ಕನ್ನಡದ ಹೆಸರಾಂತ ಲೇಖಕ, ಅನುವಾದಕ ಬುಳಸಾಗರ ಪಾಂಡುರಂಗಯ್ಯ ನಿಧನ

Date: 05-05-2024

Location: ಬೆಂಗಳೂರು


ಕನ್ನಡದ ಹೆಸರಾಂತ ಲೇಖಕ, ಕತೆಗಾರ, ಅನುವಾದಕ ಬುಳಸಾಗರ ಪಾಂಡುರಂಗಯ್ಯ ಅವರು 2024 ಮೇ 04ರಂದು ದಾವಣಗೆರೆಯಲ್ಲಿ ನಿಧನರಾಗಿದ್ದಾರೆ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಕೃತಿ ರಚಿಸಿದ್ದರೂ ಎಲೆಮರೆ ಕಾಯಿಯಂತಿದ್ದ ಪಾಂಡುರಂಗಯ್ಯ ಅವರು ಕರ್ನಾಟಕ ವಿದ್ಯುಚ್ಛಕ್ತಿ ಮಂಡಳಿಯ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. 

ಮಣಿಮೇಖಲೆ (2016 ಮುನ್ನುಡಿ ಡಾ.ಪ್ರಹ್ಲಾದ ಅಗಸನಕಟ್ಟೆ), ಶಂಬೂಕವಧೆ (2018 ಮುನ್ನುಡಿ- ಡಾ. ಲೋಕೇಶ್ ಅಗಸನಕಟ್ಟೆ) ಎಂಬ ಕಥಾಸಂಕಲನಗಳು ಮತ್ತು 'ಗಿಣಿರಾಮ ತಂದ ಮಂತ್ರದ ಮಾವಿನಹಣ್ಣು' ಎಂಬ ಮಕ್ಕಳ ಕಥಾ ಸಂಕಲನವನ್ನು ಪ್ರಕಟಿಸಿದ್ದರು. 

ಪ್ರಚಾರ, ಪ್ರಸಿದ್ಧಿಗಳಿಂದ ದೂರವಿದ್ದು, ಪುಸ್ತಕ ಪ್ರಕಟಣೆಗೂ ತಲೆಕೆಡಿಸಿಕೊಳ್ಳದ ಪಾಂಡುರಂಗಯ್ಯನವರು ಅಪರೂಪದ ಕಥೆಗಾರರು. ಕಥೆ, ಕವನ, ಮಕ್ಕಳ ಸಾಹಿತ್ಯ, ವೈಚಾರಿಕ ಲೇಖನ, ಅನುವಾದ ಹೀಗೆ  ಕಳೆದ ನಾಲ್ಕೈದು ದಶಕಗಳಿಂದ ಅವರು ನಿರಂತರವಾಗಿ ಪ್ರಜಾಮತ, ಪ್ರಜಾವಾಣಿ, ಸುಧಾ, ತರಂಗ, ಮಯೂರ, ತರಳಬಾಳು, ಸಿದ್ಧಗಂಗಾ ಮುಂತಾದ ನಿಯತಕಾಲಿಕಗಳಲ್ಲಿ ಬರೆದರು. ಸಾವಿರಾರು ಪುಟಗಳಷ್ಟಾಗುವ ಅವರ ಬರಹಗಳನ್ನೆಲ್ಲ ಪ್ರಕಟಿಸಿದ್ದರೆ ಹತ್ತಾರು ಪುಸ್ತಕಗಳಾಗುತ್ತಿದ್ದವು.

ದಾವಣಗೆರೆ ನಗರದಲ್ಲಿ ಎರಡು ದಶಕಗಳಿಂದ ವಾಸವಾಗಿದ್ದ ಅವರು ತಮ್ಮ 84ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.

MORE NEWS

ಬರವಣಿಗೆಗೆ ಅನುಭವ ಎಷ್ಟು ಮುಖ್ಯವೋ ಅಧ್ಯಯನವೂ ಅಷ್ಟೇ ಮುಖ್ಯ: ಬರಗೂರು ರಾಮಚಂದ್ರಪ್ಪ

18-05-2024 ಬೆಂಗಳೂರು

ಬೆಂಗಳೂರು: ಇಲ್ಲಿ ಬಿಡುಗಡೆಗೊಂಡ ಮೂರು ಪುಸ್ತಕಗಳು ವಿಭಿನ್ನ ವಿಚಾರಗಳನ್ನು ಒಳಗೊಂಡಿದ್ದರೂ, ಅವೆಲ್ಲವೂ ಸಾಮಾಜಿಕ ಕಾಳಜಿಯ...

ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿನಿಧಿ ರಾಜ್ಯ ಪ್ರಶಸ್ತಿಗಳಿಗೆ ಆಹ್ವಾನ 

18-05-2024 ಬೆಂಗಳೂರು

ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತು ನೀಡುವ 2023ನೇ ಸಾಲಿನಲ್ಲಿ ಪ್ರಕಟವಾದ ಕನ್ನಡ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಪರಿ...

ಅನುಪಮಾ ನಿರಂಜನ ಅವರ ಬಗ್ಗೆ ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ; ಎಚ್.ಎಲ್. ಪುಷ್ಟ

17-05-2024 ಬೆಂಗಳೂರು

ಬೆಂಗಳೂರು: ಕನ್ನಡ ಸಂಘರ್ಷ ಸಮಿತಿಯಿಂದ ಡಾ. ಅನುಪಮಾ ನಿರಂಜನ ಹುಟ್ಟು ಹಬ್ಬದ ಪ್ರಯುಕ್ತ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ...