೋಜನಗಳು:
1) ಈ ಆಸನವು ಬೆನ್ನುಮೂಳೆಯನ್ನು ಟೋನ್ ಮಾಡಬಹುದು, ಹೃದಯ ಚಕ್ರವನ್ನು ತೆರೆಯಬಹುದು ಮತ್ತು ಶ್ವಾಸಕೋಶವನ್ನು ವಿಸ್ತರಿಸಬಹುದು. 
2) ಈ ಆಸನವು ಆರೋಗ್ಯಕರ ರಕ್ತ ಪರಿಚಲನೆ, ಚೆನ್ನಾಗಿ ನಿಯಂತ್ರಿತ ಮತ್ತು ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆ ಮತ್ತು ಮಲಬದ್ಧತೆ ನಿವಾರಣೆಗೆ ಸಹಾಯ ಮಾಡುತ್ತದೆ.
3) ಈ ಆಸನವು ಬೆನ್ನು ಮತ್ತು ಕಾಲಿನ ಸ್ನಾಯುಗಳನ್ನು ಹಿಗ್ಗಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿಯಾಗಿ, ಇದು ಬೆನ್ನುಮೂಳೆಯ ನರಗಳನ್ನು ಸಕ್ರಿಯಗೊಳಿಸುತ್ತದೆ.
4) ಈ ಆಸನವು ನಿಮ್ಮ ಮನಸ್ಸು ಮತ್ತು ದೇಹಕ್ಕೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
5) ಈ ಆಸನವು ಮೂತ್ರಜನಕಾಂಗದ ಗ್ರಂಥಿಗಳ ನಿಯಂತ್ರಣ ಮತ್ತು ದೇಹದ ಎರಡೂ ಬದಿಗಳಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಉಪಯುಕ್ತವಾಗಿದೆ.

-ಚೈತ್ರಾ ಹಂಪಿನಕಟ್ಟಿ .

MORE NEWS

ಎಸ್.ಜ್ಯೋತಿ ಅವರ ‘ಅತ್ತೆ ನಿಮಗೊಂದು ಪ್ರಶ್ನೆ’ ಪುಸ್ತಕ ಬಿಡುಗಡೆ ಸಮಾರಂಭ

19-03-2024 ಬೆಂಗಳೂರು

ತುಮಕೂರು: ಪುರಾಣ ಕಾವ್ಯ ಬೇರೆ, ಪುರಾಣ ಶಾಸ್ತ್ರ ಬೇರೆ. ಪುರಾಣ ಶಾಸ್ತ್ರಗಳು ವಾಚ್ಯಾರ್ಥವಾದರೆ, ಪುರಾಣ ಕಾವ್ಯಗಳು ಧ್ವನ್...

ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರಬಂದಗಳಿಗೆ ಆಹ್ವಾನ

17-12-2023 ಬೆಂಗಳೂರು

ಮಸ್ಕಿ: ಬಂಡಾರ ಪ್ರಕಾಶನವು `ಕನ್ನಡ ಆರಯ್ಪು-2023' ಸಲುವಾಗಿ ಕನ್ನಡ-ಕರ್‍ನಾಟಕಗಳಿಗೆ ಸಂಬಂದಿಸಿದ ಸಂಶೋದನಾ ಪ್ರ...

ಸಾಂಸ್ಕೃತಿಕ ಸಂವಿಧಾನದ ಅರಿವು ಅಗತ್ಯ : ಪ್ರೊ.ನಟರಾಜ ಬೂದಾಳು

06-12-2023 ಬೆಂಗಳೂರು

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಸಂಸ್ಥೆ, ಶ್ರೀ ಸಿದ್ಧಲಿಂಗೇಶ್ವರ ಪ್ರಕಾಶನ ಕಲಬುರಗಿ ಮತ್ತು ಜನ ಪ್...