ನೈತಿಕ ಬದುಕಿನ ಸಾರ್ಥಕತೆಗೆ ಸಾಹಿತ್ಯ ಪೂರಕ : ಡಾ. ಎಂ. ವೇದಾಂತ್ ಏಳಂಜಿ

Date: 30-12-2025

Location: ಚಿತ್ರದುರ್ಗ


ಚಿತ್ರದುರ್ಗ: ಆಶುಕವನಗಳಲ್ಲಿ ತತ್‌ಕ್ಷಣಕ್ಕೆ ಹೊಳೆಯುವ ವಿಚಾರಗಳನ್ನು ಅಭಿವ್ಯಕ್ತಿಸುವ ಕಲೆ ವಿರಳವಾದುದು. ಕವಿ ತಿಪ್ಪೇಸ್ವಾಮಿ ಬಿ.ಜಿ. ಅವರು ಅಂತಹ ವಿರಳ ಪ್ರತಿಭೆಯನ್ನು ಹೊಂದಿದ್ದು, ಅವರ ಕಿರುಗವನಗಳು ಗಹನವಾದ ವಿಚಾರಗಳನ್ನು ಒಳಗೊಂಡಿವೆ. ಸಾಹಿತ್ಯವು ನೈತಿಕ ಬದುಕಿನ ಸಾರ್ಥಕತೆಗೆ ಪೂರಕವಾಗಿರುತ್ತದೆ," ಎಂದು ವಿಮರ್ಶಕರು ಹಾಗೂ ಪುಸ್ತಕ ಪ್ರಾಧಿಕಾರದ ಜಿಲ್ಲಾ ಜಾಗೃತಿ ಸಮಿತಿ ಸದಸ್ಯರಾದ ಡಾ. ಎಂ. ವೇದಾಂತ್ ಏಳಂಜಿ ಅಭಿಪ್ರಾಯಪಟ್ಟರು.

ನಗರದ 'ಲಿಟಲ್ ಹೇವನ್' ಸಭಾಂಗಣದಲ್ಲಿ ನಡೆದ ತಿಪ್ಪೇಸ್ವಾಮಿ ಬಿ.ಜಿ. ಅವರ 'ಪತಂಗ' (ಆಶುಕವನ ಸಂಕಲನ) ಮತ್ತು 'ವಿಜ್ಞಾನ ಉತ್ತರ ಸಿರಿ' ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕವಿ ತಿಪ್ಪೇಸ್ವಾಮಿ ಅವರು ಪ್ರೀತಿ, ವಿಜ್ಞಾನ, ಪ್ರಕೃತಿ, ಹಬ್ಬಗಳು, ಶಾಲಾ ಜೀವನ ಹಾಗೂ ಬಾಲ್ಯದಂತಹ ವೈವಿಧ್ಯಮಯ ವಿಷಯಗಳ ಕುರಿತು ಬರೆದಿದ್ದಾರೆ. ಅವರ ಕವನಗಳು ಗಂಭೀರತೆಯ ಜೊತೆಗೆ ಹಾಸ್ಯ ಮತ್ತು ವಿಡಂಬನೆಯನ್ನು ಒಳಗೊಂಡಿದ್ದು, ಮೌಲಿಕ ಅರ್ಥವನ್ನು ಕಲ್ಪಿಸಿವೆ. "ವಿಜ್ಞಾನದಂತಹ ವಿಷಯಗಳಲ್ಲಿ ಪರಿಣತಿ ಹೊಂದಿದ ಶಿಕ್ಷಕರು ಕನ್ನಡದಲ್ಲಿ ಸಾಹಿತ್ಯ ಕೃಷಿ ಮಾಡುವುದರಿಂದ ಕನ್ನಡವನ್ನು 'ಅನ್ನದ ಭಾಷೆ'ಯಾಗಿಸಲು ಸಹಕಾರಿಯಾಗುತ್ತದೆ," ಎಂದು ಡಾ. ವೇದಾಂತ್ ಶ್ಲಾಘಿಸಿದರು.

ಲೇಖಕರು ಪ್ರಾದೇಶಿಕತೆಗೆ ಒತ್ತು ನೀಡಿರುವುದು ಕನ್ನಡಕ್ಕೆ ಹೊಸ ಭರವಸೆಯನ್ನು ನೀಡಿದೆ. ಅವರ 'ವಿಜ್ಞಾನ ಉತ್ತರ ಸಿರಿ' ಪುಸ್ತಕವು ವಿದ್ಯಾರ್ಥಿಗಳಿಗೆ ಮತ್ತು ಹಿರಿಯರಿಗೆ ವಿಜ್ಞಾನವನ್ನು ಸರಳವಾಗಿ ಅರ್ಥೈಸುವಲ್ಲಿ ಉಪಯುಕ್ತವಾಗಿದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕೃತಿಗಳನ್ನು ಲೋಕಾರ್ಪಣೆಗೊಳಿಸಿದ ವಿವೇಕಾನಂದ ಕಲ್ಯಾಣಶೆಟ್ಟಿ ಅವರು ಮಾತನಾಡಿ, "ಲೇಖಕರ ಕವನಗಳು ಅರ್ಥಪೂರ್ಣವಾಗಿದ್ದು, ಭಾಷಾ ಬೆಳವಣಿಗೆಗೆ ಇಂತಹ ಸಾಹಿತಿಗಳ ಕೊಡುಗೆ ಅಗತ್ಯವಾಗಿದೆ. ಕಿರುಗವನಗಳು ಕೇವಲ ಸಾಹಿತ್ಯವಲ್ಲದೆ ನೈತಿಕ ಜೀವನ ನಡೆಸಲು ಪ್ರೇರಣೆಯಾಗುತ್ತವೆ," ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಮಂಜುನಾಥ ವಿ.ಎಸ್., ಮಹಾಂತೇಶ ಎನ್.ಟಿ., ರಮೇಶ್ ಅಯ್ಯನಹಳ್ಳಿ, ಶಿಕ್ಷಣ ಸಂಯೋಜಕ ಮಾರುತಿ ಭಂಡಾರಿ, ಶಿವಕುಮಾರ್, ತಿಪ್ಪೇಸ್ವಾಮಿ ಆರ್., ಗಂಗಾಧರಪ್ಪ ಬಿ., ಮಂಜುಳಮ್ಮ ಪಿ.ಎಂ., ಕೃಷ್ಣಪ್ಪ, ತಿಪ್ಪಮ್ಮ, ರೇಖಾ ಕೆ., ವಿಶೃತ್ ಕುಮಾರ್ ಜಿ.ಟಿ., ಪ್ರವೀಣ ಬೆಳೆಗೆರೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

MORE NEWS

ರಾಷ್ಟ್ರೀಯ ಪುಸ್ತಕ ಮೇಳದಲ್ಲಿ ಇತಿಹಾಸ–ಗಿರಿಜನ ಸಂಸ್ಕೃತಿ ಗ್ರಂಥಗಳಿಗೆ ಭಾರೀ ಬೇಡಿಕೆ

30-12-2025 ರಾಂಚಿ

ರಾಂಚಿಯ ಜಿಲ್ಲಾ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪುಸ್ತಕ ಮೇಳವು ಓದುಗರ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿ...

ನಾಗರಿಕತೆಯ ಉತ್ಕೃಷ್ಟ ವಿಕಾಸಕ್ಕೆ ಪುಸ್ತಕಗಳ ಕೊಡುಗೆ ಅನುಪಮ; ಮಾನಸ

30-12-2025 ಚಿಕ್ಕಮಗಳೂರು

ಚಿಕ್ಕಮಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು ವತಿಯಿಂದ ಇತ...

ಕನ್ನಡ ಸಾಹಿತ್ಯ ಲೋಕಕ್ಕೆ ಕುವೆಂಪು ಕೊಡುಗೆ ಅನನ್ಯ: ಕೆ. ರಾಘವೇಂದ್ರ ರಾವ್

30-12-2025 ಶಿರಹಟ್ಟಿ

ಶಿರಹಟ್ಟಿ: "ಕನ್ನಡ ಸಾಹಿತ್ಯ ಲೋಕಕ್ಕೆ ರಾಷ್ಟ್ರಕವಿ ಕುವೆಂಪು ಅವರ ಕೊಡುಗೆ ಅಪಾರ. ಅವರ ಸಾಹಿತ್ಯಿಕ ಸಾಧನೆಯನ್ನು ಕ...