'ಅಲ್ಲಮ ಕಥನ' ಲೋಕಾರ್ಪಣೆ, 'ಅಲ್ಲಮ ಪ್ರಶಸ್ತಿ 2025' ಪ್ರದಾನ ಸಮಾರಂಭ

Date: 26-11-2025

Location: ಬೆಂಗಳೂರು


ಬೆಂಗಳೂರು : ಶ್ರೀ ಪ್ರಭುಲಿಂಗೇಶ್ವರ ಶಿಕ್ಷಣ ಸಂಸ್ಥೆ (ರಿ.) ಜಮಖಂಡಿ ಸಹಯೋಗದೊಂದಿಗೆ ಅಂಕಿತ ಪುಸ್ತಕ, ಬೆಂಗಳೂರು ಪ್ರಕಟಿಸಲಿರುವ 999ನೇ ಪುಸ್ತಕ , ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ವಿರಚಿತ 'ಅಲ್ಲಮ ಕಥನ' ಕೃತಿಯ ಲೋಕಾರ್ಪಣೆ ಮತ್ತು 'ಅಲ್ಲಮ ಪ್ರಶಸ್ತಿ 2025'ರ ಪ್ರದಾನ ಸಮಾರಂಭವನ್ನು ಇದೇ ನವೆಂಬರ್ 30, 2025, ಭಾನುವಾರ, ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಕುಮಾರಪಾರ್ಕ್ ಪೂರ್ವದಲ್ಲಿರುವ ಗಾಂಧಿ ಭವನದ ಮಹಾಂತದೇವರ ದೇಸಾಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಈ ಸಮಾರಂಭವು ಪರಮಪೂಜ್ಯ ಶ್ರೀ ಸಿದ್ಧಲಿಂಗ ಸ್ವಾಮೀಜಿಗಳ (ಸಿದ್ಧಗಂಗಾ ಮಠ) ಸಾನಿಧ್ಯದಲ್ಲಿ ನಡೆಯಲಿದ್ದು, ನ್ಯಾಯಮೂರ್ತಿ ಡಾ. ಶಿವರಾಜ ವಿ. ಪಾಟೀಲ (ಅಧ್ಯಕ್ಷರು, ಕರ್ನಾಟಕ ಗಡಿ ಮತ್ತು ಜಲಕಾಸು ಕಾನೂನು ಪ್ರಾಧಿಕಾರ) ಅವರು ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ. ನಾಡೋಜ ಶ್ರೀ ಜಗದೀಶ ಶಿವಯ್ಯ ಗುಡಗಂಟಿ (ಶಾಸಕರು, ಜಮಖಂಡಿ) ಅಧ್ಯಕ್ಷತೆ ವಹಿಸಲಿದ್ದು, ನಾಡೋಜ ಡಾ. ವೂಡೇ ಪಿ . ಕೃಷ್ಣ (ಅಧ್ಯಕ್ಷರು, ಕರ್ನಾಟಕ ಗಾಂಧಿ ಸ್ಮಾರಕನಿಧಿ) ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಡಾ. ಬಿ.ವಿ. ವಸಂತಕುಮಾರ್ (ನಿಕಟಪೂರ್ವ ಅಧ್ಯಕ್ಷರು, ಕರ್ನಾಟಕ ಸಾಹಿತ್ಯ ಅಕಾಡೆಮಿ) ಅವರು ಗ್ರಂಥದ ಕುರಿತು ಮಾತನಾಡಲಿರುವರು ಮತ್ತು ಕೃತಿಯ ಲೇಖಕ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ (ವಿಶ್ರಾಂತ ಕುಲಪತಿಗಳು, ಕ.ಸಂ.ವಿ.) ಅವರು ಗ್ರಂಥದ ಕುರಿತು ಮಾತನಾಡಲಿದ್ದಾರೆ .

ಈ ಸಂದರ್ಭದಲ್ಲಿ 2025ನೇ ಸಾಲಿನ ಪ್ರತಿಷ್ಠಿತ 'ಅಲ್ಲಮ ಪುರಸ್ಕಾರವನ್ನು ನಾಲ್ವರು ಸಾಧಕರಾದ ಡಾ. ನೀಲಗಿರಿ ತಳವಾರ (ಮೈಸೂರು), ಡಾ. ವೀಣಾ ಬನ್ನಂಜೆ (ಕಲ್ಲಹಳ್ಳಿ), ಡಾ. ಟಿ.ಎನ್. ವಾಸುದೇವಮೂರ್ತಿ (ಆದಿಚುಂಚನಗಿರಿ) ಮತ್ತು ಪ್ರಕಾಶ ಗಿರಿಮಲ್ಲನವರ (ಬೆಳಗಾವಿ) ಅವರಿಗೆ ಪ್ರದಾನ ಮಾಡಲಾಗುವುದು.

*ಈ ಕಾರ್ಯಕ್ರಮವು ಬುಕ್ ಬ್ರಹ್ಮ ಫೇಸ್ ಬುಕ್ ಹಾಗು ಯುಟ್ಯೂಬ್ ಚಾನೆಲ್ ನಲ್ಲಿ ನೇರಪ್ರಸಾರಗೊಳ್ಳಲಿದೆ.

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...