ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ'ಗೆ ಕೃತಿಗಳ ಆಹ್ವಾನ

Date: 26-11-2025

Location: ಬಾಗಲಕೋಟೆ


ಬಾಗಲಕೋಟೆ: ಶ್ರೀಮತಿ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನ,ಯಂಡಿಗೇರಿ. ಜಿ.ಬಾಗಲಕೋಟೆ, ಇವರಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ರಾಜ್ಯಮಟ್ಟದ "ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ-2025" ಕ್ಕೆ ಕೃತಿಗಳನ್ನು ಆಹ್ವಾನಿಸಿದೆ.

ಆಸಕ್ತ ಲೇಖಕರು, ಪ್ರಕಾಶಕರು ಕಥೆ, ಕವನ, ಕಾದಂಬರಿ ಪ್ರಕಾರಗಳ ಕೃತಿಗಳನ್ನು ಕಳುಹಿಸಬಹುದು. 

2025 ರಲ್ಲಿ ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವ ಕೃತಿಗಳ ಮೂರು  ಪ್ರತಿಗಳನ್ನು ಕಳುಹಿಸಬೇಕು. ಕೃತಿಗಳ ಲಕೋಟೆಯ ಮೇಲೆ ರಾಜ್ಯಮಟ್ಟದ "ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ- 2025" ಎಂದು ನಮೂದಿಸಬೇಕು. ಕೃತಿಗಳು ಡಿಸೆಂಬರ್ 31,2025 ರೊಳಗೆ ತಲುಪಬೇಕು. ನಂತರ ಬಂದ ಕೃತಿಗಳನ್ನು ಪರಿಗಣಿಸಲಾಗುವುದಿಲ್ಲ.
 
2026ರ ಫೆಬ್ರವರಿ ತಿಂಗಳು ಬಾಗಲಕೋಟೆಯಲ್ಲಿ ಆಯೋಜಿಸುವ ಸಮಾರಂಭದಲ್ಲಿ ಆಯ್ಕೆಯಾದ ಕೃತಿಗಳಿಗೆ ಪ್ರಶಸ್ತಿಪ್ರದಾನ ಮಾಡಲಾಗುವುದು. 

ಪ್ರಶಸ್ತಿಯು ಮೂರು ಪ್ರಕಾರಗಳಿಗೆ ತಲಾ ರೂ, 10,000/-  ನಗದು ಬಹುಮಾನ, ಪ್ರಶಸ್ತಿಫಲಕ ಹಾಗೂ ಸನ್ಮಾನ ಒಳಗೊಂಡಿರುತ್ತದೆಯೆಂದು  ಪತ್ರಿಕಾ ಪ್ರಕಟಣೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷರು ತಿಳಿಸಿರುತ್ತಾರೆ.

ಕೃತಿಗಳನ್ನು ಮಲ್ಲಿಕಾರ್ಜುನ ಶೆಲ್ಲಿಕೇರಿ, #19/1/1, ಸಿರಿ, ಈಶ್ವರ ದೇವಸ್ಥಾನ ಹತ್ತಿರ, 22 ನೇಕ್ರಾಸ್, ವಿದ್ಯಾಗಿರಿ, ಬಾಗಲಕೋಟೆ-587102 ವಿಳಾಸಕ್ಕೆ ಕಳುಹಿಸುವಂತೆ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ.9113528879 ಸಂಪರ್ಕಿಸಲು ಕೋರಿದೆ.

MORE NEWS

`Growing Up karantha' ಕೃತಿಯನ್ನ ನಾನು ಹಠದಿಂದಲೇ ಬರೆದಿದ್ದೇನೆ; ಉಲ್ಲಾಸ್‌ ಕಾರಂತ್

07-12-2025 ಬೆಂಗಳೂರು

ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...

ವಿಭಿನ್ನ ಸಾಹಿತ್ಯಗಳ ವಿಚಾರಧಾರೆಗಳ ಸಮ್ಮಿಲನ 'BLF'

07-12-2025 ಬೆಂಗಳೂರು

ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...

ಓದುಗರು ಹೊಸತನದ ಕೃತಿಗಳನ್ನು ಓದಬೇಕು: ಶ್ರೀನಿವಾಸ ಪ್ರಭು

07-12-2025 ಬೆಂಗಳೂರು

ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...