Date: 21-11-2025
Location: ಬೆಂಗಳೂರು
ಬೆಂಗಳೂರು: ಭಾರತೀಯ ವಿದ್ಯಾಭವನದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕಿಯಾಗಿದ್ದ ಜಾಕಿಯಾ ಶಂಕರ್ ಪಾಠಕ್ ಅವರ ಹೆಸರಿನಲ್ಲಿ ಕೊಡಮಾಡುವ ʻಭವನ್ -ಜಾಕಿಯಾ ಶಂಕರ್ ಪಾಠಕ್ʼ ದತ್ತಿನಿಧಿ ಪ್ರಶಸ್ತಿಯು ಬೂಕರ್ ಪ್ರಶಸ್ತಿ ವಿಜೇತ ದೀಪಾ ಭಾಸ್ತಿ ಸೇರಿದಂತೆ ಏಳು ಜನರಿಗೆ ಲಭಿಸಿದೆ.
ಜಾಕಿಯಾ ಶಂಕರ್ ಪಾಠಕ್ ಅವರ ಕುಟುಂಬವು ಭಾರತೀಯ ವಿದ್ಯಾಭವನದಲ್ಲಿ ದತ್ತಿನಿಧಿಯೊಂದನ್ನು ಸ್ಥಾಪಿಸಿದ್ದು, ಪ್ರತಿವರ್ಷ ಇಂಗ್ಲಿಷ್ ಭಾಷೆಯ ಸಂವರ್ಧನೆಗಾಗಿ ಅನುಪಮ ಸೇವೆ ಸಲ್ಲಿಸಿದ ಸಾಹಿತ್ಯ, ಶಿಕ್ಷಣ ಮತ್ತು ವಿದ್ಯಾರ್ಥಿ ವಿಭಾಗಗಳಲ್ಲಿ ಪ್ರತಿವರ್ಷ ಮೂರು ಪ್ರಶಸ್ತಿಗಳನ್ನು ನೀಡುತ್ತಿದೆ.
2024ನೆಯ ಸಾಲಿನ ಇಂಗ್ಲಿಷ್ ಸಾಹಿತ್ಯ ಸೇವೆಗಾಗಿ ಡಾ. ವಿ.ಆರ್. ದೇವಿಕಾ, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಶುಭಾಮದನ್, ಹಾಗೂ ವಿದ್ಯಾರ್ಥಿ ಪುರಸ್ಕಾರಕ್ಕಾಗಿ ಕು.ಆನಂದಿ ಮತ್ತು 2025ನೆಯ ಸಾಲಿನ ಇಂಗ್ಲಿಷ್ ಸಾಹಿತ್ಯ ಸೇವೆಗಾಗಿ ಬೂಕರ್ ಪ್ರಶಸ್ತಿ ವಿಜೇತ ದೀಪಾ ಭಾಸ್ತಿ, ಶೈಕ್ಷಣಿಕ ಕ್ಷೇತ್ರದ ಸಾಧನೆಗಾಗಿ ಆರಾಧನಾ, ವಿದ್ಯಾರ್ಥಿ ಪುರಸ್ಕಾರಕ್ಕಾಗಿ ಕು. ಅಪ್ಸರಾ ಅನಾದಿ ಹಾಗೂ ಕು. ನಿಸರ್ಗ ನಾರಾಯಣ್ ಅವರನ್ನು ಯುನೆಸ್ಕೋದ ಮಾಜಿ ರಿಯಭಾರಿ ಚಿರಂಜೀವ್ ಸಿಂಗ್, ಭಾರತೀಯ ವಿದ್ಯಾಭವನದ ನಿರ್ದೆಶಕರಾದ ಎಚ್.ಎನ್. ಸುರೇಶ್, ಅಭಿನವ ರವಿಕುಮಾರ್ ಅವರನ್ನೊಳಗೊಂಡ ಸಮಿತಿ ಆಯ್ಕೆ ಮಾಡಿದೆ.
ಪ್ರಶಸ್ತಿಯು ಕ್ರಮವಾಗಿ ರೂ.10,000, 5000, 3000ಗಳ ನಗದು ಮತ್ತು ಫಲಕಗಳನ್ನು ಒಳಗೊಂಡಿರುತ್ತದೆ. ಡಿಸೆಂಬರ್ 4, 2025ರಂದು ಸಂಜೆ 4.00 ಗಂಟೆಗೆ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಿರಿಯ ಭಾರತೀಯ ಆಡಳಿತ ಸೇವೆಯ ಅಧಿಕಾರಿಗಳಾದ ಡಾ. ರಿತೇಷ್ ಕುಮಾರ್ ಸಿಂಗ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದು, ಚಿರಂಜೀವ್ ಸಿಂಫ್, ದತ್ತಿದಾನ ನರಸಿಂಹಮೂರ್ತಿ ಅತಿಥಿಗಳಾಗಿ ಭಾಗವಹಿಸುವರು. ಭಾರತೀಯ ವಿದ್ಯಾಭವನದ ಅಧ್ಯಕ್ಷರು, ಹಿರಿಯ ನ್ಯಾಯವಾದಿಗಳಾದ ಕೆ.ಜಿ. ರಾಘವನ್ ಅಧ್ಯಕ್ಷತೆ ವಹಿಸುವರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.