Date: 22-02-2025
Location: ಬೆಂಗಳೂರು
ಬೆಂಗಳೂರು: 23 ವರ್ಷಗಳ ಹಿಂದೆ ಉದಯೋನ್ಮುಖ ಸಾಹಿತಿಯಾಗಿ ನನಗೆ ಪರಿಚಯವಾದ ಎಚ್. ಟಿ ಪೋತೆಯವರು, ಈಗ 54 ಪುಸ್ತಕಗಳನ್ನು ಬರೆದಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳ ಬರವಣಿಗೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಂತಹ ಇವರನ್ನು ಸನ್ಮಾನಿಸುವುದು, ಅಭಿನಂದಿಸುವುದು ಬಹಳ ಮುಖ್ಯವಾದ ಸಮಾಜಿಕ ಜವಬ್ದಾರಿ ಎಂದು ಹಿರಿಯ ಕವಿ, ಸಂಸ್ಕೃತಿ ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಅಭಿಪ್ರಾಯ ಪಟ್ಟರು.

ಸಪ್ನ ಬುಕ್ ಹೌಸ್ ಮತ್ತು ಗಾಂಧಿ ಸ್ಮಾರಕ ನಿಧಿ, ಬೆಂಗಳೂರು ಇವರ ಆಶ್ರಯದಲ್ಲಿ ನೆಡೆದ ಎಚ್.ಟಿ. ಪೋತೆ ಅವರ 60 ಅಭಿನಂದನಾ ಕಾರ್ಯಕ್ರಮದ ವೇಳೆ ಮಾತನಾಡಿದ ಮೂಡ್ನಾಕೂಡು ಚಿನ್ನಸ್ವಾಮಿ ಅವರು ಅನೇಕ ಕ್ಷೇತ್ರಗಳಲ್ಲಿ ಏಕ ಕಾಲದಲ್ಲಿ ಧ್ಯಾನಸ್ಥರಾಗಿ ತೊಡಗಿಕೊಳ್ಳುವ ಅವರ ಶಿಸ್ತು, ಛಲ, ಬದ್ಧತೆಗಳನ್ನು ನಾವು ನೆನೆಯಲೇ ಬೇಕು. ಹೈದರಬಾದ್ ಕರ್ನಾಟಕ ಸಾಹಿತಿಗಳಿಗೆ ಹೆಚ್ಚು ಮಾನ್ಯತೆ ಕೊಡುವುದಿಲ್ಲ ಎಂಬ ಮಾತನ್ನು ಸುಳ್ಳು ಮಾಡಿದವರು ಪೋತೆಯವರು. ದಲಿತ ಸಾಹಿತ್ಯವನ್ನು ಹೆಚ್ಚು ಜನರಿಗೆ ತಲುಪಿಸುವಲ್ಲಿ ಇವರು ಯಶಸ್ವಿಯಾಗಿದ್ದಾರೆ ಎಂದರು.
ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ, ಬೆಂಗಳೂರು ಇದರ ಕಾರ್ಯದರ್ಶಿಗಳಾದ ನಾಡೋಜ ಡಾ. ವೂಡೇ ಪಿ. ಕೃಷ್ಣ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ "ಯಾರು ನಿರಂತರ ಅಧ್ಯಯನ, ಅಧ್ಯಾಪನದಲ್ಲಿರುತ್ತಾರೆ ಅವರು ಸಾಧನೆ ಹಾದಿಗೆ ಹತ್ತಿರವಾಗುತ್ತಾರೆ. ತಮ್ಮ ಇಡೀ ಜೀವನ ಅಂಬೇಡ್ಕರ್ ಅವರ ಜೀವನ ಸಂದೇಶವನ್ನು ಸಾರುತ್ತ ಕಳೆದು ಹೆಸರು ಮಾಡಿದವರು ಪೋತೆಯವರು. ಹಳ್ಳಿಗೊಬ್ಬ ಎಚ್. ಟಿ. ಪೋತೆ ಇದ್ದರೆ ಅಂಬೇಡ್ಕರ್ ಕನಸು ನನಸಾಗುವುದಂತು ಖಂಡಿತ" ಎಂದರು.
ಪ್ರೊ. ಪಿ.ಕೆ ಖಂಡೋಬಾ, ಪ್ರೊ. ವ್ಹಿ.ಜಿ. ಪೂಜಾರ, ಪ್ರೊ. ಡಿ.ಬಿ. ನಾಯಕ, ಪ್ರೊ. ಬಸವರಾಜ ಸಬರದ ,ಪ್ರೊ. ದೊಡ್ಡಣ್ಣ ಬಜಂತ್ರಿ ಅವರಿಗೆ ಕಾರ್ಯಕ್ರಮದಲ್ಲಿ ಗುರುವಂದನೆ ಮಾಡಲಾಯಿತು ಹಾಗೂ ಡಾ. ಬಸವರಾಜ ಕೊನೇಕ್, ಶ್ರೀ ಪ್ರಕಾಶ ಕಂಬತ್ತಳ್ಳಿ, ಶ್ರೀ ಗುರುಮೂರ್ತಿ, ಶ್ರೀ ಕೃಷ್ಣಮೂರ್ತಿ ಅವರಿಗೆ ಸನ್ಮಾನಿಸಲಾಯಿತು.
ಕನ್ನಡ ಅಧ್ಯಯನ ಸಂಸ್ಥೆ ಗುಲಬರ್ಗಾ ವಿಶ್ವವಿದ್ಯಾಲಯದ ನಿರ್ದೇಕರಾದ ಪ್ರೊ. ಎಚ್.ಟಿ. ಪೋತೆ ಮತ್ತು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಗೂರು ಶ್ರೀರಾಮುಲು ಅವರು ಕಾರ್ಯಕ್ರಮದಲ್ಲಿಉಪಸ್ಥಿತರಿದ್ದರು.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.