ಅಮ್ಮ ಪ್ರಶಸ್ತಿಗೆ 25ರ ಸಂಭ್ರಮ: ಸಾಹಿತ್ಯದ ಸಾಧಕರಿಗೆ 'ಬೆಳ್ಳಿ ಹಬ್ಬದ' ಗೌರವ!

Date: 22-11-2025

Location: ಸೇಡಂ


ಸೇಡಂ: ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ನೀಡಲಾಗುವ ಪ್ರತಿಷ್ಠಿತ 'ಅಮ್ಮ ಪ್ರಶಸ್ತಿ' ಈ ವರ್ಷ 25ನೇ ವರ್ಷಕ್ಕೆ ಕಾಲಿಟ್ಟಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ.

ಕಳೆದ 24 ವರ್ಷಗಳಿಂದ ಯಾವುದೇ ರಾಜಿಯಿಲ್ಲದೆ ಒಂದು ತಾಲೂಕು ಕೇಂದ್ರದಿಂದ ನಿರಂತರವಾಗಿ ನೀಡಲಾಗುತ್ತಿರುವ ಈ ಪ್ರಶಸ್ತಿಯನ್ನು, ಪತ್ರಕರ್ತ-ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಅವರು ತಮ್ಮ ತಾಯಿಯ ನೆನಪಿನಲ್ಲಿ ಸ್ಥಾಪಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂ‌ರ್ ಅವರು, ಈ ವರ್ಷ ಒಟ್ಟು 11 ಕೃತಿಗಳ-ಲೇಖಕರನ್ನು ರಾಜ್ಯಮಟ್ಟದ ಅಮ್ಮ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

25ನೇ ವರ್ಷದ 'ಅಮ್ಮ ಪ್ರಶಸ್ತಿ'ಗೆ ಆಯ್ಕೆಯಾದವರು:

ಕಾವ್ಯ ವಿಭಾಗದಲ್ಲಿ ಗೀತಾ ವಸಂತ (ಪ್ರಾಣಪಕ್ಷಿಯ ರೆಕ್ಕೆ) ಹಾಗೂ ಸದಾಶಿವ ಸೊರಟೂರು (ದೇವರನ್ನು ಹೊರ ಹಾಕುತ್ತೇನೆ), ಕಥಾ ವಿಭಾಗದಲ್ಲಿ ವಿಜಯಶ್ರೀ ಹಾಲಾಡಿ (ಉಮ್ಮಲ್ಲಿ ಗುಡಿಯ ಸಾಕ್ಷಿ) ಹಾಗೂ ಆನಂದ ಕುಂಚನೂರು (ನಿರೂಪ), ಕಾದಂಬರಿ ವಿಭಾಗದಲ್ಲಿ ಸುನಂದಾ ಕಡಮೆ (ಹೈವೇ 63) ಹಾಗೂ ಮುದಿರಾಜ ಬಾಣದ (ಸಿಕ್ಕು), ಸಂಕೀರ್ಣ ವಿಭಾಗದಲ್ಲಿ ಬಿ.ಸುರೇಶ (ಅಡುಗೆ ಮನೆಯಲ್ಲೊಂದು ಹುಲಿ) ಹಾಗೂ ಚಂದ್ರಶೇಖರ ಮದಭಾವಿ (ಮುರಿದ ಕಡಲು), ಪ್ರಬಂಧ ವಿಭಾಗದಲ್ಲಿ ಡಾ.ಬಸವರಾಜ ಸಾದರ (ಮೂವತ್ತು ಕ್ರಾಂತಿಕಾರಿ ವಚನಗಳು) ಹಾಗೂ ಸದಾನಂದ ಪಾಟೀಲ (ಕೊರೋನಾದ ಕಣ್ಣೀರಿನ ಕಥೆಗಳು), ಹಾಗೂ ಇದೇ ವರ್ಷದಿಂದ ಮಕ್ಕಳ ವಿಭಾಗದಲ್ಲಿ `ಬಹುರೂಪಿ' ಪ್ರಾಯೋಜಿತ ಅರುಣಾ ನರೇಂದ್ರ (ಕಮಲಿಯ ಕುರಿಮರಿ) ಕೃತಿಗಳನ್ನು 25ನೇ ವರ್ಷದ `ಅಮ್ಮ ಪ್ರಶಸ್ತಿ'ಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯ ಸ್ವರೂಪ:
ಪ್ರಶಸ್ತಿಯು ತಲಾ ₹5 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ವರ್ಷದಿಂದ ಆರಂಭಿಸಿರುವ ಬೆಂಗಳೂರಿನ ಬಹುರೂಪಿ ಪ್ರಾಯೋಜಿತ ಮಕ್ಕಳ ವಿಭಾಗದಲ್ಲಿ ಎರಡೂವರೆ ಸಾವಿರ ನಗದು, ಪುಸ್ತಕ ಬಹುಮಾನವನ್ನು ಸಹ ಇದೇ.

ಪ್ರಶಸ್ತಿ ಪ್ರದಾನ ಸಮಾರಂಭ:

ದಿನಾಂಕ: ನವೆಂಬರ್ 25
ಸಮಯ: ಸಂಜೆ 5:30ಕ್ಕೆ
ಸ್ಥಳ: ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪ

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...