ಅಪಾರ ಅನುಭವ ಮತ್ತು ಅಧ್ಯಯನದ ಸಂಗಮ ಈ ಕೃತಿ


"ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ ಶಿಕ್ಷಕರ ಮತ್ತು ಶಿಕ್ಷಣದ ವಿದ್ಯಾರ್ಥಿಗಳ ಕಣ್ಣು ತೆರೆಸುವ ಬೆಳಕಿನ ಹಾದಿ," ಎನ್ನುತ್ತಾರೆ ಡಾ. ಮಹಾಬಲೇಶ್ವರ ರಾವ್. ಅವರು ‘ನಾವು ಶಿಕ್ಷಕರು ಬದಲಾಗೋಣ’ ಕೃತಿಯ ಕುರಿತು ಬರೆದ ಲೇಖಕರ ಮಾತು ಇಲ್ಲಿದೆ.

ಈಚಿನ ಒಂದೆರಡು ವರ್ಷಗಳಲ್ಲಿ ನಾನು ವಿವಿಧ ವೇದಿಕೆಗಳಿಂದ ನೀಡಿದ ಶೈಕ್ಷಣಿಕ ಉಪನ್ಯಾಸಗಳನ್ನು ಆಧರಿಸಿ ಸಿದ್ದಪಡಿಸಿದ ಲೇಖನಗಳು. ಶಿಕ್ಷಕರ ಶಿಕ್ಷಣ, ಮೌಲ್ಯ ಶಿಕ್ಷಣ, ರಾಷ್ಟ್ರೀಯ ಶಿಕ್ಷಣ ನೀತಿ 2020, ಪಠ್ಯಪುಸ್ತಕ ರಚನೆಯ ವಿವಾದಗಳು, ಸಂರಚನವಾದ, ಆಪ್ತ ಸಮಾಲೋಚನೆ, ಖ್ಯಾತ ಶಿಕ್ಷಣ ಚಿಂತಕರಾದ ಅಂಬೇಡ್ಕ‌ರ್, ಜೆ.ಕೆ. ಹಾಗೂ ಜೆ.ಪಿ.ನಾಯ್ಕರ ಶಿಕ್ಷಣ ವಿಚಾರಧಾರೆ ಇತ್ಯಾದಿ ಪ್ರಮುಖ ವಿಷಯಗಳ ಮೇಲೆ ಬೆಳಕು ಚೆಲ್ಲುವ ಈ ಸಂಕಲನವನ್ನು ಬದಲಾಗಲು ಬಯಸುವವರು ಸ್ವಾಗತಿಸುವರೆಂದು ನಂಬಿದ್ದೇನೆ.

ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗಳು ಹಾಗೂ ಒಲವುನಿಲುವುಗಳ ಬಗ್ಗೆ ಅನನ್ಯವಾದ ರೀತಿಯಲ್ಲಿ ಬರವಣಿಗೆ ಮತ್ತು ಸಾರ್ವಜನಿಕ ಸಂಕಥನಗಳಲ್ಲಿ ನಾಡಿನ ಹೆಸರಾಂತ ಶಿಕ್ಷಣ ತಜ್ಞ ಡಾ. ಮಹಾಬಲೇಶ್ವರ ರಾವ್‌ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ, ಪಠ್ಯಪುಸ್ತಕಗಳ ರಚನೆ, ಶಿಕ್ಷಕರ ಶಿಕ್ಷಣ, ಮೌಲ್ಯ ಶಿಕ್ಷಣ, ಡಿಜಿಟಲ್ ಮಾಧ್ಯಮ ಇವೇ ಮೊದಲಾದ ಚರ್ಚಾರ್ಹ ವಿಚಾರಗಳಿಗೆ ಅಭಿಮುಖವಾಗಿ ಏನಾಗಿದೆ? ಏನಾಗಬೇಕಾಗಿದೆ ಎಂಬುದನ್ನು ತಲಸ್ಪರ್ಶಿಯಾಗಿ ವಿಶ್ಲೇಷಿಸಿ ಅತ್ಯಂತ ಖಚಿತವಾಗಿ ತಮ್ಮ ನಿಲುವುಗಳನ್ನು ಡಾ.ರಾವ್ ಇಲ್ಲಿ ಮಂಡಿಸಿದ್ದಾರೆ.

ನಾವು ಅಷ್ಟಾಗಿ ಗಮನ ಕೊಡದ ಜಿಡ್ಡು ಕೃಷ್ಣಮೂರ್ತಿ, ಡಾ. ಅಂಬೇಡ್ಕರ್, ಡಾ. ಜೆಪಿ ನಾಯ್ಕ ಮುಂತಾದ ಚಿಂತಕರ ಶಿಕ್ಷಣ ದರ್ಶನಗಳ ಮೇಲೆ ವಿಶ್ಲೇಷವಾದ ಬೆಳಕು ಚೆಲ್ಲಿ ಸದ್ಯದ ಸಂದರ್ಭದಲ್ಲಿ ಅವರ ಮಹತ್ತ್ವವನ್ನು ಮನಗಾಣಿಸಿದ್ದಾರೆ. ಆಧುನಿಕೋತ್ತರ ಸಂದರ್ಭದಲ್ಲಿ ನಾಡಿನ ಶೈಕ್ಷಣಿಕಪ್ರಗತಿ ಹೇಗಾಗಬೇಕು, ಬೋಧನೆ ಕಲಿಕೆ ಹೇಗೆ ಉತ್ಕೃಷ್ಟಗೊಳ್ಳಬೇಕು ಮತ್ತು ಬಹಳ ಮುಖ್ಯವಾಗಿ ಶೈಕ್ಷಣಿಕ ಪ್ರಕ್ರಿಯೆಯ ಹೃದಯವೇ ಆಗಿರುವ ಶಿಕ್ಷಕರು ಹೇಗೆ ಬದಲಾಗಬೇಕು ಎಂಬುದನ್ನು ಡಾ. ರಾವ್ ಈ ಸಂಕಲನದ ಲೇಖನಗಳಲ್ಲಿ ಮಾರ್ಮಿಕವಾಗಿ ಪ್ರತಿಪಾದಿಸಿದ್ದಾರೆ. ಅಪಾರ ಅನುಭವ ಮತ್ತು ಅಧ್ಯಯನದ ಸಂಗಮವಾದ ಈ ಕೃತಿ ಶಿಕ್ಷಣ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಅದರಲ್ಲೂ ಪ್ರಮುಖವಾಗಿ ಶಿಕ್ಷಕರ ಮತ್ತು ಶಿಕ್ಷಣದ ವಿದ್ಯಾರ್ಥಿಗಳ ಕಣ್ಣು ತೆರೆಸುವ ಬೆಳಕಿನ ಹಾದಿ.

- ಡಾ ಮಹಾಬಲೇಶ್ವರ ರಾವ್

MORE FEATURES

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...

ಅಕಾಲದಲ್ಲೊಂದು ಸಕಾಲಿಕ ಪುಸ್ತಕ ‘ಗಾಂಧೀಜಿಯ ಹಂತಕ: ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ'

19-05-2024 ಬೆಂಗಳೂರು

ಗಾಂಧಿ ಹತ್ಯೆ – ಆ ಕಾಲದ ರಾಜಕೀಯದಲ್ಲಿ ಸಾವರ್ಕರ್ ಪಾತ್ರ – ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಪಾತ್ರ &nd...

ತಲೆ ಮೇಲೆ ಸುರಿದ ನೀರು ಕಾಲಿಗೆ ಬಂದೇ ಬರುತ್ತದೆ: ವಿ. ಗಣೇಶ್

19-05-2024 ಬೆಂಗಳೂರು

`ಇಂದು ಜಗತ್ತಿನಾದ್ಯಂತ ಎದ್ದುಕಾಣುತ್ತಿರುವ ಹಿರಿಯರ, ಅದರಲ್ಲೂ ಇಳಿ ವಯಸ್ಸಿನ ತಂದೆ-ತಾಯಿಂದಿರ ನಿರ್ಲಕ್ಷತನ ಕಾದಂಬರಿಯಲ್...