ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಕೊಡುಗೆ ಅನನ್ಯ: ಕೆ. ರಾಘವೇಂದ್ರ ರಾವ್

Date: 30-12-2025

Location: ಶಿರಹಟ್ಟಿ


ಶಿರಹಟ್ಟಿ: "ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ. ಅವರ ಸಾಹಿತ್ಯಿಕ ಸಾಧನೆಯನ್ನು ಕನ್ನಡಿಗರು ಮರೆಯಲು ಅಸಾಧ್ಯ," ಎಂದು ತಹಸೀಲ್ದಾರ್ ಕೆ. ರಾಘವೇಂದ್ರ ರಾವ್ ತಿಳಿಸಿದರು. ಸೋಮವಾರ ತಹಸೀಲ್ದಾರ್ ಕಾರ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕುವೆಂಪು ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

"ಕುವೆಂಪು ಅವರು ಮಕ್ಕಳ ಸಾಹಿತ್ಯದಿಂದ ಹಿಡಿದು 'ಶ್ರೀರಾಮಾಯಣ ದರ್ಶನಂ' ಮಹಾಕಾವ್ಯದವರೆಗೆ ವಿಭಿನ್ನ ಪ್ರಕಾರದ ಸಾಹಿತ್ಯವನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ನಾಡಿನ ಜನತೆ ಕನ್ನಡ ಭಾಷೆ, ನೆಲ ಮತ್ತು ಜಲದ ಬಗ್ಗೆ ಅಪಾರ ಪ್ರೀತಿ ಹೊಂದಿದ್ದು, ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಇಂದಿನ ಸಾಹಿತಿಗಳ ಮೇಲಿದೆ," ಎಂದರು. ಅಲ್ಲದೆ, "ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದಿರುವ ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ ಅವರು ಕನ್ನಡದ ಹೆಸರಾಂತ ಕವಿ, ನಾಟಕಕಾರ, ಸಮಾಜ ಸುಧಾರಕ ಹಾಗೂ ಪ್ರಗತಿಪರ ದಾರ್ಶನಿಕರಾಗಿದ್ದರು," ಎಂದು ಸ್ಮರಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎ. ಬಳಿಗೇರ ಮಾತನಾಡಿ, "ಕುವೆಂಪು ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಕೃತಿ ರಚಿಸಿ ಸಾಹಿತ್ಯ ಸಂಪತ್ತನ್ನು ಸಮೃದ್ಧಗೊಳಿಸಿದ್ದಾರೆ. ಮೌಲ್ಯಯುತವಾದ ತತ್ವ ಸಂದೇಶಗಳನ್ನು ವಿಶ್ವ ಸಾಹಿತ್ಯಕ್ಕೆ ನೀಡುವ ಮೂಲಕ ಅವರು ಇಂದಿಗೂ ಅಮರರಾಗಿದ್ದಾರೆ," ಎಂದರು.

ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಕೆ. ಲಮಾಣಿ ಮಾತನಾಡಿ, "ಕನ್ನಡ ಸಾಹಿತ್ಯಕ್ಕೆ ಆಧುನಿಕತೆಯನ್ನು ತಂದ ಪ್ರವರ್ತಕ ಕುವೆಂಪು. ಅವರು ಪರಿಚಯಿಸಿದ ಕಾವ್ಯದ ಹೊಸ ರೂಪಗಳು ಇಂದಿನ ಅನೇಕ ಬರಹಗಾರರಿಗೆ ಸ್ಫೂರ್ತಿಯಾಗಿವೆ," ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಿರಿಜಾ ಪೂಜಾರ, ಸಂತೋಷ ಅಸ್ಕಿ, ವಿನೋದ ಪಾಟೀಲ ಸೇರಿದಂತೆ ಕಂದಾಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು.

MORE NEWS

ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಇತಿಹಾಸ–ಗಿರಿಜನ ಸಂಸ್ಕೃತಿ ಗ್ರಂಥಗಳಿಗೆ ಭಾರೀ ಬೇಡಿಕೆ

30-12-2025 ರಾಂಚಿ

ರಾಂಚಿಯ ಜಿಲ್ಲಾ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುಸ್ತಕ ಮೇಳವು ಓದುಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿ...

ನಾಗರಿಕತೆಯ ಉತ್ಕೃಷ್ಟ ವಿಕಾಸಕ್ಕೆ ಪುಸ್ತಕಗಳ ಕೊಡುಗೆ ಅನುಪಮ; ಮಾನಸ

30-12-2025 ಚಿಕ್ಕಮಗಳೂರು

ಚಿಕ್ಕಮಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ವತಿಯಿಂದ ಇತ...

ನೈತಿಕ ಬದುಕಿನ ಸಾರ್ಥಕತೆಗೆ ಸಾಹಿತ್ಯ ಪೂರಕ : ಡಾ. ಎಂ. ವೇದಾಂತ್ ಏಳಂಜಿ

30-12-2025 ಚಿತ್ರದುರ್ಗ

ಚಿತ್ರದುರ್ಗ: ಆಶುಕವನಗಳಲ್ಲಿ ತತ್‌ಕ್ಷಣಕ್ಕೆ ಹೊಳೆಯುವ ವಿಚಾರಗಳನ್ನು ಅಭಿವ್ಯಕ್ತಿಸುವ ಕಲೆ ವಿರಳವಾದುದು. ಕವಿ ತಿಪ...