Date: 07-12-2025
Location: ಬೆಂಗಳೂರು
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್ತಮ ಲೇಖಕನನ್ನು ಸಮಾಜವು ಗುರುತಿಸುವಂತಹ ಕೆಲಸವು ಸಾಹಿತ್ಯ ಉತ್ಸವಗಳಂತಹ ಕಾರ್ಯಕ್ರಮಗಳು ಮಾಡುತ್ತಿವೆ. ಇಂದು ಇಂತಹ ಒಂದು ಪ್ರಸಿದ್ಧ ಲೇಖಕನ ಬರವಣಿಗೆಯ ಸುಳಿವಿಗೆ ಸಾಕ್ಷಿಯಾಯಿತು ನಗರದ ಬಹುದೊಡ್ಡ ಸಾಹಿತ್ಯ ಉತ್ಸವ ʻBLF'.
ಡಿ.6 ಶನಿವಾರ ಹಾಗೂ 7 ಭಾನುವಾರದಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ಸಾಹಿತ್ಯ ಉತ್ಸವವು ಸಾವಿರಾರು ಸಾಹಿತಿಗಳ ಸಮಾಗಮದೊಂದಿಗೆ ಬಹಳ ವಿಜೃಂಭಣೆಯಿಂದ ಜರುಗಿತ್ತು.
ʻಲೆಫ್ಟ್ ಬಾರಕ್ʼ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ʻಕಾರಂತರ ಸುಳಿಯಲ್ಲಿ ಗೋಷ್ಠಿಯು ಮಾಳವಿಕ ಕಾಪೂರ್, ಕ್ಷಮಾ ರಾವ್, ಎಸ್. ಉಲ್ಲಾಸ್ ಕಾರಂತ್, ವಿಶ್ವೇಶ್ವರ ಭಟ್ ಹಾಗೂ ಎಸ್.ಆರ್. ವಿಜಯಶಂಕರ ಅವರ ಉಪಸ್ಥಿತಿಯಲ್ಲಿ ನಡೆಯಿತು. ವಿಶ್ವೇಶ್ವರ ಭಟ್ ಸಂವಾದದಲ್ಲಿ, ಉಲ್ಲಾಸ್ ಕಾರಂತ್ ಮತ್ತು ಮಾಳವಿಕ, ಕ್ಷಮಾ ಅವರು ಬರೆದಂತಹ `Growing Up karantha' ಕೃತಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವಾಗ ನನಗೆ ತುಂಬಾ ಕಾಡಿಸಿದ್ದು ಕೃತಿಯ ಶೀರ್ಷಿಕೆ. ಕನ್ನಡದಲ್ಲಿ ಯಾವ ಶೀರ್ಷಿಕೆ ನೀಡಿದರೆ ಸೂಕ್ತ ಎನ್ನುವುದನ್ನ ನಾನು ಚಿಂತಿಸಿದಾಗ ನನಗೆ ಮೊದಲ ಹೊಳೆದ ಪದ ಮೈಮನದ ಸುಳಿ. ಆದರೆ ನಂತರದಲ್ಲಿ ಅದನ್ನ ಕಾರಂತರ ಸುಳಿಯಲ್ಲಿ ಎಂದು ಬದಲಾಯಿಸಿಕೊಂಡೆ. ಇದೊಂದು ಬಹಳ ಅದ್ಭುತವಾದ ಕೃತಿಯಾಗಿದ್ದು, ಓರ್ವ ಮಹಾನ್ ಮನುಷ್ಯ ಬರವಣಿಗೆಯನ್ನೇ ಹೇಗೆ ಜೀವಿಸಿದ, ಅಕ್ಷರಗಳೊಂದಿಗೆ ಹೇಗೆ ಬೆಳೆದ ಎನ್ನುವುದನ್ನು ಕಾಣಬಹುದು. ಕೇವಲ ಒಂದು ತಿಂಗಳಿನಲ್ಲಿ ಕೃತಿ ನಿಮ್ಮ ಮುಂದೆ ಇರಲಿದೆ," ಎಂದು ತಿಳಿಸಿದರು.
ಉಲ್ಲಾಸ್ ಕಾರಂತ್ ಮಾತನಾಡಿ, " `Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ. ಅವರು ಬದುಕಿದ ರೀತಿ ಎಲ್ಲರಿಗೂ ಗೊತ್ತಾಗಬೇಕು ಎಂಬುವುದೇ ನನ್ನ ಆಸೆ. ಅವರ ಬದುಕು ಮತ್ತಷ್ಟು ಜನಕ್ಕೆ ಸ್ಪೂರ್ತಿಯಾಗಲಿ ಎಂದು ಹೇಳಿದರು. ನಂತರದಲ್ಲಿ ಮಾತನಾಡಿದ ಮಾಳವಿಕ ಕಾಪೂರ್, "ಪ್ರತಿಯೊಬ್ಬ ಮನುಷ್ಯ ಏನಾದರೂ ಮಾಡಬೇಕಾದರೂ, ಆತ ಮೊದಲು ಕಲಿಯಬೇಕು. ಆಗ ಮಾತ್ರ ನಾವು ಇನ್ನೊಬ್ಬರಿಗೆ ಮಾರ್ಗದರ್ಶನ ನೀಡಲು ಸಾಧ್ಯ," ಎಂದರು. ಕ್ಷಮಾ ರಾವ್ ಮಾತನಾಡಿ, "ಕಾರಂತರ ತಮ್ಮ ಬದುಕಿನಲ್ಲಿ ಮಾಡದ್ದೇನು ಇಲ್ಲವೆನ್ನಿಸುತ್ತದೆ. ಕಾರಣ ಅವರು ಸಾಹಿತ್ಯ ವಲಯಕ್ಕೆ ಮಾತ್ರವಲ್ಲದೇ ಸಮಾಜಕ್ಕೂ ಬಹಳಷ್ಟು ಕೊಡುಗೆಯನ್ನ ನೀಡಿದ್ದಾರೆ. ಬಾಲವನ, ಕೃತಿಭವನ ಹೀಗೆ ಇನ್ನಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಕಾರಂತರಿಗೆ ಯಕ್ಷಗಾನ ಹಾಗೂ ಹಿಂದೂಸ್ಥಾನಿ ಸಂಗೀತ ಬಹಳ ಇಷ್ಟ," ಎಂದು ತಿಳಿಸಿದರು.
ನಗರದ ಬಹುದೊಡ್ಡ ಸಾಹಿತ್ಯ ಕಾರ್ಯಕ್ರಮಗಳಲ್ಲಿ ಒಂದಾಗಿರುವ ಬೆಂಗಳೂರು ಸಾಹಿತ್ಯ ಉತ್ಸವ 14ನೇ ಆವೃತ್ತಿಯು ಭಾಷೆಯ ವೈಶಿಷ್ಟ್ಯತೆ, ಸೊಗಡು ಹಾಗೂ ಸಾಹಿತ್ಯದ ವೈವಿಧ್ಯತೆಗೆ ಸಾಕ್ಷಿಯಾಯಿತು.
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
ಬೆಂಗಳೂರು : ಬೆಂಗಳೂರು ಸಾಹಿತ್ಯ ಉತ್ಸವ (BLR LitFest) 2025ರ 14ನೇ ಆವೃತ್ತಿಯ ಮೊದಲ ದಿನದ ಕಾರ್ಯಕ್ರಮಗಳು ಸಾಹಿತ್ಯಾಸ...
©2025 Book Brahma Private Limited.