Date: 18-11-2025
Location: ಕೊಟ್ಟಿಗೆಹಾರ
ಚಿಕ್ಕಮಗಳೂರು: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಿಂದ 'ತೇಜಸ್ವಿಯವರಿಗೊಂದು ಪತ್ರ' ಕೈಬರಹ ಸ್ಪರ್ಧೆಯನ್ನ ಆಯೋಜಿಸಲಾಗಿದೆ.
ತೇಜಸ್ವಿ ಅವರ ಪ್ರಕೃತಿ ಪ್ರೀತಿ, ಸಾಹಿತ್ಯದ ಆಳ ಮತ್ತು ಸಾಧಾರಣ ಜೀವನದ ಸೌಂದರ್ಯದಿಂದ ಪ್ರೇರಿತವಾಗಿ, ನಿಮ್ಮ ಹೃದಯದ ಮಾತುಗಳನ್ನು ಅಕ್ಷರಗಳಲ್ಲಿ ಮೂಡಿಸಿ —ತೇಜಸ್ವಿ ಅವರಿಗೊಂದು ಪತ್ರ ಬರೆಯಿರಿ!
ವಿಶೇಷ ಸೂಚನೆ: ಈ ಸ್ಪರ್ಧೆ 18 ವರ್ಷದ ಒಳಗಿನ ಮಕ್ಕಳಿಗೆ ಮಾತ್ರ. ಬಾಲಮಂಡಲದಿಂದ ಯುವ ಮನಸ್ಸುಗಳವರೆಗೆ ಕನ್ನಡದ ಸೌಂದರ್ಯವನ್ನು ಕೈಬರಹದ ಮೂಲಕ ಅಭಿವ್ಯಕ್ತಗೊಳಿಸಲು
ಇದು ಒಂದು ಅಪೂರ್ವ ಅವಕಾಶ!
ನಿಮ್ಮ ಪತ್ರವನ್ನ ನಮಗೆ ತಲುಪಿಸುವ ಕೊನೆಯ ದಿನ 20.11.2025 ಆಗಿದ್ದು, ವಿಳಾಸ: ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ, ಕೊಟ್ಟಿಗೆಹಾರ 577113 ಕ್ಕೆ ಕಳುಹಿಸಿ.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9663098873 ಅಥವಾ 9449309067 ಅನ್ನು ಸಂಪರ್ಕಿಸಿ.
ಸ್ಪರ್ಧೆಯ ಬಹುಮಾನಗಳ ವಿವರ: ಪ್ರಥಮ ಬಹುಮಾನದ ಮೊತ್ತ 5000, ದ್ವಿತೀಯ ಬಹುಮಾನದ ಮೊತ್ತ 3000, ತೃತೀಯ ಬಹುಮಾನದ ಮೊತ್ತ 2000 ಆಗಿರುತ್ತದೆ.
ಮತ್ತಷ್ಟು ಮಾಹಿತಿಯನ್ನು ತಿಳಿಯಲು @kppttrust ಗೆ ಭೇಟಿ ನೀಡಿ.
ಬೆಂಗಳೂರು: ಮನುಷ್ಯ ಸಂಸ್ಕೃತಿಯ ಬಹುದೊಡ್ಡ ಕೊಡುಗೆಯಾಗಿ ವಿಭಿನ್ನ ಭಾಷೆಯ ಬರವಣಿಗೆ ಸಮಾಜದ ಪ್ರತಿಬಿಂಬವಾಗಿವೆ. ಓರ್ವ ಉತ್...
ಬೆಂಗಳೂರು ಸಾಹಿತ್ಯ ಉತ್ಸವದ 14ನೇ ಆವೃತ್ತಿಯು ಡಿ.6 ಮತ್ತು 7ರಂದು ನಗರದ ಸ್ವಾತಂತ್ಯ್ರ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗ...
ಬೆಂಗಳೂರು: ಅಂಕಿತ ಪುಸ್ತಕ ಪ್ರಕಾಶನದ ವತಿಯಿಂದ ಲೇಖಕ ಸು. ರುದ್ರಮೂರ್ತಿ ಶಾಸ್ತ್ರಿ ಅವರ 'ಜನ ಭಾರತ', ಉಷಾ ನರಸ...
©2025 Book Brahma Private Limited.