Date: 18-01-2024
Location: ಬೆಂಗಳೂರು
ಬೆಂಗಳೂರು: ಭಾರತೀಯ ವಿದ್ಯಾಭವನ ಮತ್ತು ಇನ್ಫೋಸಿಸ್ ಪ್ರತಿಷ್ಠಾನ ಜೊತೆಗೂಡಿ 2024 ಜ.20 ಶನಿವಾರದಿಂದ 26 ಶುಕ್ರವಾರದವರೆಗೆ ಫ್ಯೂಷನ್ ಸಂಗೀತ ನೃತ್ಯೋತ್ಸವ ಕಾರ್ಯಕ್ರಮವನ್ನು ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಂಡಿದೆ.
ಫ್ಯೂಷನ್ ಸಂಗೀತ ಮತ್ತು ನೃತ್ಯೋತ್ಸವ 2024: ನಮ್ಮಲ್ಲಿ ಅನೇಕ ಕಲಾಪ್ರಕಾರಗಳು ಒಂದರೊಡಗೂಡಿ ಮತ್ತೊಂದು ಕಲಾಸಂಪ್ರದಾಯವಾದ ಉದಾಹರಣೆಗಳಿವೆ. ಬಹಳ ಹಿಂದಿನಿಂದ ಕರ್ನಾಟಕಿ ಮತ್ತು ಹಿಂದೂಸ್ಥಾನಿ ಸಂಗೀತಗಳನ್ನು ಒಟ್ಟಿಗೆ ಪ್ರಸ್ತುತಪಡಿಸಿದ ಉದಾಹರಣೆಗಳಿವೆ, ಭಾರತೀಯ ಮತ್ತು ಪಾಶ್ಚಾತ್ಯ ಸಂಗೀತ, ನೃತ್ಯಗಳನ್ನು ಅಳವಡಿಸಿ ಪ್ರಸ್ತುತಪಡಿಸಿದ ಪ್ರಯೋಗಗಳಿವೆ, ಯಕ್ಷಗಾನಕ್ಕೆ ಅನೇಕ ನೃತ್ಯಪ್ರಕಾರಗಳನ್ನು ಅಳವಡಿಸಿದ ಪ್ರಸಂಗಗಳಿವೆ. ಹೀಗೆ ಹಲವು ಕಲಾಪ್ರಕಾರಗಳಲ್ಲಿರುವ ಸೂಕ್ಷ್ಮ ಸಂಗತಿಗಳನ್ನು ಒಂದರಜತೆ ಒಂದು ಬೆಸೆದುಕೊಂಡು ಸಂಯೋಗಗೊಳಿಸಿ ಹೊಸ ಪ್ರಯೋಗಗಳನ್ನುಮಾಡುತ್ತಿರುವ ಹಲವು ಕಲಾವಿದರು ನಮ್ಮಜತೆಗಿದ್ದಾರೆ ಇಂಥ ಸುಮಾರು 75 ವಿಶ್ವವಿಖ್ಯಾತ ಕಲಾವಿದರು ಪಾಲ್ಗೊಳ್ಳಲಿರುವ 16 ವೈವಿಧ್ಯಮಯ ಕಾರ್ಯಕ್ರಮಗಳು ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಹೊಸದಾಗಿ ನವೀಕರಿಸಲಾದ ಸುಸಜ್ಜಿತ ‘ಖಿಂಚಾ ಸಭಾಂಗಣ’ದಲ್ಲಿ ಜನವರಿ 20ರಿಂದ 24ರವರೆವಿಗೆ ಆಯೋಜಿಸಲಿದ್ದು ಪ್ರತಿದಿನ ಸಂಜೆ 6.00 ರಿಂದ 8.00ರವರೆಗೆ ನಡೆಯಲಿದೆ. ಈ ಪ್ರದರ್ಶನಕ್ಕೆ ಮುಕ್ತ ಪ್ರವೇಶವಿದೆ.
ದಿನಾಂಕ 20ರಂದು ಸಂಜೆ 4 ಗಂಟೆಗೆ ಜೈಪುರದ ಶ್ರೀ ರಾಘವೇಂದ್ರ ಮತ್ತು ತಂಡದವರಿಂದ ಈಚೆಗೆ ಮರೆಯಾಗುತ್ತಿರುವ ಬ್ಯಾಗ್ ಪೈಪರ್ ಸಂಗೀತ ಕಾರ್ಯಕ್ರಮ. 5 ಗಂಟೆಗೆ ಇನ್ಫೋಸಿಸ್ ಪ್ರತಿಷ್ಠಾನದ ಎಕ್ಸಿಕ್ಯೂಟೀವ್ ವೈಸ್ ಪ್ರೆಸಿಡೆಂಟ್ ಶ್ರೀ ಸುನೀಲ್ ಕುಮಾರ್ ಧಾರೇಶ್ವರ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ನಿರ್ದೇಶಕಿ ಶ್ರೀಮತಿ ಶ್ರುತಿ ಖುರಾನ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಲೇಖಕರೂ ಮತ್ತು ಖ್ಯಾತ ಅರ್ಥಿಕ ವಿಶ್ಲೇಷಕರಾದ ಡಾ. ಪದಮ್ ಖಿಂಚ ಅವರು ವಿಶೇಷ ಅತಿಥಿಗಳಾಗಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಭಾರತೀಯ ವಿದ್ಯಾಭವನದ ಅಧ್ಯಕ್ಷರೂ, ಹಿರಿಯ ನ್ಯಾಯವಾದಿಗಳೂ ಆದ ಶ್ರೀ ಕೆ. ಜಿ. ರಾಘವನ್ ಅವರು ವಹಿಸುವರು.
ಆನಂತರ 6 ಗಂಟೆಗೆ ‘ವಾದ್ಯವೈಭವ’ ಕಾರ್ಯಕ್ರಮದಲ್ಲಿ ವಿದ್ವಾನ್ ಶ್ರೀಧರ್ ಸಾಗರ್ ಮತ್ತು ತಂಡ - ಸ್ಯಾಕ್ಸೋಫೋನ್ ಕಾರ್ಯಕ್ರಮವನ್ನು ನಡೆಸಿಕೊಡುವರು. 7 ಗಂಟೆಗೆ ‘ಮೋಡಿ ಮಾಡುವ ಓಡಿಸ್ಸಿ ಯಕ್ಷಗಾನ’ ಕಾರ್ಯಕ್ರಮವನ್ನು ಗುರು ಮಧುಲಿಯಾ ಮಹಾಪಾತ್ರ, ಸಹನಾ ಆರ್. ಮಯ್ಯ, ಗುರು ಕೃಷ್ಣಮೂರ್ತಿ ತುಂಗಾ ಮತ್ತು ಶ್ರೀಮತಿ ಚಿತ್ಕಲಾ ಕೆ. ತುಂಗಾ ಅವರು ನಡೆಸಿಕೊಡುವರು.
2024 ಜ. 21 ಭಾನುವಾರದಂದು ಸಂಜೆ 6 ಕ್ಕೆ ಪ್ರವೀಣ್ ಡಿ. ರಾವ್ ಅವರ ತಂಡ ‘ಚಕ್ರಫೋನಿಕ್ಸ್ ಟ್ರಿಯೋ’ ಎಂಬ ಕಾರ್ಯಕ್ರಮವನ್ನು ನಡೆಸಿಕೊಡುವರು. ಸಂಜೆ 7 ಕ್ಕೆ ‘ಫಾಲಿಂಫ್ಸೆಟ್ ಅಂಡ್ ಸಂಯೋಗ್’ ನೃತ್ಯ ಕಾರ್ಯಕ್ರಮವನ್ನು ಗುರು ಮಧು ನಟರಾಜ್ ತಂದ ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ಅನನ್ಯದ ಶ್ರೀ ಆರ್. ವಿ. ರಾಘವೇಂದ್ರ, ಪ್ರಜಾವಾಣಿಯ ಶ್ರೀ ರವೀಂದ್ರ ಭಟ್, ವಿಜಯ ಕರ್ನಾಟಕದ ಶ್ರೀ ಸುದರ್ಶನ ಚನ್ನಂಗಿಹಳ್ಳಿ ಮತ್ತು ಡೆಕ್ಕನ್ ಹೆರಾಲ್ಡ್ನ ಶ್ರೀ ಎಸ್. ಆರ್. ರಾಮಕೃಷ್ಣ ಅವರು ಮುಖ್ಯ ಅತಿಥಿಗಳಗಿ ಭಾಗವಹಿಸುವರು.
ಜ. 22 ಸೋಮವಾರದಂದು ಸಂಜೆ 6ಕ್ಕೆ ಶ್ರೀ ರಾಘವೇಂದ್ರ ಹೆಗಡೆ ಮತ್ತು ವಿದ್ವಾನ್ ಮೌನ ರಾಮಚಂದ್ರ ಆವರ ಹಾಡುಗಾರಿಕೆಯ `ಮರಳಿನ ಮಾಧುರ್ಯ’ ಕಾರ್ಯಕ್ರಮವಿರುವುದು. ಸಂಜೆ 7ಕ್ಕೆ ನವರಾತ್ರಿ ನೃತ್ಯ ಕಾರ್ಯಕ್ರಮವನ್ನು ವಿದುಷಿ ಸಂಧ್ಯಾ ಉಡುಪ ಮತ್ತು ತಂಡ ನಡೆಸಿಕೊಡುವುದು. ಮುಖ್ಯ ಅತಿಥಿಗಳಾಗಿ ಬೆಂಗಳೂರು ಪ್ರೆಸ್‌ನ ಎಂ. ಖ. ಶ್ರೀ ಎಚ್. ಕೆ. ಅನಂತ್, ದಿ ಹಿಂದೂ ಪತ್ರಿಕೆಯ ಶ್ರೀಮತಿ ಎಸ್. ಬಾಗೇಶ್ರೀ, ವಿಜಯವಾಣಿ ಪತ್ರಿಕೆಯ ಶ್ರೀ ಕೆ. ಎನ್ ಚನ್ನೇಗೌಡ ಅವರು ಭಾಗವಹಿಸುವರು.
ಜ. 23 ಮಂಗಳವಾರದ ಕಾರ್ಯಕ್ರಮದಲ್ಲಿ ವಿದ್ವಾನ್ ಅಮಿತ್ ನಾಡಿಗ್ ಅವರು ಕೊಳಲು ವಾದನದ ವಿಶೇಷ ಕಾರ್ಯಕ್ರಮವನ್ನು ನಡೆಸಿಕೊಡುವರು. ಸಂಜೆ 7ಕ್ಕೆ ‘ಸಖಿ’ (ನಮ್ಮೊಳಗಿನ ಸಖಿತ್ವದ ಹುಡುಕಾಟ) ನೃತ್ಯಕಾರ್ಯಕ್ರಮವನ್ನು ಗುರು ವಿದುಷಿ ಚಿತ್ರಾ ಅರವಿಂದ್ ಮತ್ತು ತಂಡ ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ರೋ. ಶ್ರೀ ಎನ್ . ಬಾಲಕೃಷ್ಣ, ಕನ್ನಡಪ್ರಭ ಪತ್ರಿಕೆಯ ಶ್ರೀ ಜೋಗಿ, ಸಂಯುಕ್ತ ಕರ್ನಾಟಕ ಪತ್ರಿಕೆಯ ಶ್ರೀ ಹುಣಸವಾಡಿ ರಾಜನ್ ಅವರು ಭಾಗವಹಿಸುವರು.
ಜ. 24 ಬುಧವಾರದಂದು ವಿದ್ವಾನ್ ರವೀಂದ್ರ ಕಾಟೋಟಿ ಮತ್ತು ತಂಡ ‘ಧಾತ್ರಿ’ - ಹಿಂದೂಸ್ತಾನಿ ಫ್ಯೂಷನ್ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುವರು. ಸಂಜೆ 7ಕ್ಕೆ ‘ವಿ ಮೂವ್ ಥಿಯೇಟರ್’ ತಂಡ ಅಭಿಷೇಕ್ ಅಯ್ಯಂಗಾರ್ ಅವರು ಬರೆದು ನಿರ್ದೇಶಿಸಿದ ‘ಬೈ ಟು ಕಾಫಿ’ ನಾಟಕವನ್ನು ಪ್ರಸ್ತುತಪಡಿಸುವುದು. ಮುಖ್ಯ ಅತಿಥಿಗಳಾಗಿ ಇನ್ಫೋಸಿಸ್ ಫೌಂಡೇಷನ್‌ನ ಮ್ಯಾನೇಜರ್ ಶ್ರೀ ಪ್ರಶಾಂತ ಹೆಗಡೆ, ಟೈಂಮ್ಸ್ ಆಫ್ ಇಂಡಿಯಾ ಪತ್ರಿಕೆಯ ಶ್ರೀ ಸಿ. ಎಸ್. ಚರಣ್ ಮತ್ತು ದಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಶ್ರೀಮತಿ ಅಶ್ವಿನಿ ಎಂ. ಶ್ರೀಪಾದ್ ಅವರು ಅತಿಥಿಗಳಾಗಿ ಭಾಗವಹಿಸುವರು.
ಜ. 25 ಗುರುವಾರದಂದು ವಿಸ್ವಾನ್ ಕೆ. ಜಿ ದಿಲೀಪ್ ಅವರು ‘ಲಕ್ಷ್ಯಾ ಕ್ವಾರ್ಟೇಟ್’ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡುವರು. 7ಕ್ಕೆ ‘ಸಂಯಾನ’ ಜಯದೇವನ ಗೀತಗೋವಿಂದದ ಕೂಚುಪುಡಿ, ಓಡೆಸ್ಸಿ ಭರತನಾಟ್ಯದ ಅಷ್ಟಪದಿ ನೃತ್ಯ ಕಾರ್ಯಕ್ರಮವನ್ನು ವಿದುಷಿ ಶ್ರೀ ವಿದ್ಯಾ ಅಂಗಾರ ಮತ್ತು ತಂಡ ನಡೆಸಿಕೊಡುವುದು. ಅತಿಥಿಗಳಾಗಿ ಸಮಾಜಸೇವಾ ಧುರೀಣ ಶ್ರೀ ಘನಶ್ಯಾಮ್ ಅಗರ್‌ವಾಲ್ ಮತ್ತು ವಿಶ್ವವಾಣಿ ಪತ್ರಿಕೆಯ ಶ್ರೀ ವಿಶ್ವೇಶ್ವರ ಭಟ್ ಅವರು ಭಾಗವಹಿಸುವರು.
ಜ. 26 ಶುಕ್ರವಾರದಂದು ಸಮಾರೋಪ ಸಮಾರಂಭದಲ್ಲಿ ಶ್ರೀ ಪಂಡಿತ್ ಪ್ರವೀಣ್ ಡಿ. ರಾವ್ ಅವರು ವಿಶೇಷ ಉಪನ್ಯಾಸ ನೀಡಲಿದ್ದು, ವಿದ್ಯಾಭವನದ ಉಪಾಧ್ಯಕ್ಷರೂ ಯುನಿಸ್ಕೋದ ಮಾಜಿ ರಾಯಭಾರಿಗಳೂ ಆದ ಶ್ರೀ ಚಿರಂಜೀವಿ ಸಿಂಗ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಂಜೆ 7ಕ್ಕೆ ಪ್ರವೀಣ್ ಗೋಡ್ಕಿಂಡಿ ಅವರು ‘ರಾಗ ರಂಗ್’ ಕಾರ್ಯಕ್ರಮವನ್ನು ನಡೆಸಿಕೊಡುವರು.
ಏಳೂ ದಿನಗಳ ಕಾಲ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ವ್ಯವಸ್ಥೆ ಮಾಡಿದೆ. ವಿವರಗಳಿಗೆ ನಾಗಲಕ್ಷ್ಮೀ ಕೆ. ರಾವ್ ಜಂತಿ ನಿರ್ದೇಶಕರು ಇವರನ್ನು ಸಂಪರ್ಕಿಸಬಹುದು ಎಂದು ಭಾರತೀಯ ವಿದ್ಯಾಭವನದ ನಿರ್ದೇಶಕ ಎಚ್.ಎನ್. ಸುರೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸಾಹಿತ್ಯ ಅಕಾಡೆಮಿ ವತಿಯಿಂದ ʻಗೌರವ ಪ್ರಶಸ್ತಿ 2024', ʻಸಾಹ...
ಬೆಂಗಳೂರು ಸಾಹಿತ್ಯ ಉತ್ಸವ: ಎರಡು ದಿನ, 108 ಕಾರ್ಯಕ್ರಮಗಳು ಬೆಂಗಳೂರು: ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿ...
ಬಾಗಲಕೋಟೆ : ಸಮಕಾಲೀನ ಸ್ಪಂದನೆಯಿಂದ ಸಾಹಿತ್ಯದ ಜೀವಂತಿಕೆ ಸಾಧ್ಯ. ಎಲ್ಲವನ್ನೂ ಸರಕಾಗಿ ಕಾಣುವ ಮಾರುಕಟ್ಟೆಯ ಗುಣ ಮತ್ತು ...
©2025 Book Brahma Private Limited.