ಕನ್ನಡ ಸಾಹಿತ್ಯ ಅಗೆದಷ್ಟೂ ಆಳವಾಗುತ್ತಲೇ ಹೋಗುತ್ತದೆ; ಕಮಲ ಹಂಪನಾ


‘ಕನ್ನಡದ ಕಾಯಕಕ್ಕೆ ಕೈಹಾಕಿ ಕೈಲಾದಷ್ಟು ಸಾಹಿತ್ಯ ಕೃಷಿ ಮೊಗೆದು ಸಾರ್ಥಕತೆಯನ್ನು ಪಡೆದಿದ್ದಾರೆ. ಸಾಹಿತ್ಯ ಕೃಷಿಯೇ, ನನ್ನ ಸಾಧನೆ ಎಂದು ಅರಿತು ಸಾಹಿತ್ಯದ ಮುಖಾಂತರ ಕನ್ನಡಿಗರಿಗೆ ಉಣಬಡಿಸಿರುವುದು ಅವರು ರಚಿಸಿರುವ ಕರ್ನಾಟಕದ ಜ್ಞಾನ ಸಂಪದ ಪುಸ್ತಕವೇ ಸಾಕ್ಷಿ’ ಎನ್ನುತ್ತಾರೆ ನಾಡೋಜ ಡಾ|| ಕಮಲ ಹಂಪನಾ. ಅವರು ಡಾ. ಬಿ.ವಿ. ಮುನಿರಾಜು ಅವರ ‘ಕರ್ನಾಟಕ ಜ್ಞಾನ ಸಂಪದ’ ಕೃತಿ ಕುರಿತು ಬರೆದ ಆಶಯ ನುಡಿ ನಿಮ್ಮ ಓದಿಗಾಗಿ.

ಇವರ ಸಾಮಾನ್ಯ ಜ್ಞಾನ ಬಹಳ ವಿಶೇಷವಾಗಿದೆ ಎಂಬುದಕ್ಕೆ ಈ ಪುಸ್ತಕವೇ ಸಾಕ್ಷಿ ಹೇಳುತ್ತದೆ. ನಮ್ಮ ರಾಜ್ಯದ ಭೌಗೋಳಿಕ ವಿವರಗಳನ್ನು ನೀಡುತ್ತಾ ನಾಡನ್ನು ಕೊಂಡಾಡುವ ನಾಡಿನ ಆಂತರ್ಯ ಸೌಂದರ್ಯ ಬಗೆದು ನೋಡಿದರೆ ಇನ್ನಷ್ಟು ಮೌಲಿಕವಾಗುತ್ತೆ. ಕನ್ನಡ ಸಾಹಿತ್ಯ ಅಗೆದಷ್ಟೂ ಆಳವಾಗುತ್ತಲೇ ಹೋಗುತ್ತದೆ. ಲಕ್ಷಾಂತರ ಕವಿಗಳು, ಸಾಹಿತಿಗಳು, ಕನ್ನಡದ ದಿಗ್ಗಜರು, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಳಿಲು ಸೇವೆ ಮಾಡುತ್ತಾ ಓದುಗರೆದೆಯಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ಅಂಥವರಲ್ಲಿ ಡಾ. ಬಿ.ವಿ. ಮುನಿರಾಜು ರವರೂ ಒಬ್ಬರು.

ಸಾಹಿತ್ಯದ ಕ್ಷೀರ ಸಾಗರದಲ್ಲಿ ತಾವರೆಯ ಮೊಗ್ಗಾಗಿ ಅರಳುತ್ತಾ ನಲಿಯುತ್ತಿರುವ ಇವರ ಬರಹಗಳನ್ನು ಓದಿ ಪ್ರೋತ್ಸಾಹಿಸುತ್ತಿರುವ ಎಲ್ಲರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ಬರಹಗಾರರಾಗಿ ಸಾಹಿತ್ಯಲೋಕಕ್ಕೆ ಕಾಲಿಟ್ಟು ಕನ್ನಡಿಗರ ಮನಸ್ಸು ಗೆದ್ದು "ಕರ್ನಾಟಕದ ಜ್ಞಾನ ಸಂಪದ" ಪುಸ್ತಕದ ಮುಖಾಂತರ ನಾಡಿನಾದ್ಯಂತ ಹೆಸರು ಗಳಿಸಿರುವ ಡಾ. ಬಿ.ವಿ. ಮುನಿರಾಜುರವರಿಗೆ ಪರಸ್ಪರ ಸ್ನೇಹ ಪ್ರೀತಿ ಸೌಹಾರ್ದ ಮತ್ತು ಸೇವಾ ಮನೋಭಾವಗಳು ಅತಿ ಮುಖ್ಯ.

''ಪರೇಷಾಂ ಉದಯಂ ದೃಷ್ಟಾಯೇ ಅಭಿನಂದತಿ, ತೇ ಭಾಗವತೋತ್ತಮಾಃ'' ಉಕ್ತಿಯಂತೆ ಪರರ ಅಭಿವೃದ್ಧಿ ಕುರಿತು ಸಂತೋಷ ಪಡುವವನು ಪರಮಾತ್ಮನಿಗೆ ಪ್ರಿಯವಾಗುತ್ತಾನೆ ಎಂದರ್ಥ. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ಮತ್ತೆಲ್ಲೋ ಉದ್ಯೋಗ ಹರಸಿ ಬಂದು ಎಲ್ಲರ ಪ್ರೀತಿಗಳಿಸಿ ತಂದೆ-ತಾಯಿಗಳ ಆಶೀರ್ವಾದದೊಂದಿಗೆ ಗುರುಹಿರಿಯರ ಸಹಕಾರ ದೊಂದಿಗೆ ಈ ಕೃತಿಯನ್ನು ಸಾಹಿತ್ಯಲೋಕಕ್ಕೆ ಪರಿಚಯಿಸುತ್ತಿರುವುದು ಸಂತಸ ತರುವ ವಿಷಯ. ಈ ಪುಸ್ತಕ ಕನ್ನಡಿಗರ ಮನಸ್ಸು ಗೆದ್ದಿದೆ ಎಂದರೆ ತಪ್ಪಾಗಲಾರದು. ಸಾಮಾಜಿಕ ಜಾಲತಾಣಗಳ ಮೂಲಕ ಪರಿಚಯವಾದ ಇವರು ಕ್ರಿಯಾಶೀಲ ವ್ಯಕ್ತಿ. ಸ್ನೇಹಮಯಿ ಕಥೆ, ಕವನ, ಲಾವಣಿ, ಜನಪದ ಭಕ್ತಿಗೀತೆ ರಚಿಸುವುದಷ್ಟೇ ಅಲ್ಲದೆ ಕವಿಗೋಷ್ಠಿಗಳ ಸಂಚಾಲಕರಾಗಿ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ.

ಈ ನಿಟ್ಟಿನಲ್ಲಿ ಡಾ. ಬಿ.ವಿ. ಮುನಿರಾಜುರವರನ್ನು ಹಾರ್ದಿಕವಾಗಿ ಅಭಿನಂದಿಸುತ್ತೇನೆ. ಇವರ ಸಂಪಾದಿತ "ಕರ್ನಾಟಕದ ಜ್ಞಾನ ಸಂಪದ' ಪುಸ್ತಕವು ರಾಜ್ಯದ ಎಲ್ಲಾ ಓದುಗರಿಗೆ ತಲುಪಿರುವುದಕ್ಕೆ ಲೇಖಕರ ಶ್ರಮ ಸಾರ್ಥಕ ಎಂದು ನಾನು ನಂಬಿದ್ದೇನೆ. ಆಚಾರ - ವಿಚಾರ - ಸಾಹಿತ್ಯ - ಸಂಸ್ಕೃತಿ - ಭೌಗೋಳಿಕ - ಪರಂಪರೆ ಗಳನ್ನು ತಮ್ಮ ಕವಿತೆಗಳ ಮುಖಾಂತರ ವ್ಯಕ್ತಪಡಿಸಿ ಅನುಭವಾಮೃತದ ರಸಗವಳವನ್ನು ಬಿಚ್ಚಿಟ್ಟಿದ್ದಾರೆ. ಪುಸ್ತಕದ ರೂಪದಲ್ಲಿ ಓದಿದಾಗ ಆಗುವ ಅನುಭೂತಿಯೇ ಬೇರೆ ಆದಾಗ್ಯೂ ಪುಸ್ತಕ ಮುದ್ರಣಕ್ಕೆ ಮನಸ್ಸು ಮಾಡುವವರನ್ನು ಮೆಚ್ಚಲೇಬೇಕು. ಕನ್ನಡದ ಕಾಯಕಕ್ಕೆ ಕೈಹಾಕಿ ಕೈಲಾದಷ್ಟು ಸಾಹಿತ್ಯ ಕೃಷಿ ಮೊಗೆದು ಸಾರ್ಥಕತೆ ಯನ್ನು ಪಡೆದಿದ್ದಾರೆ. ಸಾಹಿತ್ಯ ಕೃಷಿಯೇ, ನನ್ನ ಸಾಧನೆ ಎಂದು ಅರಿತು ಸಾಹಿತ್ಯದ ಮುಖಾಂತರ ಕನ್ನಡಿಗರಿಗೆ ಉಣಬಡಿಸಿರುವುದು ಅವರು ರಚಿಸಿರುವ ಕರ್ನಾಟಕದ ಜ್ಞಾನ ಸಂಪದ ಪುಸ್ತಕವೇ ಸಾಕ್ಷಿ. ಅಕ್ಷರ ಕಲಿತ ಪ್ರತಿಯೊಬ್ಬರೂ ಈ ಪುಸ್ತಕವನ್ನು ಓದಲೇಬೇಕು. ಓದದೆ ಹೋದರೆ ನಮಗೆ ನಾವೇ ಅನ್ಯಾಯ ಮಾಡಿಕೊಂಡಂತಾಗುತ್ತದೆ. "ಕರ್ನಾಟಕ ಸಂಭ್ರಮ 50ರ ಈ ಸುಸಂದರ್ಭ''ದಲ್ಲಿ ಅವರಿಂದ ಇನ್ನು ಹೆಚ್ಚು ಕೃತಿಗಳು ಮೂಡಿ ಬರಲಿ. ಸಾಹಿತ್ಯ ಕ್ಷೇತ್ರದಲ್ಲಿ ಮೇರುಪರ್ವತ ಏರಲಿ. ಸಾಹಿತ್ಯದ ಸಾರಸ್ವತ ಲೋಕದಲ್ಲಿ ಸದಾ ಅಜರಾಮರರಾಗಲಿ. ಸಕಲವೂ ಶುಭವಾಗಲಿ ಎಂಬುದೇ ನನ್ನ ಹಾರೈಕೆ.

- ನಾಡೋಜ ಡಾ|| ಕಮಲ ಹಂಪನಾ

MORE FEATURES

ವಾರದ ಲೇಖಕ ವಿಶೇಷದಲ್ಲಿ ಖ್ಯಾತ ಕಾದಂಬರಿಕಾರ ಭಾರತೀಸುತ

19-05-2024 ಬೆಂಗಳೂರು

ಬುಕ್ ಬ್ರಹ್ಮ ವಾರದ ಲೇಖಕ ವಿಶೇಷದಲ್ಲಿ ಓದಿನೊಂದಿಗೆ ಸ್ವಾತಂತ್ರ್ಯದ ಕಿಚ್ಚು ಹತ್ತಿಸಿಕೊಂಡು ಸೆರೆ ವಾಸ ಅನುಭವಿಸಿದ ಕನ್ನ...

ಅಕಾಲದಲ್ಲೊಂದು ಸಕಾಲಿಕ ಪುಸ್ತಕ ‘ಗಾಂಧೀಜಿಯ ಹಂತಕ: ಗೋಡ್ಸೆ ಎಂಬ ವ್ಯಕ್ತಿ ಮತ್ತು ಆತನ ದೃಷ್ಟಿಯ ಭಾರತ'

19-05-2024 ಬೆಂಗಳೂರು

ಗಾಂಧಿ ಹತ್ಯೆ – ಆ ಕಾಲದ ರಾಜಕೀಯದಲ್ಲಿ ಸಾವರ್ಕರ್ ಪಾತ್ರ – ಆರೆಸ್ಸೆಸ್ ಮತ್ತು ಹಿಂದೂ ಮಹಾಸಭಾ ಪಾತ್ರ &nd...

ತಲೆ ಮೇಲೆ ಸುರಿದ ನೀರು ಕಾಲಿಗೆ ಬಂದೇ ಬರುತ್ತದೆ: ವಿ. ಗಣೇಶ್

19-05-2024 ಬೆಂಗಳೂರು

`ಇಂದು ಜಗತ್ತಿನಾದ್ಯಂತ ಎದ್ದುಕಾಣುತ್ತಿರುವ ಹಿರಿಯರ, ಅದರಲ್ಲೂ ಇಳಿ ವಯಸ್ಸಿನ ತಂದೆ-ತಾಯಿಂದಿರ ನಿರ್ಲಕ್ಷತನ ಕಾದಂಬರಿಯಲ್...