2024ನೇ ಸಾಲಿನ ಈ ಹೊತ್ತಿಗೆ ಪ್ರಶಸ್ತಿಗೆ ಸದಾಶಿವ ಸೊರಟೂರು ಹಾಗೂ ನಿಝಾಮ್ ಗೋಳಿಪಡ್ಪು ಭಾಜನ

Date: 17-01-2024

Location: ಬೆಂಗಳೂರು


ಬೆಂಗಳೂರು: ಸಮಾನ ಮನಸ್ಕರ, ಸಾಹಿತ್ಯ ಪ್ರಿಯರ ವೇದಿಕೆಯಾಗಿರುವ ‘ಈ ಹೊತ್ತಿಗೆ’ 2024ನೇ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ಗಾಗಿ ಬರಹಗಾರರಿಂದ ಕನ್ನಡದ ಅಪ್ರಕಟಿತ ಕಥಾ ಸಂಕಲನಗಳನ್ನು ಮತ್ತು ಅಪ್ರಕಟಿತ ಕವನ ಸಂಕಲನಗಳನ್ನು ಆಹ್ವಾನಿಸಿದ್ದು, ಸ್ಪರ್ಧೆಯ ವಿಜೇತರ ಪಟ್ಟಿ ಪ್ರಕಟವಾಗಿದೆ.

ದಾವಣಗೆರೆ ಜಿಲ್ಲೆಯ ಸೊರಟೂರಿನವರಾದ ಸದಾಶಿವ ಸೊರಟೂರು ಅವರ ಅಪ್ರಕಟಿತ ಕಥಾಸಂಕಲನ, ‘ಧ್ಯಾನಕ್ಕೆ ಕೂತ ನದಿ’, 2024ರ ಸಾಲಿನ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಹಾಗೂ ಮಂಗಳೂರು ಜಿಲ್ಲೆಯ ಸಜೀಪನಡು ಊರಿನವರಾದ ನಿಝಾಮ್ ಗೋಳಿಪಡ್ಪು ಅವರ ‘ಅನಾಮಧೇಯ ಗೀರುಗಳು’ ಅಪ್ರಕಟಿತ ಕವನ ಸಂಕಲನ, ‘ಈ ಹೊತ್ತಿಗೆ ಕಾವ್ಯ ಪ್ರಶಸ್ತಿ’ ಪಡೆದುಕೊಂಡಿವೆ.

ಎರಡೂ ಪ್ರಶಸ್ತಿಗಳು ತಲಾ ರೂ. 10,000 ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿವೆ. ಪ್ರಶಸ್ತಿಯನ್ನು 2024ನೇ ಸಾಲಿನ ಮಾರ್ಚ್ ತಿಂಗಳಲ್ಲಿ, ಬೆಂಗಳೂರಿನಲ್ಲಿ ನಡೆಯಲಿರುವ, ಈ ಹೊತ್ತಿಗೆಯ ಹೊನಲು ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ನಾಡಿನ ಖ್ಯಾತ ಕವಿ, ಪ್ರತಿಭಾ ನಂದಕುಮಾರ್ ಅವರು ಈ ಹೊತ್ತಿಗೆಯ ಕಾವ್ಯ ಪ್ರಶಸ್ತಿಯ ತೀರ್ಪುರಗಾರರಾಗಿದ್ದರು. ಖ್ಯಾತ ಕತೆಗಾರ, ಪತ್ರಕರ್ತ ದೇವು ಪತ್ತಾರ್ ಅವರು ಈ ಬಾರಿಯ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಭಾಗದ ತೀರ್ಪುಗಾರರಾಗಿದ್ದರು.

ಪೂರ್ವ ಆಯ್ಕೆ ಸಮಿತಿಯ ಕಾವ್ಯ ವಿಭಾಗದಲ್ಲಿ, ಸಿಂಧು ರಾವ್ ಮತ್ತು ರೇಣುಕಾ ಕೊಡಗುಂಟಿ ಹಾಗೂ ಕಥಾ ವಿಭಾಗದಲ್ಲಿ, ಆನಂದ ಕುಂಚನೂರ್ ಮತ್ತು ಮಧು ವೈ ಎನ್ ಅವರು ಮೊದಲ ಸುತ್ತಿನಲ್ಲಿ ತಲಾ 11 ಮತ್ತು 10 ಉತ್ತಮ ಸಂಕಲನಗಳನ್ನು ಆಯ್ಕೆ ಮಾಡಿದ್ದರು.

MORE NEWS

ಕನ್ನಡ ಸಾಹಿತ್ಯ ಅಕಾಡೆಮಿಯ 2023-24ನೇ ಸಾಲಿನ ವಿವಿಧ ಪ್ರಶಸ್ತಿಗಳ ಪ್ರಶಸ್ತಿ ಪ್ರದಾನ ಸಮಾರಂಭ

05-12-2025 ಬೆಂಗಳೂರು

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ʻಗೌರವ ಪ್ರಶಸ್ತಿ 2024', ʻಸಾಹ...

ಡಿಸೆಂಬರ್ 6ರಿಂದ ಬೆಂಗಳೂರು ಸಾಹಿತ್ಯ ಉತ್ಸವ

05-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...

ಸಾಹಿತ್ಯದಿಂದ ಸಾಂಸ್ಕೃತಿಕ ರಾಜಕಾರಣ ಮತ್ತು ಸಾಂಸ್ಕೃತಿಕ ಯಜಮಾನಿಕೆ ನಿರ್ವಚನ; ಭೀಮಾಶಂಕರ ಬಿರಾದಾರ

03-12-2025 ಬೆಂಗಳೂರು

ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...