ಅಪರಿಚಿತ ದೇವಾಲಯಗಳ ಬಗ್ಗೆ ಅಪೂರ್ವ ಮಾಹಿತಿ


‘ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರಿಗೆ ಸಾಧ್ಯವಾದಷ್ಟು ಅಧ್ಯಯನ ಮಾಡಿ ಪರಿಚಯ ಮಾಡಿಸುವ ಕೊಂಡಿ ಮಾತ್ರ ನಾನು’ ಎನ್ನುತ್ತಾರೆ ಶ್ರೀನಿವಾಸ ಮೂರ್ತಿ ಎನ್.ಎಸ್. ಅವರು ‘ಶಿಲ್ಪಕಲಾ ದೇವಾಲಯಕ್ಕೆ ದಾರಿ’ ಕೃತಿಗೆ ಬರೆದ ಅರಿಕೆ ಇಲ್ಲಿದೆ.

ನಾಡಿನ ಬಹುತೇಕ ಎಲ್ಲಾ ಜಿಲ್ಲೆಗಳಲ್ಲೂ ಸಾಕಷ್ಟು ಶಿಲ್ಪ ಕಲಾ ದೇವಾಲಯ ಗಳಿದ್ದು ಹಲವು ಅರಸರು ನಿರ್ಮಿಸಿದ್ದಾರೆ. ಆದರೆ ಹೆಚ್ಚಿನ ಕಲಾತ್ಮಕ ಪುರಾತನ ಶಿಲಾ ದೇವಾಲಯಗಳು, ದೇವಾಲಯಗಳಲ್ಲಿನ ಶಿಲ್ಪಗಳು ಜನರಿಗೆ ಸರಳ ಆದರೆ ಖಚಿತ ಮಾಹಿತಿಯ ಕೊರತೆಯಿಂದ ತಲುಪುತ್ತಿಲ್ಲ. ಸಂಶೋಧನೆಗಳಗೆ ಸೀಮಿತವಾದ ಮಾಹಿತಿಯನ್ನು ಜನರಿಗೆ ತಲುಪಿಸಿವ ಕೆಲಸ ಆಗಬೇಕಾಗಿದೆ. ನನ್ನ ಎರಡು ದಶಕಕ್ಕೂ ಮಿಗಿಲಾದ ಪ್ರವಾಸದಲ್ಲಿ ಹಲವು ಪ್ರವಾಸಿಗರ ಭೇಟಿಯಲ್ಲಿ ಈ ಅನುಭವವಾಗಿದೆ.

ಅಂತಹ ಅಪುರೂಪದ ದೇವಾಲಯಗಳನ್ನು ಪರಿಚಯಿಸುವ ದೃಷ್ಟಿಯಿಂದ ಪತ್ರಿಕೆಗೆ ಅಂಕಣಗಳನ್ನು ಬರೆಯಲು ಆರಂಭಿಸಿದೆ. ನನ್ನ ದೇವಾಲಯದ ಪಯಣದಲ್ಲಿ ನಾಡಿನ ಸುಮಾರು 1600ಕ್ಕೂ ಅಧಿಕ ದೇವಾಲಯಗಳಿಗೆ ಭೇಟಿ ನೀಡಿ ಅದನ್ನು ಸಂಶೋಧನಕ್ಕೆ ಸೀಮಿತಗೊಳಿಸದೇ ಜನರಿಗೆ ತಲುಪಿಸುವ ಪ್ರಯತ್ನದಲ್ಲಿ ಬಂದ ಅಂಕಣಗಳು ಇವು.

ಈ ಹಿನ್ನೆಲೆಯಲ್ಲಿ ಇದುವರೆಗೆ ಸುಮಾರು 600ಕ್ಕೂ ಅಧಿಕ ಅಂಕಣಗಳು ಬಂದಿದ್ದು ಅಯ್ದ 100 ಅಂಕಣ ಬರಹಗಳು 'ಶಿಲ್ಪ ಕಲಾ ಲೋಕಕ್ಕೆ ದಾರಿ' ಸಂಪುಟ ಒಂದರಲ್ಲಿ, ಸಂಪುಟ ಎರಡು, ಮೂರು ನಾಲ್ಕು ಮತ್ತು ಐದರಲ್ಲಿ ತಲಾ 50 ಅಂಕಣ ಪ್ರಕಟವಾಗಿದ್ದವು. ಮೊದಲ ಪುಸ್ತಕಕ್ಕೆ ಪ್ರತಿಷ್ಟಿತ ಕಲಿಂಗ ಲಿಟೆರೆರಿ ಫೆಷ್ಟಿವಲ್ - ಕೆ ಎಲ್ ಎಫ್ ಭಾಷಾ ಸಮ್ಮಾನ್ (ಕನ್ನಡ) 2022 ಪ್ರಶಸ್ತಿ ಬಂದಿದೆ. ಇದಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಹಾಗು ಬೇಡಿಕೆಯ ಹಿನ್ನೆಲೆಯಲ್ಲಿ ಆರನೇ ಭಾಗದಲ್ಲಿ 50 ಅಂಕಣ ಬರಹಗಳನ್ನು ಸೇರಿಸಲಾಗಿದೆ. ಓದುಗರ ಸಲಹೆಯಂತೆ ಪುಸ್ತಕವನ್ನು 50 ಅಂಕಣಗಳಿಗೆ ಸೀಮಿತ ಮಾಡಿದ್ದು ಉಳಿದ ಭಾಗಗಳು ನಂತರದ ಪುಸ್ತಕದಲ್ಲಿ ಬರಲಿವೆ. ಕೆಂಗೇರಿ ಚಕ್ರಪಾಣಿ ಹಾಗೂ ಶಶಿಧರ್ ಹೆಚ್.ಜಿ. (ರಾಮನಾಥಪುರ, ಚೌಳಹಿರಿಯೂರು) ಹಾಗೂ ಎಲ್ಲರಿಗೂ ಧನ್ಯವಾದಗಳು, ದೇವಾಲಯಗಳ ಮಾಹಿತಿ ನೀಡಿ ಛಾಯಾಚಿತ್ರ ತೆಗೆಯಲು ಸಹಕರಿಸಿದ ಅಸಂಖ್ಯ ದೇವಾಲಯಗಳ ಅರ್ಚಕರು ಹಾಗು ದೇವಾಲಯಗಳ ಸಮಿತಿಗಳನ್ನು ನೆನಪಿಸಿಕೊಳ್ಳಲೇಬೇಕು.

ಹಲವು ದೇವಾಲಯಗಳ ಪಯಣದ ಕಿರಿಕಿರಿ ಸಹಿಸಿದ ನನ್ನ ಪತ್ನಿ ಸಂಧ್ಯಾ, ಮಗಳು ನಿಹಾರಿಕ ಹಾಗೂ ನನ್ನ ಚಟುವಟಿಕೆಗೆ ಪ್ರೋತ್ಸಾಹ ನೀಡಿದ ನನ್ನ ತಂದೆ ಗಣಿತ ಲೇಖಕರಾಗಿದ್ದ ಸೀತಾ ರಾಮರಾವ್ ಎನ್.ಎಸ್., ತಾಯಿ ಜಿ.ಎಸ್., ಪ್ರೇಮಲೀಲ ಹಾಗೂ ಸಹೋದರ ಹಿರಿಯ ಪತ್ರಕರ್ತ ಹಾಗೂ ಲೇಖಕ ಶ್ರೀಧರ ಮೂರ್ತಿ ಎನ್.ಎಸ್.ರವರನ್ನು ನೆನಪಿಸಿಕೊಳ್ಳದಿದ್ದರೆ ಅಪೂರ್ಣ ಎನಿಸುತ್ತದೆ.

ಇದು ಪುರಾತನ ದೇವಾಲಯಗಳ ಅಸಂಖ್ಯ ಸಾಗರದ ನಡುವಿನ ಚಿಕ್ಕ ಬಿಂದು ಮಾತ್ರ. ಜನಮಾನಸದಿಂದ ದೂರವಾದ ದೇವಾಲಯಗಳನ್ನು ಜನರಿಗೆ ಸಾಧ್ಯವಾದಷ್ಟು ಅಧ್ಯಯನ ಮಾಡಿ ಪರಿಚಯ ಮಾಡಿಸುವ ಕೊಂಡಿ ಮಾತ್ರ ನಾನು. ಇದರಲ್ಲಿ ಹಲವು ವಿದ್ವಾಂಸರ ಹಾಗೂ ಸಂಶೋಧಕರ ನಿರಂತರ ಸಾಧನೆಗೆ ವಂದಿಸುತ್ತಾ.

-ಶ್ರೀನಿವಾಸ ಮೂರ್ತಿ ಎನ್.ಎಸ್

MORE FEATURES

2023ರ ಸ್ವಾಭಿಮಾನಿ ಪುಸ್ತಕ ಪ್ರಶಸ್ತಿ ಪ್ರಕಟ

17-05-2024 ಬೆಂಗಳೂರು

ಕನ್ನಡ ಚಳುವಳಿ ಮತ್ತು ಸಾಹಿತ್ಯಕ ಚಟುವಟಿಕೆಯಲ್ಲಿ ಸಕ್ರಿಯವಾಗಿರುವ ಸ್ವಾಭಿಮಾನಿ ಕರ್ನಾಟಕ ವೇದಿಕೆಯ ವತಿಯಿಂದ ಕನ್ನಡ ಸಾಹ...

ನೆಲದೆದೆಯ ಕಸುವಿನ ಕಥನ ಮತ್ತು ದರ್ಶನ

17-05-2024 ಬೆಂಗಳೂರು

'ಈ ಕಥನಗಳನೆಲ್ಲ ಜೋಡಿಸಿದರೆ ಆಧುನಿಕ ಬದುಕಿನ ಮಹಾಕಥನವಾಗುತ್ತದೆ. ಆಧುನಿಕ ಬದುಕಿನ ಛಿದ್ರತೆ, ಅಪೂರ್ಣತೆಗಳಿಗೆ ಎದುರ...

ಧಮ್ಮವು ಬೆಳೆಯಲಿ, ಬೆಳಗಲಿ. ನಾಡು ಪ್ರಬುದ್ಧ ಭಾರತದತ್ತ ಸಾಗಲಿ

17-05-2024 ಬೆಂಗಳೂರು

'ಶತಮಾನಗಳ ನಂತರ ಹುಟ್ಟಿದ ನಾಡಿನಿಂದಲೇ ಮರೆಯಾಗಿದ್ದ ಧಮ್ಮವನ್ನು ಮತ್ತೆ ಮರುಸ್ಥಾಪಿಸಿದವರು ಸಿಂಹಳದ ಬೌದ್ಧ ಭಿಕ್ಕು ...