ಹೊಸ್ತೋಟ ಮಂಜುನಾಥ ಭಾಗವತರ ಸಂಸ್ಮರಣ ಕೃತಿ ‘ಯಕ್ಷಹಂಸ’ ಲೋಕಾರ್ಪಣೆ

Date: 01-05-2024

Location: ಬೆಂಗಳೂರು


ಹೊಸ್ತೋಟ ಮಂಜುನಾಥ ಭಾಗವತರ ಬಗ್ಗೆ ಬರೆದಿರುವ ‘ಯಕ್ಷಹಂಸ’ ಕೃತಿ ಲೋಕಾರ್ಪಣೆ ಸಮಾರಂಭವು ದಿನಾಂಕ 2024 ಏಪ್ರಿಲ್ 30, ಮಂಗಳವಾರ ಸಂಜೆ ನಾಲ್ಕು ಗಂಟೆಗೆ ಶಿರಸಿದ ಸುಪ್ರಿಯಾ ಸಭಾಂಗಣದಲ್ಲಿ ನೆರವೇರಿತು. 

ಯಕ್ಷಗಾನಕ್ಕಾಗಿ ಬದುಕನ್ನೇ ಮೀಸಲಿಟ್ಟು ಕಲಾಕ್ಷೇತ್ರಕ್ಕೆ ಕೊಡುಗೆ ನೀಡಿದ ಹೊಸ್ತೋಟ ಮಂಜುನಾಥ ಭಾಗವತರ ಕಲಾಬದುಕಿನ ಕುರಿತ ಈ ಗ್ರಂಥದ ಪ್ರಧಾನ ಸಂಪಾದಕಿ ವಿಜಯನಳಿನಿ ರಮೇಶ, ಮಾರ್ಗದರ್ಶಕ ಎಂ. ಪ್ರಭಾಕರ ಜೋಶಿ, ನೀನಾಸಂ ಮುಖ್ಯಸ್ಥ ಕೆ.ವಿ.ಅಕ್ಷರ, ಹಿರಿಯ ಕಲಾವಿದ ಗೋಡೆ ನಾರಾಯಣ ಹೆಗಡೆ ಸಮಾರಂಭದಲ್ಲಿ ಭಾಗವಹಿಸಿದ್ದರು.

ನಾಲ್ಕು ವಿಭಾಗ ಮತ್ತು 520 ಪುಟಗಳುಳ್ಳ ಕೃತಿಯಲ್ಲಿ ಒಟ್ಟು 76 ಲೇಖನಗಳಿವೆ. ಭಾಗವತರ ಸಂಶೋಧನಾತ್ಮಕ ಮತ್ತು ತಾತ್ವಿಕತೆಗೆ ಸಂಬಂಧಿಸಿದ ಕಾರ್ಯಗಳ ಕುರಿತು ವಿಶ್ಲೇಷಣೆ, ಹಳೆಯ ವಿಷಯಗಳನ್ನು ಹೊಸ ರೀತಿಯಲ್ಲಿ ವ್ಯಕ್ತಪಡಿಸಿದ ಪ್ರಸಂಗ ಗುಚ್ಛಗಳ ಪರಾಮರ್ಶೆ, ಯಕ್ಷಗಾನ ವಿಸ್ತರಣೆಯ ಚಿತ್ರಣವಿದೆ. ಭಾಗವತರ ಒಡನಾಡಿಗಳು, ಅಭಿಮಾನಿಗಳು, ಶಿಷ್ಯವೃಂದ, ಕಲಾಕ್ಷೇತ್ರದ ಸಹವರ್ತಿಗಳ ಬರಹಗಳು ಈ ಗ್ರಂಥದಲ್ಲಿ ಸಂಕಲನಗೊಂಡಿವೆ. 

MORE NEWS

ಜಿ. ಕೃಷ್ಣಪ್ಪ ಅವರ ಸಾಹಿತ್ಯಾಸಕ್ತಿ ಮೆಚ್ಚುವಂತಹದ್ದು: ಹಿ. ಚೀ. ಬೋರಲಿಂಗಯ್ಯ

20-05-2024 ಬೆಂಗಳೂರು

ಬೆಂಗಳೂರು: ಯಾವ ಯಾವ ಘಟನೆಗಳು ಪುಟ್ಟಪ್ಪ ಅವರನ್ನ ಕುವೆಂಪುವಾಗಿ ರೂಪಿಸಿತು, ಕುವೆಂಪು ಒಬ್ಬ ದಾರ್ಶನಿಕ ಬರಹಗಾರರಾಗಿದ್ದು...

10ನೇ ಮೇ ಸಾಹಿತ್ಯ ಮೇಳದ ಪುರಸ್ಕಾರ ಪ್ರಕಟ

20-05-2024 ಬೆಂಗಳೂರು

ಮಾಧವಿ ಭಂಡಾರಿ ಕೆರೆಕೋಣ ಇವರಿಗೆ 'ನವಲಕಲ್ ಬೃಹನ್ಮಠ ಶಾಂತವೀರಮ್ಮ'ಮಹಾತಾಯಿ ಕಥಾ ಪ್ರಶಸ್ತಿ' ಉತ್ತರ ಕ...

ಜಿ.ಟಿ.ಭಟ್ಟರ 80ರ ಸಂಭ್ರಮಕ್ಕೆ ಅಭಿನಂದನಾ ಗ್ರಂಥ ಲೋಕಾರ್ಪಣೆ

20-05-2024 ಬೆಂಗಳೂರು

ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿಯಲ್ಲಿ ದಿನಾಂಕ 2024 ಮೇ 19ರ ಭಾನುವಾರದಂದು ಜಿ.ಟಿ.ಭಟ್ಟರ 80ರ ಸಂಭ್ರಮದ ಜೊತೆಗೆ ಅವರ ...