ಕನ್ನಡಕ್ಕೆ ಹೊಸ ಆಯಾಮವನ್ನು ನೀಡಿದವರು ಗೋರೂರು ರಾಮಸ್ವಾಮಿ ಅಯ್ಯಂಗಾರ್‌: ಹಂಪನಾ

Date: 05-04-2024

Location: ಬೆಂಗಳೂರು


ಬೆಂಗಳೂರು: ಐಬಿಎಚ್‌ ಪ್ರಕಾಶನದಿಂದ ಗೋರೂರು ರಾಮಸ್ವಾಮಿ ಅಯ್ಯಂಗಾರ್‌ ಅವರ 'ಸೋಮದೇವ ಮಹಾಕವಿಯ ಕಥಾಸರಿತ್ಸಾಗರʼ ಕೃತಿಯ ಲೋಕಾರ್ಪಣಾ ಸಮಾರಂಭವನ್ನು 2024 ಏಪ್ರಿಲ್ 05 ಶುಕ್ರವಾರದಂದು ನಗರದಲ್ಲಿ ನಡೆಯಿತು.

ಪುಸ್ತಕ ಲೋಕಾರ್ಪಣೆ ಮಾತನಾಡಿದ ಪ್ರಸಿದ್ಧ ವಿದ್ವಾಂಸ ನಾಡೋಜ ಪ್ರೊ. ಹಂಪ ನಾಗರಾಜಯ್ಯ, "ಯಾರು ತಮ್ಮ ಬದುಕಿನಿಂದ, ಬರವಣಿಗೆಯಿಂದ ಕನ್ನಡಕ್ಕೆ ಹೊಸ ಸಂಘರ್ಷವನ್ನು, ಆಯಾಮವನ್ನು, ಮಹತ್ವವನ್ನು, ವೈಭವವನ್ನು, ವಿಸ್ತಾರವನ್ನು ತಂದುಕೊಟ್ಟರೋ ಅಂತಹ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕೃತಿ ‘ಕಥಾಸರಿತ್ಸಾಗರ’. ಕಥಾಸರಿತ್ಸಾಗರವನ್ನು ಮೊಟ್ಟ ಮೊದಲು ಕನ್ನಡಕ್ಕೆ ಕೊಟ್ಟವರು ಎ.ಆರ್. ಕೃಷ್ಣಶಾಸ್ತ್ರೀ. ನಾನು ಮೊದಲ ಬಾರಿಗೆ ಗೋರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಭೇಟಿ ಮಾಡಿದ್ದೆ ಎಂ.ಆರ್. ಕೃಷ್ಣಶಾಸ್ತ್ರೀಗಳ ಬಳಿಯಲ್ಲಿ. ನಾವೆಲ್ಲರೂ ಅವರ ಶಿಷ್ಯರು ಕೂಡ ಹೌದು. ಅವರ ಬಳಿಯಲ್ಲಿಯೇ ಬಹಳಷ್ಟನ್ನು ಕಲಿತು, ಅರಿತುಕೊಂಡಿದ್ದೇವೆ," ಎಂದರು.

"ಓದುಗರಲ್ಲಿ ಸಾಮಾನ್ಯ ಓದುಗರು ಕೆಲವರಾದರೆ, ಕೆಲವೊಬ್ಬರು ಓದಿನ ಸ್ವಾರಸ್ಯವನ್ನು ಮೆಲುಕು ಹಾಕುವವರು. ಅವರನ್ನು ಸಹೃದಯರು ಎಂದು ಕರೆಯುತ್ತಾರೆ. ಸಹೃದಯರು ಎಲ್ಲವನ್ನೂ ಕೂಡ ಓದುತ್ತಾರೆ," ಎಂದು ತಿಳಿಸಿದರು.

ಕೃತಿ ಕುರಿತು ಮಾತನಾಡಿದ ಎಚ್‌. ಡುಂಡಿರಾಜ್‌, "ಸಂಸ್ಕೃತದಿಂದ ಇಂತಹ ದೊಡ್ಡ ಕೃತಿ ಕನ್ನಡಕ್ಕೆ ಅನುವಾದಗೊಂಡಿರುವುದು ಸುಲಭವಲ್ಲ. ಈ ಕೃತಿಯು ಕತೆಯೊಳಗೆ ಕತೆಗಳನ್ನು ಒಳಗೊಂಡಿದೆ. ಇಲ್ಲಿನ ಅಹಲ್ಯೆಯ ಕತೆಯು ವಿಭಿನ್ನ ತಿರುವುಗಳನ್ನು ಹೊಂದಿದ್ದು, ಇಂದಿನ ಮಹಿಳಾ ಸಮಾಜ ಹಾಗೂ ಅಂದಿನ ಮಹಿಳಾ ಸಮಾಜದ ಸ್ಥಿತಿಗತಿಗಳನ್ನು ಇದರಿಂದ ಅರಿತುಕೊಳ್ಳಬಹುದಾಗಿದೆ," ಎಂದು ಹೇಳಿದರು.

"ಇನ್ನು ಈ ಕೃತಿಯು ಪ್ಯಾಂಟಸಿಯ ಕತೆಗಳನ್ನು ಕೂಡ ಒಳಗೊಂಡಿದೆ. ಆದರೆ ಪ್ರಸ್ತುತ ದಿನಗಳಲ್ಲಿ ವಾಸ್ತವತೆ ಅನ್ನುವುದೇ ಪ್ಯಾಂಟಸಿಗಿಂತ ವಿಭಿನ್ನವಾಗಿದೆ," ಎಂದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೆಫ್ಟಿನೆಂಟ್‌ ಜನರಲ್‌ ಡಿ. ರಘುನಾಥ ಮಾತನಾಡಿ, "ಭಾರತದ ಸಾಹಿತ್ಯ ಪರಂಪರೆಯು ವಿಶೇಷವಾದದ್ದು. ಇಂತಹ ಸಾಹಿತ್ಯ ಪರಂಪರೆ ಮುಂದಿನ ಪೀಳಿಗೆಗೂ ಸಲ್ಲಬೇಕು. ಇಂಹತ ಕೃತಿಗಳು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗುವುದರ ಜೊತೆಗೆ ನಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸುತ್ತದೆ," ಎಂದರು

ಲೇಖಕ ಗೋರೂರು ಗೋವಿಂದರಾಜು ಮಾತನಾಡಿ, "ಸೋಮದೇವ ಮಹಾಕವಿಯ ಕಥಾಸರಿತ್ಸಾಗರ ಬಹಳ ದೊಡ್ಡ ಕೃತಿಯಾಗಿದೆ. ಇದರಲ್ಲಿ 18 ಭಾಗಗಳು, 120 ತರಂಗಗಳು, ಸುಮಾರು 2,16,000 ಶ್ಲೋಕಗಳಿವೆ. ಗದ್ಯದಲ್ಲಿ 66,000 ವಾಕ್ಯಗಳಿವೆ. ಇನ್ನು ಈ ಕೃತಿಯು ಇಂಗ್ಲಿಷ್ ಭಾಷೆಗೂ ತರ್ಜುಮೆಯಾಗಿದೆ," ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಸಂಪೂರ್ಣ ಕಾರ್ಯಕ್ರಮವು ಬುಕ್ ಬ್ರಹ್ಮ ಫೇಸ್ ಬುಕ್ ಪೇಜ್ ಹಾಗೂ ಯೂಟ್ಯೂಬ್ ಗಳಲ್ಲಿ ನೇರಪ್ರಸಾರವಾಯಿತು.

 

MORE NEWS

ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳ ಆಹ್ವಾನ

17-05-2024 ಬೆಂಗಳೂರು

2023ನೇ ಸಾಲಿನ ಮಾತೋಶ್ರೀ ಗಣಪಿ ತಿಪ್ಪಯ್ಯ ಪಟಗಾರ ಸಾಹಿತ್ಯ ಪ್ರಶಸ್ತಿಗೆ ಕಥಾಸಂಕಲನಗಳನ್ನು ಆಹ್ವಾನಿಸಲಾಗಿದೆ. &nb...

ಲೇಖಕಿಯರ ಸಂಘದಿಂದ 2023ನೇ ಸಾಲಿನ ವಿವಿಧ ದತ್ತಿನಿಧಿ ಪ್ರಶಸ್ತಿಗಳಿಗಾಗಿ ಕೃತಿಗಳ ಆಹ್ವಾನ

16-05-2024 ಬೆಂಗಳೂರು

ಬೆಂಗಳೂರು: ಕರ್ನಾಟಕ ಲೇಖಕಿಯರ ಸಂಘದ 2023ನೇ ಸಾಲಿನ ವಿವಿಧ ದತ್ತಿನಿಧಿಗಳ ಪ್ರಶಸ್ತಿಗಳಿಗಾಗಿ ಲೇಖಕಿಯರಿಂದ ಕೃತಿಗಳನ್ನು ...

ಬಸವ ಜಯಂತಿ ಅಂಗವಾಗಿ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

16-05-2024 ಬೆಂಗಳೂರು

ಬೆಂಗಳೂರು: ಬೆಂಗಳೂರಿನ ಬಸವ ಸಮಿತಿಯು ‘ವಿಶ್ವ ಬಸವ ಜಯಂತಿ 2024’ರ ಅಂಗವಾಗಿ ಡಾ. ಅರವಿಂದ ಜತ್ತಿ ಮಾರ್ಗದರ...