ಕನ್ನಡ ಆರಯ್ಪು 2023: ಆಯ್ಕೆ

Date: 06-04-2024

Location: ಬೆಂಗಳೂರು


ಮಸ್ಕಿ: ಬಂಡಾರ ಪ್ರಕಾಶನ ಮಸ್ಕಿಯಿಂದ ಪ್ರತಿ ವರುಶ ಪಿಎಚ್.ಡಿ ಪ್ರಬಂಧಗಳನ್ನು ಆಹ್ವಾನಿಸಿ, ಒಳ್ಳೆಯ ಪ್ರಬಂದವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುತ್ತದೆ.

'ಕನ್ನಡ ಆರಯ್ಪು' ಎನ್ನುವ ಸರಣಿಯಲ್ಲಿ ಇವನ್ನು ಪ್ರಕಟ ಮಾಡುತ್ತಿದೆ. ಇದುವರೆಗೆ ಎಂಟು ಪುಸ್ತಕಗಳನ್ನು ಈ ಸರಣಿಯಲ್ಲಿ ಪ್ರಕಟಿಸಿದಿವಿ. ಈ ವರುಶ ಒಂದು ಪ್ರಬಂದ 'ಕನ್ನಡ ಆರಯ್ಪು' ಸರಣಿಗೆ ಆಯ್ಕೆಯಾಗಿದೆ. ಈ ಪ್ರಬಂದವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸುವುದಲ್ಲದೆ ಈ ವರುಶದಿಂದ ಆಯ್ಕೆಯಾದ ಸಂಶೋದಕರಿಗೆ 5,000 ರೂಗಳ ಗವುರದನ ಕೂಡ ಕೊಡುತ್ತೇವೆ.

ಇದರೊಂದಿಗೆ, ಕನ್ನಡ ಆರಯ್ಪು ಸರಣಯಲ್ಲಿ ಅಲ್ಲದೆ, ಸ್ವತಂತ್ರವಾಗಿ ಪ್ರಕಾಶನದಿಂದ ಪ್ರಕಟಿಸಲು ಇನ್ನೂ ಮೂರು ಪ್ರಬಂದಗಳನ್ನು ಪರಿಗಣಿಸಿದೆ. ಈ ಯೋಜನೆಯ ಮುಕ್ಯ ಉದ್ದೇಶ ಯುವ ಸಂಶೋದಕರನ್ನು ಮತ್ತು ಕನ್ನಡ-ಕರ‍್ನಾಟಕಗಳಿಗೆ ಸಂಬಂದಿಸಿದ ಸಂಶೋದನೆಗಳನ್ನು ಪ್ರೋತ್ಸಾಹಿಸುವುದಾಗಿದೆ.

2023ನೇ ಸಾಲಿನ ಕನ್ನಡ ಆರಯ್ಪು ಸರಣಿಗೆ ಆಯ್ಕೆಯಾದ ಪಿಎಚ್.ಡಿ. ಮಹಾಪ್ರಬಂಧ ಕನ್ನಡ ವಿಶ್ವವಿದ್ಯಾಲಯದ ಪೂಜಾರು ದಿವಾಕರ ನಾರಾಯಣ ‘ಅವಧೂತ ಪರಂಪರೆ ಮತ್ತು ಜೀವನ ದರ್ಶನ’ ಆಯ್ಕೆಯಾದ ಮಹಾಪ್ರಬಂದವನ್ನು ಪ್ರಕಾಶನದ ‘ಕನ್ನಡ ಆರಯ್ಪು’ ಪುಸ್ತಕ ರೂಪದಲ್ಲಿ ತರಲಾಗುವುದು.

ಸ್ವತಂತ್ರ ಪ್ರಕಟಣೆಗೆ ಪರಿಗಣಿತವಾದ ಮಹಾಪ್ರಬಂಧಗಳು:

1. ನೆಲ್ಮದ ಅಸ್ಮಿತೆ ಮತ್ತು ಅಂತಸತ್ವ(ಚಂದ್ರಶೇಖರ ಕಂಬಾರದ ಕಾದಂಬರಿಗಳ ದೇಸಿಯತೆಯ ಅಧ್ಯಯನ), ಸಂದೇಶ್ ಎ.ಎಸ್. ತುಮಕೂರು ವಿಶ್ವವಿದ್ಯಾಲಯ, ತುಮಕೂರು.
2. ಕನ್ನಡ ಕಾದಂಬರಿಗಳು ಮತ್ತು ವೈಧವ್ಯದ ಪ್ರಶ್ನೆ, ನಾಯಕರ ಜಯಮ್ಮ, ಕನ್ನಡ ವಿಶ್ವವಿದ್ಯಾಲಯದ, ಹಂಪಿ
3. ಲಿಯೋ ಟಾಲ್ ಸ್ಟಾಯ್ ಸಾಹಿತ್ಯದ ನೆಲೆಗಳು, ಪ್ರದೀಪ ಆರ್.ಎನ್. ಕರ್‍ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿ

MORE NEWS

ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ

17-05-2024 ಬೆಂಗಳೂರು

ಬೆಂಗಳೂರು: ದಾಸರಾಯರ ಕೃತಿ ಸಂಪದಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಗುವ ಎಲ್ಲ ಅರ್ಹತೆಗಳಿವೆ ಎಂದು ಹರಿದಾಸ ಸಂಪದ ಸಂಸ್ಥ...

ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳ ಆಹ್ವಾನ

17-05-2024 ಬೆಂಗಳೂರು

2023ನೇ ಸಾಲಿನ ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳನ್ನು ಆಹ್ವಾನಿಸಲಾಗಿದೆ. &nb...

ಲೇಖಕಿಯರ ಸಂಘದಿಂದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

16-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ...